ಮಣಿಪಾಲ ಆಸ್ಪತ್ರೆಯಿಂದ ಯಡಿಯೂರಪ್ಪ ಬಿಡುಗಡೆ; ವೈದ್ಯರಿಂದ ಬೀಳ್ಕೊಡುಗೆ

ಬೆಂಗಳೂರು(ಆ. 10): ಒಂಬತ್ತು ದಿನಗಳ ಹಿಂದೆ ಕೋವಿಡ್ ಸೋಂಕಿನಿಂದ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ ಮುಖ್ಯಮಂತ್ರಿಗಳು ಇವತ್ತು ಪರೀಕ್ಷೆ ವರದಿಯಲ್ಲಿ ನೆಗಟಿವ್ ಬಂದ ಹಿನ್ನೆಲೆಯಲ್ಲಿ ಡಿಸ್ಚಾರ್ಜ್ ಆಗಿದ್ದಾರೆ. (ವರದಿ ಮತ್ತು ಫೋಟೋ ಕೃಪೆ: ಕೃಷ್ಣ ಜಿ.ವಿ. / ದೀಪಾ ಬಾಲಕೃಷ್ಣನ್)

First published:

  • 111

    ಮಣಿಪಾಲ ಆಸ್ಪತ್ರೆಯಿಂದ ಯಡಿಯೂರಪ್ಪ ಬಿಡುಗಡೆ; ವೈದ್ಯರಿಂದ ಬೀಳ್ಕೊಡುಗೆ

    ಕೊರೋನಾ ವೈರಸ್ ಸೋಂಕು ಹೊಂದಿ ಆಸ್ಪತ್ರೆಗೆ ದಾಖಲಾಗಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಡಿಸ್ಚಾರ್ಜ್ ಆಗಿದ್ದಾರೆ. ಒಂಬತ್ತು ದಿನಗಳ ಬಳಿಕ ಅವರು ಮಣಿಪಾಲ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

    MORE
    GALLERIES

  • 211

    ಮಣಿಪಾಲ ಆಸ್ಪತ್ರೆಯಿಂದ ಯಡಿಯೂರಪ್ಪ ಬಿಡುಗಡೆ; ವೈದ್ಯರಿಂದ ಬೀಳ್ಕೊಡುಗೆ

    ಇವತ್ತು ಬಂದ ಅವರ ಕೋವಿಡ್ ಪರೀಕ್ಷೆಯ ವರದಿಯಲ್ಲಿ ನೆಗಟಿವ್ ಬಂದ ಹಿನ್ನೆಲೆಯಲ್ಲಿ ವೈದ್ಯರು ಅವರ ಬಿಡುಗಡೆಗೆ ಅನುಮತಿ ನೀಡಿದ್ದಾರೆ.

    MORE
    GALLERIES

  • 311

    ಮಣಿಪಾಲ ಆಸ್ಪತ್ರೆಯಿಂದ ಯಡಿಯೂರಪ್ಪ ಬಿಡುಗಡೆ; ವೈದ್ಯರಿಂದ ಬೀಳ್ಕೊಡುಗೆ

    ಮಣಿಪಾಲ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ವರ್ಗವು ಯಡಿಯೂರಪ್ಪ ಅವರಿಗೆ ಕೈ ಮುಗಿದು ಬೀಳ್ಕೊಟ್ಟರು.

    MORE
    GALLERIES

  • 411

    ಮಣಿಪಾಲ ಆಸ್ಪತ್ರೆಯಿಂದ ಯಡಿಯೂರಪ್ಪ ಬಿಡುಗಡೆ; ವೈದ್ಯರಿಂದ ಬೀಳ್ಕೊಡುಗೆ

    ಸಿಎಂ ಇವತ್ತು ಡಿಸ್ಚಾರ್ಜ್ ಆಗುವ ಮಾಹಿತಿ ಇದ್ದ ಹಿನ್ನೆಲೆಯಲ್ಲಿ ಆಸ್ಪತ್ರೆಯ ಹೊರಗೆ ಜನರು ಜಮಾಯಿಸಿದ್ದರು.

    MORE
    GALLERIES

  • 511

    ಮಣಿಪಾಲ ಆಸ್ಪತ್ರೆಯಿಂದ ಯಡಿಯೂರಪ್ಪ ಬಿಡುಗಡೆ; ವೈದ್ಯರಿಂದ ಬೀಳ್ಕೊಡುಗೆ

    ಒಂಬತ್ತು ದಿನಗಳ ಹಿಂದೆ ಯಡಿಯೂರಪ್ಪ ಅವರಿಗೆ ಕೊರೋನಾ ಸೋಂಕು ದೃಢಪಟ್ಟು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದರು.

    MORE
    GALLERIES

  • 611

    ಮಣಿಪಾಲ ಆಸ್ಪತ್ರೆಯಿಂದ ಯಡಿಯೂರಪ್ಪ ಬಿಡುಗಡೆ; ವೈದ್ಯರಿಂದ ಬೀಳ್ಕೊಡುಗೆ

    ಬಿಡುಗಡೆಯಾದ ಬಳಿಕ ಮನೆಯಲ್ಲಿ ಕೆಲ ದಿನ ಕ್ವಾರಂಟೈನ್ ಇರಬೇಕೆಂದು ವೈದ್ಯರು ಸಲಹೆ ನೀಡಿದ್ದಾರೆ.

    MORE
    GALLERIES

  • 711

    ಮಣಿಪಾಲ ಆಸ್ಪತ್ರೆಯಿಂದ ಯಡಿಯೂರಪ್ಪ ಬಿಡುಗಡೆ; ವೈದ್ಯರಿಂದ ಬೀಳ್ಕೊಡುಗೆ

    ನಿಯಮದ ಪ್ರಕಾರ ಕನಿಷ್ಠ 7 ದಿನಗಳ ಕಾಲ ಕ್ವಾರಂಟೈನ್ ಇರಬೇಕು. ಸಾಂವಿಧಾನಿಕ ಹುದ್ದೆ ಹೊಂದಿರುವವರು ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಕ್ವಾರಂಟೈನ್​ಗೆ ಒಳಪಡುವುದರಿಂದ ವಿನಾಯಿತಿ ಹೊಂದಿರುತ್ತಾರೆ.

    MORE
    GALLERIES

  • 811

    ಮಣಿಪಾಲ ಆಸ್ಪತ್ರೆಯಿಂದ ಯಡಿಯೂರಪ್ಪ ಬಿಡುಗಡೆ; ವೈದ್ಯರಿಂದ ಬೀಳ್ಕೊಡುಗೆ

    ಯಡಿಯೂರಪ್ಪ ಅವರು ತಮ್ಮ ಕಾವೇರಿ ನಿವಾಸದಲ್ಲಿ 2-3 ದಿನಗಳ ಕಾಲ ವಿಶ್ರಾಂತಿ ಪಡೆದು ಆ ಬಳಿಕ ಎಂದಿನಂತೆ ಕೆಲಸಕ್ಕೆ ಹಾಜರಾಗಲಿದ್ದಾರೆ.

    MORE
    GALLERIES

  • 911

    ಮಣಿಪಾಲ ಆಸ್ಪತ್ರೆಯಿಂದ ಯಡಿಯೂರಪ್ಪ ಬಿಡುಗಡೆ; ವೈದ್ಯರಿಂದ ಬೀಳ್ಕೊಡುಗೆ

    ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆಯಂದು ಸಿಎಂ ಅವರು ಧ್ವಜಾರೋಹಣ ಕೂಡ ಮಾಡಲಿದ್ದಾರೆ.

    MORE
    GALLERIES

  • 1011

    ಮಣಿಪಾಲ ಆಸ್ಪತ್ರೆಯಿಂದ ಯಡಿಯೂರಪ್ಪ ಬಿಡುಗಡೆ; ವೈದ್ಯರಿಂದ ಬೀಳ್ಕೊಡುಗೆ

    ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿದ್ದೇನೆ. ನಿಮ್ಮೆಲ್ಲರ ಶುಭಹಾರೈಕೆಗಳಿಂದ ಗುಣಮುಖನಾಗಿದ್ದೇನೆ. ವೈದ್ಯರ ಸಲಹೆಯಂತೆ ಇನ್ನು ಕೆಲವು ದಿನ ಮನೆಯಲ್ಲೇ ಕ್ವಾರಂಟೈನ್ನಲ್ಲಿ ಇರಲಿದ್ದೇನೆ ಎಂದು ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

    MORE
    GALLERIES

  • 1111

    ಮಣಿಪಾಲ ಆಸ್ಪತ್ರೆಯಿಂದ ಯಡಿಯೂರಪ್ಪ ಬಿಡುಗಡೆ; ವೈದ್ಯರಿಂದ ಬೀಳ್ಕೊಡುಗೆ

    ಆತ್ಮವಿಶ್ವಾಸ ಹಾಗೂ ವೈದ್ಯಕೀಯ ಚಿಕಿತ್ಸೆಗಳಿಂದ ಕೊರೋನಾ ಗೆಲ್ಲಬಹುದು. ಆತಂಕ ಬೇಡ, ಮುನ್ನೆಚ್ಚರಿಕೆ ಇರಲಿ ಎಂಬ ಸಂದೇಶವನ್ನು ಯಡಿಯೂರಪ್ಪ ನೀಡಿದ್ದಾರೆ.

    MORE
    GALLERIES