ದೇಶದಾದ್ಯಂತ ಮಹಾಮಾರಿ ಕೊರೋನಾ ವ್ಯಾಪಕವಾಗಿ ಹರಡುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೊರೋನಾ ಸೋಂಕನ್ನು ತಡೆಗಟ್ಟುವ ಸಲುವಾಗಿ ಏ.14ರವರೆಗೆ ಲಾಕ್ ಡೌನ್ ಆದೇಶವನ್ನು ಹೊರಡಿಸಲಾಗಿದೆ. ಜನರು ಮನೆಯಿಂದ ಹೊರ ಬಾರದೆ ಮನೆಯಲ್ಲಿಯೇ ಕುಳಿತು ಎಚ್ಚರಿಕೆ ವಹಿಸುವಂತೆ ತಿಳಿಸಿದೆ.
2/ 10
ಡೆಡ್ಲಿ ವೈರಸ್ ಹರಡದಂತೆ ಕೇಂದ್ರ ಸರ್ಕಾರ ಹೊರಡಿಸಿದ ಲಾಕ್ ಡೌನ್ ಆದೇಶ ಉತ್ತಮವಾಗಿದ್ದರು. ಇನ್ನು ಕೆಲವರ ಪಾಲಿಗೆ ಇದು ಅತ್ಯಂತ ಘಾತಕವಾಗಿದೆ.
3/ 10
ದೇಶದ ಯಾವುದೋ ಮೂಲೆಯಿಂದ ಇನ್ಯಾವುದೋ ಮೂಲೆಗೆ ದಿನಗೂಲಿ ನೌಕರರಾಗಿ ತೆರಳಿದ್ದವರು ಈಗ ಅಲ್ಲಿರಲೂ ಆಗದೆ, ಹಿಂತಿರುಗಲೂ ಆಗದೆ ಪರದಾಡುತ್ತಿದ್ದಾರೆ.
4/ 10
ಸಿಕ್ಕಿಂ ರಾಜ್ಯದಲ್ಲಿ ಅಂತಹ ಅನೇಕ ದಿನಗೂಲಿ ನೌಕರರು ಈ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ.
5/ 10
ಅಲ್ಲಿನ ದಿನಗೂಲಿ ನೌಕಕರ ಪರಿಸ್ಥಿತಿಯನ್ನು ಕಂಡ ಭಾರತ ಫುಟ್ ಬಾಲ್ ತಂಡದ ಮಾಜಿ ನಾಯಕ ಭೈಚುಂಗ್ ಭುಟಿಯ ನಾಲ್ಕೂವರೆ ಮಹಡಿಯ ತಮ್ಮ ಮನೆಯನ್ನು ಅವರಿಗೆ ವಾಸಕ್ಕೆ ಬಿಟ್ಟುಕೊಟ್ಟಿದ್ದಾರೆ.
6/ 10
ದೇಶ ಲಾಕ್ ಡೌನ್ ಆದ ಹಿನ್ನಲೆಯಲ್ಲಿ ಸಾರಿಗೆ ಸಂಪರ್ಕಗಳು ಬಂದ್ ಆಗಿವೆ. ಮತ್ತೊಂದಡೆ ಉಳಿದುಕೊಳ್ಳಲು ಸರಿಯಾದ ಸೂರು ಇಲ್ಲದೆ, ತಿನ್ನಲು ಆಹಾರ, ದುಡಿಮೆ ಇಲ್ಲದೆ ಪರಿಸ್ಥಿತಿಯನ್ನು ಎದುರಿಸುತ್ತಿದ್ದರು. ಇವರ ನೋವಿನ ಕಥೆಯನ್ನು ಕೇಳಿ ಭೈಚುಂಗ್ ಭುಟಿಯ ತಮ್ಮ ಮನೆಯನ್ನು ವಾಸಸ್ಥಾನವಾಗಿ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
7/ 10
ಇದಲ್ಲದೆ, ತಮ್ಮ ಸಹ ಮಾಲಿಕತ್ವದ ಸಿಕ್ಕಿಂ ಫೇಸ್ಬುಕ್ ಖಾತೆಯಲ್ಲಿ ಈ ಬಗ್ಗೆ ಪ್ರಕಟನೆಯನ್ನು ಹಾಕಿದ್ದಾರೆ. ತಿನ್ನಲು, ಅನ್ನವಿಲ್ಲದೆ, ಇರಲು ಜಾಗವಿಲ್ಲದೆ ಪರದಾಡುತ್ತಿರುವ ದಿನಗೂಲಿಗಳು ಇಲ್ಲಿ ಸಂಪರ್ಕಿಸಿ ಎಂದು ಹೇಳಿದ್ದಾರೆ.
8/ 10
ಇನ್ನು ಭುಟಿಯ ಸಿಕ್ಕಿಂ ರಾಜಧಾಬಿ ಗ್ಯಾಂಗ್ಟಕ್ನ ತಡಾಂಗ್ ಲಮ್ಸೆಯಲ್ಲಿ ನೂತನ ಮನೆಯೊಂದನ್ನು ಕಟ್ಟಿದ್ದಾರೆ. ನಾಲ್ಕೂವರೆ ಮಹಡಿಯ ಮನೆಯಾಗಿದ್ದು, ಈಗಾಗಲೇ ಅನೇಕ ದಿನಗೂಲಿ ನೌಕಕರು ಅಲ್ಲಿ ಆಶ್ರಯ ಪಡೆಯುತ್ತಿದ್ದಾರೆ.
9/ 10
ಇನ್ನು ಭೈಚುಂಗ್ ಭುಟಿಯ ಅವರ ಮನೆಯಲ್ಲಿ ಆಶ್ರಿತರ ಸಂಖ್ಯೆ ಕೂಡ ಏರಿಕೆಯಾಗುತ್ತಿದೆ. ಮತ್ತೊಂದೆಡೆ ಊಟ, ವೈದ್ಯಕೀಯ ಪರೀಕ್ಷೆಗೂ ವ್ಯವಸ್ಥೆಯಾಗಬೇಕಿದೆ. ಅದಕ್ಕೆ ಭುಟಿಯಾ ಸರ್ಕಾರಿ ಸಂಸ್ಥೆಗಳ ಜೊತೆ ಮಾತನಾಡಿದ್ದಾರೆ. ಇತರೆ ಜನರ ನೆರವನ್ನು ಕೇಳಿದ್ದಾರೆ.
10/ 10
ಈವರೆಗೆ ಸಿಕ್ಕಿಂನಲ್ಲಿ ಕೊರೋನಾ ಪ್ರಕರಣಗಳು ಕಂಡುಬಂದಿಲ್ಲ. ಅಲ್ಲಿನ ಸರ್ಕಾರ ಕೂಡ ಕೊರೋನಾ ಸೋಂಕು ತಮ್ಮ ರಾಜ್ಯಕ್ಕೆ ಧಾವಿಸದಂತೆ ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಂಡಿದೆ.