ಭಾರೀ ಮೊತ್ತ ದೇಣಿಗೆ ನೀಡಿದ್ದರೂ ಈ ವಿಷಯ ವಿರಾಟ್ ಕೊಹ್ಲಿ ಮುಚ್ಚಿಟ್ಟಿದ್ದೇಕೆ?

First published:

  • 113

    ಭಾರೀ ಮೊತ್ತ ದೇಣಿಗೆ ನೀಡಿದ್ದರೂ ಈ ವಿಷಯ ವಿರಾಟ್ ಕೊಹ್ಲಿ ಮುಚ್ಚಿಟ್ಟಿದ್ದೇಕೆ?

    ಕೊರೋನಾ ವೈರಸ್​ನಿಂದಾಗಿ ಇಡೀ ವಿಶ್ವವೇ ತಲ್ಲಣಕ್ಕೊಳಗಾಗಿದೆ. ಈಗಾಗಲೇ ಈ ಮಹಾಮಾರಿಗೆ 40 ಸಾವಿರಕ್ಕೂ ಅಧಿಕ ಮಂದಿ ಪ್ರಾಣ ತೆತ್ತಿದ್ದಾರೆ. ಭಾರತದಲ್ಲೂ ಈ ಸೋಂಕಿಗೆ 35 ಕ್ಕೂ ಹೆಚ್ಚು ಜನರು ಬಲಿಯಾಗಿದ್ದು, ಸಾವಿರಾರು ಜನರಲ್ಲಿ ಈ ಸೋಂಕು ಕಾಣಿಸಿಕೊಂಡಿದೆ.

    MORE
    GALLERIES

  • 213

    ಭಾರೀ ಮೊತ್ತ ದೇಣಿಗೆ ನೀಡಿದ್ದರೂ ಈ ವಿಷಯ ವಿರಾಟ್ ಕೊಹ್ಲಿ ಮುಚ್ಚಿಟ್ಟಿದ್ದೇಕೆ?

    ಹೀಗಾಗಿಯೇ ಕೋವಿಡ್-19 ವಿರುದ್ಧದ ಹೋರಾಟಕ್ಕೆ ಸರ್ಕಾರದೊಂದಿಗೆ ಕೈ ಜೋಡಿಸುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಮನವಿ ಮಾಡಿಕೊಂಡಿದ್ದರು.

    MORE
    GALLERIES

  • 313

    ಭಾರೀ ಮೊತ್ತ ದೇಣಿಗೆ ನೀಡಿದ್ದರೂ ಈ ವಿಷಯ ವಿರಾಟ್ ಕೊಹ್ಲಿ ಮುಚ್ಚಿಟ್ಟಿದ್ದೇಕೆ?

    ಅದರಂತೆ ಸಿನಿಮಾ ತಾರೆಯರು, ಕ್ರೀಡಾ ಪಟುಗಳು ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡಿ ಸರ್ಕಾರಕ್ಕೆ ಬೆನ್ನೆಲುಬಾಗಿ ನಿಂತಿದ್ದರು. ಅದರಲ್ಲೂ ಕೊರೋನಾ ಪರಿಹಾರ ನಿಧಿಗೆ ಭಾರೀ ಮೊತ್ತವನ್ನು ಧನ ಸಹಾಯ ಮಾಡುವ ಮೂಲಕ ಕೆಲ ಕ್ರಿಕೆಟರುಗಳು ಗಮನ ಸೆಳೆದಿದ್ದರು.

    MORE
    GALLERIES

  • 413

    ಭಾರೀ ಮೊತ್ತ ದೇಣಿಗೆ ನೀಡಿದ್ದರೂ ಈ ವಿಷಯ ವಿರಾಟ್ ಕೊಹ್ಲಿ ಮುಚ್ಚಿಟ್ಟಿದ್ದೇಕೆ?

    ಕ್ರಿಕೆಟ್‌ ದಿಗ್ಗಜರಾದ ಸಚಿನ್‌ ತೆಂಡುಲ್ಕರ್‌, ಸೌರವ್‌ ಗಂಗೂಲಿ, ಸುರೇಶ್‌ ರೈನಾ, ಅಜಿಂಕ್ಯ ರಹಾನೆ, ರೋಹಿತ್ ಶರ್ಮಾ ಸಹಿತ ಹಲವಾರು ಆಟಗಾರರು ತಮ್ಮ ಕೈಯಿಂದಾಗುವ ಸಹಾಯವನ್ನು ಮಾಡಿದ್ದರು.

    MORE
    GALLERIES

  • 513

    ಭಾರೀ ಮೊತ್ತ ದೇಣಿಗೆ ನೀಡಿದ್ದರೂ ಈ ವಿಷಯ ವಿರಾಟ್ ಕೊಹ್ಲಿ ಮುಚ್ಚಿಟ್ಟಿದ್ದೇಕೆ?

    ಅದರಲ್ಲೂ ಭಾರತೀಯ ಕ್ರಿಕೆಟ್​-ಸಿನಿರಂಗದ ಸೆಲೆಬ್ರಿಟಿ ಜೋಡಿ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ದೇಣಿಗೆ ವಿಷಯದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿದ್ದರು ಎಂಬುದು ತಿಳಿದು ಬಂದಿದೆ.

    MORE
    GALLERIES

  • 613

    ಭಾರೀ ಮೊತ್ತ ದೇಣಿಗೆ ನೀಡಿದ್ದರೂ ಈ ವಿಷಯ ವಿರಾಟ್ ಕೊಹ್ಲಿ ಮುಚ್ಚಿಟ್ಟಿದ್ದೇಕೆ?

    ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ನಾನು ಮತ್ತು ಅನುಷ್ಕಾ ದೇಣಿಗೆ ನೀಡಿರುವುದಾಗಿ ತಿಳಿಸಿದ ವಿರಾಟ್ ಕೊಹ್ಲಿ ನೀವು ಕೂಡ ಕೈ ಜೋಡಿಸುವಂತೆ ಕೇಳಿಕೊಂಡಿದ್ದರು. ಆದರೆ ಎಲ್ಲೂ ಕೂಡ ಕೊಹ್ಲಿ ತಾವು ನೀಡಿರುವ ಮೊತ್ತವನ್ನು ಪ್ರಕಟಿಸಿರಲಿಲ್ಲ.

    MORE
    GALLERIES

  • 713

    ಭಾರೀ ಮೊತ್ತ ದೇಣಿಗೆ ನೀಡಿದ್ದರೂ ಈ ವಿಷಯ ವಿರಾಟ್ ಕೊಹ್ಲಿ ಮುಚ್ಚಿಟ್ಟಿದ್ದೇಕೆ?

    ಹೀಗಾಗಿ ಅತೀ ಹೆಚ್ಚು ಆದಾಯ ಪಡೆಯುವ ಆಟಗಾರ ವಿರಾಟ್ ಕೊಹ್ಲಿ ಎಷ್ಟು ಮೊತ್ತ ದೇಣಿಗೆ ನೀಡಿದ್ದಾರೆ ಎಂಬ ಸಹಜ ಕುತೂಹಲ ಅಭಿಮಾನಿಗಳಲ್ಲಿತ್ತು. ಇದೀಗ ಈ ಕುತೂಹಲಕ್ಕೆ ಉತ್ತರ ಸಿಕ್ಕಿದೆ.

    MORE
    GALLERIES

  • 813

    ಭಾರೀ ಮೊತ್ತ ದೇಣಿಗೆ ನೀಡಿದ್ದರೂ ಈ ವಿಷಯ ವಿರಾಟ್ ಕೊಹ್ಲಿ ಮುಚ್ಚಿಟ್ಟಿದ್ದೇಕೆ?

    ಮೂಲಗಳ ಪ್ರಕಾರ ವಿರುಷ್ಕಾ ಜೋಡಿ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಒಟ್ಟಾರೆ 3 ಕೋಟಿ ರೂ. ಧನ ಸಹಾಯ ಮಾಡಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.

    MORE
    GALLERIES

  • 913

    ಭಾರೀ ಮೊತ್ತ ದೇಣಿಗೆ ನೀಡಿದ್ದರೂ ಈ ವಿಷಯ ವಿರಾಟ್ ಕೊಹ್ಲಿ ಮುಚ್ಚಿಟ್ಟಿದ್ದೇಕೆ?

    ಆದರೆ ಇಷ್ಟೊಂದು ದೊಡ್ಡ ಮೊತ್ತವನ್ನು ನೀಡಿದರೂ ವಿರಾಟ್ ಕೊಹ್ಲಿ ಅದನ್ನು ಬಹಿರಂಗ ಪಡಿಸದಿರಲು ಕಾರಣವೇನು ಎಂದು ಹುಡುಕುತ್ತಾ ಹೋದರೆ ಸಿಗುವ ಉತ್ತರ ಧೋನಿ ವಿವಾದ.

    MORE
    GALLERIES

  • 1013

    ಭಾರೀ ಮೊತ್ತ ದೇಣಿಗೆ ನೀಡಿದ್ದರೂ ಈ ವಿಷಯ ವಿರಾಟ್ ಕೊಹ್ಲಿ ಮುಚ್ಚಿಟ್ಟಿದ್ದೇಕೆ?

    ಹೌದು, ಕೆಲ ದಿನಗಳ ಹಿಂದೆಯಷ್ಟೇ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕೊರೋನಾ ವಿರುದ್ಧದ ಹೋರಾಟಕ್ಕೆ ಪುಣೆ ಮೂಲದ ಸರ್ಕಾರೇತರ ಸಂಘ ಸಂಸ್ಥೆಗೆ 1 ಲಕ್ಷ ರೂ. ನೀಡಿದ್ದರು.

    MORE
    GALLERIES

  • 1113

    ಭಾರೀ ಮೊತ್ತ ದೇಣಿಗೆ ನೀಡಿದ್ದರೂ ಈ ವಿಷಯ ವಿರಾಟ್ ಕೊಹ್ಲಿ ಮುಚ್ಚಿಟ್ಟಿದ್ದೇಕೆ?

    ಕೋಟ್ಯಾಂತರ ರೂ.ಗಳ ಒಡೆಯನಾಗಿದ್ದರೂ ಸಣ್ಣ ಮೊತ್ತ ದೇಣಿಗೆ ನೀಡಿರುವುದರ ಬಗ್ಗೆ ಧೋನಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು. ಅಲ್ಲದೆ ಈ ವಿಷಯ ವಿವಾದಕ್ಕೂ ಕಾರಣವಾಗಿತ್ತು.

    MORE
    GALLERIES

  • 1213

    ಭಾರೀ ಮೊತ್ತ ದೇಣಿಗೆ ನೀಡಿದ್ದರೂ ಈ ವಿಷಯ ವಿರಾಟ್ ಕೊಹ್ಲಿ ಮುಚ್ಚಿಟ್ಟಿದ್ದೇಕೆ?

    ಇಂತಹ ವಿವಾದದಿಂದ ದೂರವಿರಲು ಕೊಹ್ಲಿ- ಅನುಷ್ಕಾ ಜೋಡಿ ತಾವು ನೀಡಿರುವ ದೇಣಿಗೆ ಮೊತ್ತವನ್ನು ಬಹಿರಂಗ ಪಡಿಸಲಿಲ್ಲ ಎನ್ನಲಾಗುತ್ತಿದೆ. ಹಾಗೆಯೇ ಧನ ಸಹಾಯದ ವಿಷಯದಿಂದ ಪ್ರಚಾರ ಪಡೆಯದಿರಲು ಇಬ್ಬರು ನಿರ್ಧರಿಸಿದ್ದರು ಎಂದು ಹೇಳಲಾಗಿದೆ.

    MORE
    GALLERIES

  • 1313

    ಭಾರೀ ಮೊತ್ತ ದೇಣಿಗೆ ನೀಡಿದ್ದರೂ ಈ ವಿಷಯ ವಿರಾಟ್ ಕೊಹ್ಲಿ ಮುಚ್ಚಿಟ್ಟಿದ್ದೇಕೆ?

    ಒಟ್ಟಿನಲ್ಲಿ ಯಾರೇ ಎಷ್ಟೇ ನೀಡಿದರೂ ಕೊರೋನಾ ಹೋರಾಟಕ್ಕೆ ಕ್ರೀಡಾಪಟುಗಳು, ಖ್ಯಾತನಾಮರು ಕೈಜೋಡಿಸುತ್ತಿರುವುದು ಶ್ಲಾಘನೀಯ.

    MORE
    GALLERIES