Pooja Hegde: ಸಿಹಿ ಸುದ್ದಿ ಕೊಟ್ಟ ಕರಾವಳಿ ಬೆಡಗಿ ಪೂಜಾ ಹೆಗ್ಡೆ: ಕೋರೋನಾಗೆ ಒದ್ದು ಓಡಿಸಿದೆ ಎಂದ ನಟಿ
ರಾಧೆ ಶ್ಯಾಮ್ ಸಿನಿಮಾ ಖ್ಯಾತಿಯ ನಟಿ ಪೂಜಾ ಹೆಗ್ಡೆ ಅವರಿಗೆ ಕಳೆದ ಕೆಲವು ದಿನಗಳ ಹಿಂದೆ ಕೊರೋನಾ ಪಾಸಿಟಿವ್ ಆಗಿತ್ತು. ಮನೆಯಲ್ಲೇ ಕ್ವಾರಂಟೈನ್ ಆಗಿದ್ದ ನಟಿ, ಅಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಈಗ ಪೂಜಾ ಅವರಿಗೆ ಮತ್ತೆ ಕೊರೋನಾ ಪರೀಕ್ಷೆ ಮಾಡಿಸಲಾಗಿದ್ದು ವರದಿಯಲ್ಲಿ ನೆಗೆಟಿವ್ ಅಂತ ಬಂದಿದೆಯಂತೆ. (ಚಿತ್ರಗಳು ಕೃಪೆ: ಪೂಜಾ ಹೆಗ್ಡೆ ಇನ್ಸ್ಟಾಗ್ರಾಂ ಖಾತೆ)
ಕೊರೋನಾದಿಂದಾಗಿ ಮನೆಯಲ್ಲೇ ಕ್ವಾರಂಟೈನ್ ಆಗಿರುವ ಪೂಜಾ ಹೆಗ್ಡೆ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ.
2/ 7
ಕಳೆದ ಕೆಲವು ದಿನಗಳ ಹಿಂದೆ ಪೂಜೆ ಹೆಗ್ಡೆ ಅವರಿಗೆ ಕೊರೋನಾ ಸೋಂಕಾಗಿತ್ತು. ಈ ಬಗ್ಗೆ ನಟಿ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು.
3/ 7
ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಾ ಕ್ವಾರಂಟೈನ್ನಲ್ಲಿ ಇಷ್ಟವಾದ ಕೆಲಸಗಳನ್ನು ಮಾಡುತ್ತಾ ಕಾಲ ಕಳೆಯುತ್ತಿದ್ದರು ಪೂಜಾ ಹೆಗ್ಡೆ.
4/ 7
ಈಗ ಪೂಜಾ ಹೆಗ್ಡೆ ಕೊರೋನಾ ಸೋಂಕಿನಿಂದ ಸಂಪೂರ್ಣವಾಗಿ ಗುಮುಖರಾಗಿದ್ದಾರಂತೆ.
5/ 7
ಕೊರೋನಾಗೆ ಒದ್ದು ಓಡಿಸಿದೆ ಎಂದು ಖುಷಿಯಿಂದ ತಮಗೆ ನೆಗಟಿವ್ ಆಗಿದೆ ಎಂದು ಖುಷಿಯಿಂದ ಹಂಚಿಕೊಂಡಿದ್ದಾರೆ ಪೂಜಾ.
6/ 7
ಹೌದು, ತನ್ನ ಆರೋಗ್ಯಕ್ಕಾಗಿ ಪ್ರಾರ್ಥಿಸಿದ ಹಾಗೂ ನನಗೆ ಪ್ರೀತಿಯಿಂದ ಸಂದೇಶಗಳನ್ನ ಕಳುಹಿಸಿದವರಿಗೆ ಧನ್ಯವಾದ ತಿಳಿಸಿದ್ದಾರೆ ನಟಿ.
7/ 7
ನಟಿಯ ಖುಷಿಯಲ್ಲಿ ಅಭಿಮಾನಿಗಳೂ ಸಹ ಭಾಗಿಯಾಗುತ್ತಿದ್ದು, ಖುಷಿಯಿಂದ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. ಅಷ್ಟೇಅಲ್ಲ ಕರಣ್ ಜೋಹರ್, ಜಾಕ್ವೆಲಿನ್ ಫರ್ನಾಂಡಿಸ್ ಹಾಗೂ ವಸ್ತ್ರ ವಿನ್ಯಾಸಕ ಮನೀಷ್ ಮಲ್ಹೋತ್ರ ಸಹ ಪೂಜಾ ಅವರ ಖುಷಿಯಲ್ಲಿ ಭಾಗಿಯಾಗಿದ್ದಾರೆ.