Dhananjaya: ಧನಂಜಯ್ ಸೇರಿದಂತೆ ಮನೆಯಲ್ಲಿದ್ದ 12 ಮಂದಿಗೆ ಕೋವಿಡ್: ಕೊರೋನಾ ಗೆದ್ದ ಅನುಭವ ಹಂಚಿಕೊಂಡ ಡಾಲಿ..!
ನಟ ಧನಂಜಯ್ ಸಹ ಕೊರೋನಾ ಸೋಂಕಿನಿಂದ ಬಳಲಿದ್ದು, ಈಗ ಚೇತರಿಸಿಕೊಂಡಿದ್ದಾರೆ. ಹೌದು, ಕೇವಲ ಧನಂಜಯ್ ಮಾತ್ರವಲ್ಲ ಅವರ ಮನೆಯಲ್ಲಿ ಅವರಿಗೂ ಸೇರಿದಂತೆ 12 ಮಂದಿಗೆ ಕೋವಿಡ್ ಪಾಸಿಟಿವ್ ಆಗಿತ್ತಂತೆ. ಎಲ್ಲರೂ ಸಹ ಕೊರೋನಾ ಗೆದ್ದಿದ್ದಾರೆ. (ಚಿತ್ರಗಳು ಕೃಪೆ: ಧನಂಜಯ್ ಇನ್ಸ್ಟಾಗ್ರಾಂ ಖಾತೆ)
ಸಾಮಾಜಿಕ ಜಾಲತಾಣದಲ್ಲಿ ಧನಂಜಯ್ ಅವರ ವಿಡಿಯೋ ಒಂದು ಹರಿದಾಡುತ್ತಿದ್ದು, ಅದರಲ್ಲಿ ಅವರಿಗೆ ಕೊರೋನಾ ಪಾಸಿಟಿವ್ ಆಗಿದ್ದ ವಿಷಯ ತಿಳಿದಿದೆ.
2/ 6
ಹೌದು, ನಟ ಧನಂಜಯ್ ಅವರಿಗೂ ಕೊರೋನಾ ಪಾಸಿಟಿವ್ ಆಗಿತ್ತಂತೆ. ಒಂಧು ತಿಂಗಳ ಕಾಲ ತಮ್ಮ ಹಳ್ಳಿಯಲ್ಲಿದ್ದು, ಕೊರೋನಾ ಗೆದ್ದಿರುವ ನಟ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
3/ 6
ಮನೆಯವರೊಂದಿಗೆ ಅರಸಿಕೆರೆಯಲ್ಲಿದ್ದ ಧನಂಜಯ್ ಅವರಿಗೆ ಮೊದಲು ಕೊರೋನಾ ಪಾಸಿಟಿವ್ ಆಗಿತ್ತಂತೆ. ನಂತರ ಮನೆಯಲ್ಲಿ ಉಳಿದವರಿಗೂ ಪಾಸಿಟಿವ್ ಆಗಿತ್ತಂತೆ.
4/ 6
ಮನೆಯವರು ಕೊರೋನಾ ಲಸಿಕೆ ಹಾಕಿಸಿಕೊಂಡಿದ್ದರಿಂದ ಯಾರಿಗೂ ಹೆಚ್ಚಿನ ತೊಂಧರೆಯಾಗಲಿಲ್ಲ ಎಂದು ಧನಂಜಯ್ ಹೇಳಿಕೊಂಡಿದ್ದಾರೆ.
5/ 6
ವ್ಯಾಕ್ಸಿನ್ ಹಾಕಿಸಿಕೊಳ್ಳುವುದು ಒಂದು ಕಡೆಯಾದರೆ, ಕೊರೋನಾ ಬಂದಾಗ ಧೈರ್ಯವಾಗಿ ಎದುರಿಸಬೇಕು. ಕೊರೋನಾ ಸಹ ಬೇರೆ ಕಾಯಿಲೆಗಳಂತೆ ಒಂದು ರೋಗ. ಸಾಮಾಜಿಕ ಅಂತರ ಕಾಯ್ದುಕೊಂಡು ಅನಗತ್ಯವಾಗಿ ಓಡಾಡದೆ ಇದ್ದರೆ ಅದೇ ಅದಕ್ಕೆ ಚಿಕಿತ್ಸೆ ಎಂದಿದ್ದಾರೆ ಡಾಲಿ.
6/ 6
ಮನೆಯಲ್ಲಿ ಒಬ್ಬರಿಗೆ ಕೊರೋನಾ ಲಕ್ಷಣಗಳು ಕಾಣಿಸಿಕೊಂಡ ಕೂಡಲೇ ಎಲ್ಲರೂ ಹೋಗಿ ಪರೀಕ್ಷೆ ಮಾಡಿಸಿಕೊಂಡೆದು. ನಂತರ ಅಗತ್ಯ ಚಿಕಿತ್ಸೆ ಪಡೆಯುವ ಮೂಲಕ 12 ಮಂದಿ ಕೊರೋನಾ ಗೆದ್ದಿದ್ದೇವೆ ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ.