ಸ್ಯಾಂಡಲ್ವುಡ್ ನಟ ಧ್ರುವ ಸರ್ಜಾ ಹಾಗೂ ಪತ್ನಿ ಪ್ರೇರಣಾರಿಗೆ ಮಹಾಮಾರಿ ಕೊರೋನಾ ಸೋಂಕು ತಗುಲಿತ್ತು. ಈ ಬಗ್ಗೆ ಧ್ರುವ ಸರ್ಜಾ ಟ್ವೀಟ್ ಮಾಡುವ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದರು.
2/ 12
ಇದೀಗ ನಟ ಧ್ರುವ ಸರ್ಜಾ ಹಾಗೂ ಪತ್ನಿ ಪ್ರೇರಣಾ ಕೊರೋನಾ ಸೋಂಕಿನಿಂದ ಗುಣಮುಖರಾಗಿದ್ದಾರೆ. ಈ ವಿಚಾರವನ್ನು ಟ್ವೀಟ್ ಮಾಡುವ ಮೂಲಕ ಹೇಳಿಕೊಂಡಿದ್ದಾರೆ.
3/ 12
ಧ್ರುವ ಸರ್ಜಾ ಅವರ ಟ್ವೀಟ್ ಗಮನಿಸಿದ ಅಭಿಮಾನಿಗಳ ಮೊಗದಲ್ಲಿ ಮಂದಹಾಸ ಮೂಡಿದೆ. ಅನೇಕರು ಈ ವಿಚಾರನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ. ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.
4/ 12
ಟ್ವೀಟ್ನಲ್ಲಿ ಧ್ರುವ ಸರ್ಜಾ ‘ನನ್ನ ಹೆಂಡತಿ ಮತ್ತು ನನಗೆ ಕೊರೋನಾ ನೆಗೆಟಿವ್ ಎಂದು ವರದಿ ಬಂದಿದೆ. ಎಲ್ಲವೂ ನಿಮ್ಮ ಪ್ರಾರ್ಥನೆಯಿಂದಾಗಿ ಮತ್ತು ಹೆಚ್ಚಾಗಿ ನನ್ನ ಸಹೋದರ ಚಿರಂಜೀವಿ ಸರ್ಜಾ ಅವರ ಆಶಿರ್ವಾದ.....
5/ 12
ನಾನು ಚಿಕ್ಕಪ್ಪ ಅರ್ಜುನ್ ಸರ್ಜಾ ಅವರಿಗೆ ಧನ್ಯವಾದ ಹೇಳಲು ಇಷ್ಟಪಡುತ್ತೇನೆ. ಅವರು ಪ್ರತಿಯೊಂದು ಪರಿಸ್ಥಿತಿಯಲ್ಲಿ ನನ್ನೊಂದಿಗೆ ನಿಂತಿದ್ದಾರೆ. ಡಾ. ಸುರ್ಜಿತ್ ಪಾಲ್ ಸಿಂಗ್ ಮತ್ತು ವೈದ್ಯಕೀಯ ಸಹಾಯವನ್ನು ನೀಡಿದ ರಾಜ್ಕುಮಾರ್ ಅವರಿಗೆ ವಿಶೇಷ ಧನ್ಯವಾದಗಳು ಎಂದು ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ.
6/ 12
ಇನ್ನು ಅರ್ಜುನ್ ಸರ್ಜಾ ಅವರ ಪುತ್ರಿ ಐಶ್ವರ್ಯಾ ಅವರಿಗೂ ಕೊರೋನಾ ಪಾಸಿಟಿವ್ ಬಂದಿದೆ. ಹಾಗಾಗಿ ಹೋಮ್ ಕ್ವಾರಂಟೈನ್ನಲ್ಲಿದ್ದಾರೆ ಐಶ್ವರ್ಯಾ
7/ 12
‘ನನಗೆ ಇತ್ತೀಚೆಗೆ ಕೊರೋನಾ ಪಾಸಿಟಿವ್ ಬಂದಿದೆ. ನಾನು ಹೋಂ ಕ್ವಾರಂಟೈನ್ ಆಗಿದ್ದು, ಮನೆಯಲ್ಲೇ ಅಗತ್ಯ ಚಿಕಿತ್ಸೆ ಪಡೆಯುತ್ತಿದ್ದೇನೆ. ನನ್ನ ಸಂಪರ್ಕಕ್ಕೆ ಬಂದವರು ಟೆಸ್ಟ್ ಮಾಡಿಸಿಕೊಳ್ಳಿ ಮತ್ತು ಮನೆಯಲ್ಲೇ ಇರಿ’ ಎಂದು ನಟಿ ಐಶ್ಚರ್ಯಾ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು
8/ 12
ಇದೀಗ ಕೊರೋನಾದಿಂದ ಧ್ರುವ ಸರ್ಜಾ ಮತ್ತು ಪ್ರೇರಣಾ ಗುಣಮುಖರಾಗಿದ್ದಾರೆ. ಧ್ರುವ ಪೊಗರು ಸಿನಿಮಾದಲ್ಲಿ ನಟಿಸಿದ್ದು, ಈ ಸಿನಿಮಾ ಬಿಡುಗಡೆಯಾಗಲು ಸಿದ್ಧವಾಗಿದೆ.
9/ 12
ಜು.7 ರಂದು ನಟ ಚಿರಂಜೀವಿ ಸರ್ಜಾ ಅವರು ಮೃತಪಟ್ಟರು. ಸರ್ಜಾ ಫ್ಯಾಮಿಲಿಗೆ ಚಿರು ಸಾವು ದೊಡ್ಡ ಆಘಾತವನ್ನು ನೀಡಿತ್ತು. ಆ ಬಳಿಕ ಧ್ರುವ ಹಾಗೂ ಪ್ರೇರಣಾರಿಗೆ ಕೊರೋನಾ ಪಾಟಿಟಿವ್ ಕಾಣಿಸಿಕೊಂಡಿತು.
10/ 12
ಇದೀಗ ದಂಪತಿಗಳು ಕೊರೋನಾಗೆ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಂಡು ಮಹಾಮಾರಿ ವೈರಾಣುವನ್ನು ದೂರ ಅಟ್ಟಿದ್ದಾರೆ.
11/ 12
ನಟಿ, ಸಂಸದೆ ಸುಮಲತಾ ಅಂಬರೀಶ್ ಅವರಿಗೂ ಕೊರೋನಾ ಪಾಸಿಟಿವ್ ಕಾಣಿಸಿಕೊಂಡಿತ್ತು. ಇಂದು ಅವರ ರಿಪೋರ್ಟ್ ಬಂದಿದ್ದು, ನೆಗೆಟಿವ್ ಕಾಣಿಸಿಕೊಂಡಿದೆ.