ಹತ್ತಿಯ ಮೃದು-ನೇಯ್ದ ಬಟ್ಟೆಯಿಂದ ತಯಾರಿಸಿದ ಮಾಸ್ಕ್‌ನ ಹೊರಗಿನ ಮತ್ತು ಒಳಗಿನ ನೇಯ್ಗೆ, ಸ್ಕ್ಯಾನಿಂಗ್ ಎಲೆಕ್ಟ್ರಾನ್ ಮೈಕ್ರೋಸ್ಕೋಪ್ ಬಳಸಿ ಇವುಗಳ ಛಾಯಾಚಿತ್ರಗಳನ್ನು ಸೆರೆಹಿಡಿಯಲಾಗಿದೆ, ಈ ಚಿತ್ರಗಳು ಮಾರ್ಚ್ 9, 2021 ರಂದು ಬಿಡುಗಡೆ ಮಾಡಲಾಗಿದೆ. ಹೊಸ ಅಧ್ಯಯನದ ಪ್ರಕಾರ, ಉಸಿರಾಟದ ತೇವಾಂಶಕ್ಕೆ ಹೊಂದಿಕೊಳ್ಳುವ ಹತ್ತಿಯಿಂದ ತಯಾರಿಸಲ್ಪಟ್ಟ ಮಾಸ್ಕ್ ಕೊರೋನಾ ವೈರಸ್ ತಡೆಗಟ್ಟಲು ಪರಿಣಾಮಕಾರಿಯಾಗಿರುತ್ತದೆ ತಿಳಿದು ಬಂದಿದೆ. ಸಿಂಥೆಟಿಕ್ ಬಟ್ಟೆಗಳಿಗೆ ಹೋಲಿಸಿದರೆ ಹತ್ತಿಯ ಬಟ್ಟೆಯು ಉತ್ತಮ ಫಿಲ್ಟರ್ ಆಗಿ ಕಾರ್ಯ ನಿರ್ವಹಿಸುತ್ತದೆ.
N-95 ಮಾಸ್ಕ್ ನಲ್ಲಿರುವ ನೇರಳೆ ಬಣ್ಣದ ಫಿಲ್ಟರ್ ನೀವು ಚಿತ್ರದಲ್ಲಿ ಕಾಣಬಹುದು ಮತ್ತು ಈ ಫಿಲ್ಟರ್'ನ ಸುತ್ತಲೂ ರಕ್ಷಣಾತ್ಮಕ ಪದರು ಹೊಂದಿರುತ್ತದೆ. ಸಂಶೋಧಕರು, ಒಂಬತ್ತು ಬಗೆಯ ಹತ್ತಿಯ ಫ್ಲಾನಲ್ ಅನ್ನು ಪರೀಕ್ಷಿಸಿ, ಇದರ ಗುಣಮಟ್ಟ 12% ರಿಂದ 45% ಕ್ಕೆ ಹೆಚ್ಚಿಸಿದರು, ಇದೀಗ ಸರಾಸರಿ 33% ಹೆಚ್ಚಾಗಿದೆ. ವೈದ್ಯಕೀಯ ಮಾಸ್ಕ್ ಮತ್ತು N-95 ಮಾಸ್ಕ್ ನಲ್ಲಿ ಕಂಡುಬರುವಂತಹ ನೈಲಾನ್, ಪಾಲಿಯೆಸ್ಟರ್ ಮತ್ತು ರೇಯಾನ್ ಸೇರಿದಂತೆ ಆರು ರೀತಿಯ ಸಂಶ್ಲೇಷಿತ ಬಟ್ಟೆಗಳನ್ನು ಸಂಶೋಧಕರು ಪರೀಕ್ಷಿಸಿದ್ದರು. N95 ಮಾಸ್ಕ್'ಗಳು ಹೆಚ್ಚಿನ ಮತ್ತು ಕಡಿಮೆ ಆರ್ದ್ರತೆಯ ಪರಿಸ್ಥಿತಿಗಳಲ್ಲಿ ಸಮನಾಗಿ ಕಾರ್ಯ ನಿರ್ವಹಿಸುತ್ತದೆ.
ಕಾಟನ್ (ಇದರ ಚಿತ್ರ ನೀವು ಮೇಲೆ ಕಾಣಬಹುದು) ಮಾಸ್ಕ ಧರಿಸಿಕೊಂಡು ಉಸಿರಾಡುವಾಗ ಮಾಸ್ಕ್ ನಲ್ಲಿ ತೇವಾಂಶವುಳ್ಳ ಗಾಳಿ ಸೃಷ್ಟಿಯಾಗುತ್ತದೆ, ಹೈಡ್ರೋಫಿಲಿಕ್ ಮತ್ತು ನೀರನ್ನು ಈ ಮಾಸ್ಕ್ ಸರಳವಾಗಿ ಹೀರಿಕೊಳ್ಳುತ್ತದೆ. ಕಣ್ಣಿಗೆ ಕಾಣದಿರುವ ಸಣ್ಣ-ಸಣ್ಣ ಕಣಗಳು ಬಟ್ಟೆಯ ಮೂಲಕ ಹಾದುಹೋದಾಗ, ಉಸಿರಾಟದಿಂದ ಸೃಷ್ಟಿಯಾದ ತೇವಾಂಶಕ್ಕೆ ಈ ಕಣಗಳು ಸಿಕ್ಕಿಹಾಕಿಕೊಳ್ಳುವ ಸಾಧ್ಯತೆ ಇರುತ್ತದೆ.
ಪಾಲಿಯೆಸ್ಟರ್ ಮಾಸ್ಕ್ ನ ಎಳೆಗಳು ಹೇಗೆ ಚೆನ್ನಾಗಿ ಜೋಡಿಸಲ್ಪಟ್ಟಿವೆ ಎಂಬುದನ್ನು ನೀವು ಈ ಚಿತ್ರದಲ್ಲಿ ನೋಡಬಹುದು. ಕಾಟನ್ ಮಾಸ್ಕ್'ಗೆ ಹೋಲಿಸಿದರೆ, ಸಿಂಥೆಟಿಕ್ ಬಟ್ಟೆ ಹೈಡ್ರೋಫೋಬಿಕ್ ಮತ್ತು ನೀರನ್ನು ಹೀರಿಕೊಳ್ಳುವುದಿಲ್ಲ. ಸಿಂಥೆಟಿಕ್ ಬಟ್ಟೆಯಿಂದ ತಯಾರಿಸಲ್ಪಟ್ಟ ಮಾಸ್ಕ್'ಗಳು ಉಸಿರಾಟದಿಂದ ಸೃಷ್ಟಿಯಾದ ತೇವಾಂಶಕ್ಕೆ ಹೊಂದಿಕೊಳ್ಳುವುದಿಲ್ಲ, ಆದರೂ ಕೂಡ ಇದು ಕಾಟನ್ ಮಾಸ್ಕ್ ನಂತೆಯೇ ಕೆಲಸ ಮಾಡುತ್ತದೆ.
ಮಾಸ್ಕ್'ಗಳಲ್ಲಿ ಪಾಲಿಯೆಸ್ಟರ್ ಫೈಬರ್ ಇರುತ್ತದೆ, ಪಾಲಿಮರ್ ಕಚ್ಚಾ ವಸ್ತುಗಳ ಹೊರತೆಗೆಯುವಿಕೆ ಎಂಬ ಪ್ರಕ್ರಿಯೆಯನ್ನು ಬಳಸಿಕೊಂಡು ತಯಾರಿಸಲಾಗುತ್ತದೆ, "ಹತ್ತಿ ಬಟ್ಟೆಗಳ ಮಾಸ್ಕ್ ಎಂದರೆ ಕಾಟನ್ ಮಾಸ್ಕ್'ಗಳು ಉತ್ತಮವಾದ ಆಯ್ಕೆ" ಎಂದು ಎನ್ಐಎಸ್ಟಿ ಸಂಶೋಧನಾ ವಿಜ್ಞಾನಿ ಕ್ರಿಸ್ಟೋಫರ್ ಜಾಂಗ್‌ಮಿಸ್ಟರ್ ಹೇಳಿದ್ದಾರೆ. ಆದರೆ ಹೊಸ ಅಧ್ಯಯನದ ಪ್ರಕಾರ ಹತ್ತಿ ಬಟ್ಟೆ ನಾವು ಅಂದುಕೊಂಡದ್ದಕ್ಕಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ ಎಂದು ತೋರುತ್ತದೆ.