ಕಾಶ್ಮೀರದ ತೀತ್ವಾಲ್ನಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ ದೇವಾಲಯದಕ್ಕೆ ಶೃಂಗೇರಿ ಶಾರದಾಂಬಾ ಪೀಠದಿಂದ ಶಾರದಾಂಬೆಯ ಪ್ರತಿಮೆಯನ್ನು ರವಾನಿಸಲಾಗಿದೆ. (ಸಾಂದರ್ಭಿಕ ಚಿತ್ರ)
2/ 7
ಈ ಪ್ರತಿಮೆಯನ್ನು ಪಂಚಲೋಹದಿಂದ ತಯಾರಿಸಲಾಗಿದ್ದು ಜನವರಿ 24ರಂದು ಕಾಶ್ಮೀರಕ್ಕೆ ಶಾರದಾಂಬಾ ವಿಗ್ರಹವನ್ನು ರವಾನಿಸುವ ಕಾರ್ಯ ಆರಂಭವಾಗಿದೆ. (ಸಾಂದರ್ಭಿಕ ಚಿತ್ರ)
3/ 7
ಭಾರತ-ಪಾಕಿಸ್ತಾನ ವಿಭಜನೆಯ ಸಂದರ್ಭದಲ್ಲಿ ಗಲಭೆಗಳಿಂದ ಕಾಶ್ಮೀರದ ತೀತ್ವಾಲ್ ಶಾರದಾ ಪೀಠವು ನಾಶವಾಗಿತ್ತು. ಇದೀಗ ಶೃಂಗೇರಿ ಪೀಠದ ವತಿಯಿಂದ ಇಲ್ಲಿ ಹೊಸದಾಗಿ ದೇಗುಲ ನಿರ್ಮಿಸಲಾಗುತ್ತಿದೆ. (ಸಾಂದರ್ಭಿಕ ಚಿತ್ರ)
4/ 7
ಕಾಶ್ಮೀರ ಶಾರದಾ ಪೀಠವು ನೀಲಂ ನದಿಯ ದಡದಲ್ಲಿದ್ದು ಪುರಾತನ ದೇವಾಲಯವಾಗಿದೆ. ಈ ಹಿಂದೆ ಇದು ಪ್ರಮುಖ ಶೈಕ್ಷಣಿಕ ಕೇಂದ್ರವಾಗಿತ್ತು. ಇದು ದಕ್ಷಿಣ ಏಷ್ಯಾದ 18 ಅತ್ಯಂತ ಪೂಜ್ಯ ದೇವಾಲಯಗಳಲ್ಲಿ ಒಂದಾಗಿದೆ. (ಸಾಂದರ್ಭಿಕ ಚಿತ್ರ)
5/ 7
ಶಾರದಾ ಪೀಠ ಎಂದರೆ ಶಾರದೆಯು ನೆಲೆಸಿರುವ ಸ್ಥಾನ ಎಂದರ್ಥ. ಇದು ಸರಸ್ವತಿ ದೇವಿಯ ಕಾಶ್ಮೀರಿ ಹೆಸರು. ಶಾರದಾ ಪೀಠವು ಭಾರತೀಯ ಉಪಖಂಡದ ಅಗ್ರಗಣ್ಯ ಪ್ರಾಚೀನ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದೆ. (ಸಾಂದರ್ಭಿಕ ಚಿತ್ರ)
6/ 7
ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ (PoK) ಭಾಗದಲ್ಲಿರುವ ಈ ದೇವಾಲಯಕ್ಕೆ ಶೃಂಗೇರಿ ಪೀಠದಿಂದ ಶಾರದಾಂಬಾ ಪ್ರತಿಮೆ ರವಾನಿಸುತ್ತಿರುವುದು ವಿಶೇಷವೆನಿಸಿದೆ. (ಸಾಂದರ್ಭಿಕ ಚಿತ್ರ)
7/ 7
ಒಟ್ಟಾರೆ ಪುರಾತನ ದೇಗುಲವೊಂದರ ಪುನರುತ್ಥಾನ ಕಾರ್ಯ ವೇಗವಾಗಿ ನಡೆಯುತ್ತಿದೆ. ಭಕ್ತರು ಈ ದೇಗುಲವನ್ನು ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ. (ಸಾಂದರ್ಭಿಕ ಚಿತ್ರ)