ಮನೆಯಲ್ಲೇ ಕೂತು ಯಾರ್ ಗುರು ವೋಟ್ ಹಾಕೋಕ್ ಹೋಗ್ತಾರೆ ಅಂತ ಉದಾಸೀನ ಮಾಡುವವರೆಲ್ಲಾ ಇವರನ್ನು ನೋಡಿ ಪಾಠ ಕಲಿಬೇಕು. ಸಮೃದ್ಧ ಭಾರತಕ್ಕಾಗಿ ನಾನು ಈ ಕೆಲಸ ಮಾಡಿದೆ ಎನ್ನುವ ಇವರ ಕತೆ ಕೇಳಿ.
2/ 6
ಇವರ ಹೆಸರು ಸ್ವರ್ಣಲತಾ ಕಾರಂತ್ .ಇವರು ತಮ್ಮ 74ನೇ ವಯಸ್ಸಿನಲ್ಲಿ ಎದ್ದು ನಡೆದಾಡಲೂ ಆಗದಂಥಾ ಅನಾರೋಗ್ಯದ ನಡುವೆಯೂ ಯುವಜನತೆ ನಾಚುವಂತ ಉತ್ಸಾಹದಿಂದ ಮತದಾನ ಮಾಡಲೇಬೇಕು ಎಂದು ಹಠ ಹಿಡಿದು ಕೂತಿದ್ದರಂತೆ.
3/ 6
ಚಿಕ್ಕಮಗಳೂರಿನವರಾದ ಇವರು ನಗರದ ಸೇಂಟ್ ಜೋಸೆಫ್ ಕಾನ್ವೆಂಟ್ ಸ್ಕೂಲ್(ಬೂತ್ ನಂಬರ್ 187)ರಲ್ಲಿ ಮತದಾನ ಮಾಡಿದ್ದಾರೆ.
4/ 6
ಇವರ ಆಸಕ್ತಿಯನ್ನು ಕಂಡು ಖುದ್ದು ಹಿರಿಯ ಅಧಿಕಾರಿಯಾಗಿರುವ ಇವರ ಮಗ ಪ್ರವೀಣ್ ಕಾರಂತ್ ಚುನಾವಣಾಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. ಚುನಾವಣಾ ಆಯೋಗದ ಅಧಿಕಾರಿಗಳು ಇವರ ಮನೆ ಬಾಗಿಲಿಗೇ ಆಂಬ್ಯುಲೆನ್ಸ್ ಕಳಿಸಿ ಇವರನ್ನು ಮತಗಟ್ಟೆಗೆ ಕರೆದೊಯ್ದಿದ್ದಾರೆ.
5/ 6
ಬೆಳಗ್ಗೆ 10 ಗಂಟೆ ವೇಳೆಗೆ ಮನೆ ಬಳಿ ಬಂದು ನನ್ನನ್ನು ಯಾವುದೇ ಸಮಸ್ಯೆಯಾಗದಂತೆ ಜಾಗ್ರತೆಯಾಗಿ ಕರೆದುಕೊಂಡು ಹೋದರು. ಅರ್ಧ ಗಂಟೆಯಲ್ಲಿ ಮತದಾನ ಮಾಡಿ ನಾನು ಮನೆಗೆ ಮರಳಿದೆ ಎಂದು ಶ್ರೀಮತಿ ಸ್ವರ್ಣಲತಾ ಕಾರಂತ್ ನ್ಯೂಸ್ 18 ಕನ್ನಡ ಡಿಜಿಟಲ್ಗೆ ತಿಳಿಸಿದರು.
6/ 6
ಮನೆಯಲ್ಲೇ ಕುಳಿತು ಹಿರಿಯರು ಮತದಾನ ಮಾಡುವ ಅವಕಾಶ ಇರುವುದು ಹೌದಾದರೂ, ಆ ಕುರಿತು ನೋಂದಣಿ ಮಾಡುವ ದಿನಾಂಕ ಕಳೆದ ನಂತರ ಇವರಿಗೆ ಅನಾರೋಗ್ಯ ಉಂಟಾಗಿದೆ. ಹಾಗಾಗಿ ಮನೆಯಿಂದ ಮತದಾನ ಮಾಡುವ ಅವಕಾಶ ಇವರಿಗೆ ಸಾಧ್ಯವಾಗಿಲ್ಲ.
First published:
16
Chikkamagaluru: ಯಾರ್ ಗುರು ವೋಟ್ ಹಾಕ್ತಾರೆ ಅನ್ನೋರು ಇವ್ರನ್ನ ನೋಡಿ!