Gaganachukki Barachukki Waterfalls: ನೋಡಲು 2 ಕಣ್ಣು ಸಾಲೋದಿಲ್ಲ! ಗಗನಚುಕ್ಕಿ ಭರಚುಕ್ಕಿ ಜಲಪಾತದ ವೈಭವ ಇದು!
Karnataka Rains: ಕರ್ನಾಟಕದಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಹೀಗಾಗಿ ವಿವಿಧ ಜಲಪಾತಗಳು ಅದ್ಭುತವಾಗಿ ಧುಮ್ಮಿಕ್ಕುತ್ತಿವೆ. ಬೆಂಗಳೂರಿಗೆ ಸಮೀಪವೇ ಇರುವ ಅದ್ಭುತ ಜಲಪಾತವೊಂದಕ್ಕೆ ನೀವೂ ಹೋಗಿಬನ್ನಿ, ಇಲ್ಲಿವೆ ನೋಡಿ ಸುಂದರ ಫೋಟೊಗಳು. (ಚಿತ್ರಕೃಪೆ: ಅರವಿಂದಮೂರ್ತಿ ಭಟ್)
ಚಾಮರಾಜನಗರ ಜಲಾನಯನ ಪ್ರದೇಶದಲ್ಲೂ ಉತ್ತಮ ಮಳೆ ಸುರಿಯುತ್ತಿದೆ. ಕೆ.ಆರ್.ಎಸ್ ಹಾಗು ಕಬಿನಿ ಜಲಾಶಯಗಳಿಂದ ನದಿಗೆ ನೀರು ಬಿಡುಗಡೆ ಮಾಡಲಾಗಿದೆ.
2/ 8
ಹೀಗಾಗಿ ಕಾವೇರಿ ನದಿ ಮೈದುಂಬಿ ಹರಿಯುತ್ತಿದೆ. ಇದರಿಂದಾಗಿ ಪ್ರವಾಸ ಪ್ರಿಯರಿಗೆ ಸಂತಸದ ವಾತಾವರಣ ನಿರ್ಮಾಣವಾಗಿದೆ.
3/ 8
ಉತ್ತಮ ಮಳೆಯಿಂದ ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತಗಳಿಗೂ ಜೀವಕಳೆ ಬಂದಿದೆ. ಸೌಂದರ್ಯ ಹೆಚ್ಚಾಗಿದೆ.
4/ 8
ಬೆಂಗಳೂರು ನಗರದಿಂದ 167 ಕಿ.ಮೀ ದೂರದಲ್ಲಿ ಈ ಜಲಪಾತಗಳಿವೆ.
5/ 8
ಮೈಸೂರು ರೈಲ್ವೆ ನಿಲ್ದಾಣದಿಂದ ಸುಮಾರು 60 ಕಿ.ಮೀ ದೂರದಲ್ಲಿ ಧುಮ್ಮುಕ್ಕುತ್ತದೆ ಶಿವನಸಮುದ್ರ ಜಲಪಾತ.
6/ 8
ಗಗನಚುಕ್ಕಿ ಮತ್ತು ಭರಚುಕ್ಕಿ ಈ ಎರಡೂ ಜಲಪಾತಗಳಿಗೆ ಒಟ್ಟಾಗಿ ಶಿವನಸಮುದ್ರ ಜಲಪಾತ ಎಂದೇ ಕರೆಯಲಾಗುತ್ತದೆ.
7/ 8
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನಲ್ಲಿರುವ ಭರಚುಕ್ಕಿ ಜಲಪಾತ ಮತ್ತು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಗಗನಚುಕ್ಕಿ ಜಲಪಾತವು 1902 ರಲ್ಲಿ ಸ್ಥಾಪನೆಯಾದ ಏಷ್ಯಾದ ಮೊದಲ ಜಲವಿದ್ಯುತ್ ಕೇಂದ್ರಗಳ ಸ್ಥಳವಾಗಿದೆ.
8/ 8
ಬೆಂಗಳೂರಿನಿಂದಲೂ ತೀರಾ ದೂರದಲ್ಲೇನೂ ಇಲ್ಲ, ನೀವೂ ಖುಷಿಯಿಂದ ಹೋಗಿಬನ್ನಿ.