

ಮತದಾನದ ಕುರಿತು ಅರಿವು ಮೂಡಿಸಲು ಚುನಾವಣಾ ಆಯೋಗದ ರಾಯಭಾರಿಯಾಗಿರುವ ರಾಹುಲ್ ದ್ರಾವಿಡ್ ಬೆಂಗಳೂರಿನಲ್ಲಿ ತಮ್ಮ ಪತ್ನಿಯೊಂದಿಗೆ ಬಂದು ಮತ ಚಲಾಯಿಸಿದರು


ಹಾವೇರಿ ಜಿಲ್ಲೆಯ ಹಿರೇಕೆರೂರಿನಲ್ಲಿ ಮತಕೇಂದ್ರಕ್ಕೆ ಕುಟುಂಬ ಸಮೇತ ಬಂದಿದ್ದ ಚಿತ್ರನಟ ಹಾಗೂ ಮಾಜಿ ಶಾಸಕ ಬಿ.ಸಿ.ಪಾಟೀಲ


ಬೆಳಿಗ್ಗೆ ಮತ ಚಲಾಯಿಸಲು ಕುಟುಂಬ ಸಮೇತರಾಗಿ ಬೆಂಗಳೂರಿನ ಮತಗಟ್ಟೆಗೆ ಬಂದಿದ್ದ ಅನಿಲ್ ಕುಂಬ್ಳೆ ಅವರು ಸರತಿ ಸಾಲಿನಲ್ಲಿ ನಿಂತು ಕಾಯುತ್ತಿರುವ ಚಿತ್ರವನನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ


ಬೆಂಗಳೂರಿನ ಶಾಸ್ತ್ರಿ ನಗರದಲ್ಲಿರುವ ಆತ್ಮಶ್ರೀ ಶಾಲೆಯಲ್ಲಿ ಮತದಾನ ಮಾಡಿದ ದ್ರುವ ಸರ್ಜಾ ಹಾಗೂ ಚಿರಂಜೀವಿ ಸರ್ಜಾ


ಕತ್ರಿಗುಪ್ಪೆಯಲ್ಲಿ ಪತ್ನಿ ಪ್ರಿಯಾಂಕಾ ಜತೆ ಬಂದು ಮತದಾನ ಮಾಡಿದ ಉಪೇಂದ್ರ. ಮತದಾನಕ್ಕೂ ಮುನ್ನ ಸಾಲಿನಲ್ಲಿ ನಿಂತು ಸಾರ್ವಜನಿಕರೊಂದಿಗೆ ಕುಶಲೋಪರಿ ವಿಚಾರಿಸಿದ ದಂಪತಿ.


ಮತ ಚಲಾಯಿಸಲು ಬಂದ ನಟ ಗುರು ನಂದನ್ಗೆ ಈ ಬಾರಿ ನಿರಾಶೆ ಎದುರಾಗಿತ್ತು. ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದ ಕಾರಣ ಮತ ಚಲಾಯಿಸದೇ ಹಾಗೇ ಹಿಂತಿರುಗಬೇಕಾಯಿತು.


ಪ್ರೇಮ್ ಹಾಗು ರಕ್ಷಿತಾ ಪೇಮ್ ವಿಜಯನಗರ ವಿಧಾನಸಭಾ ಕ್ಷೇತ್ರದ ಕೆವಿಎನ್ ಪಬ್ಲಿಕ್ ಶಾಲೆಯಲ್ಲಿ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ತಾರಾ ಜೋಡಿ


ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಮತ ಚಲಾವಣೆ<br /> ಪತಿ ರಾಮು ಅವರೊಂದಿಗೆ ಬಂದು ಮತ ಚಲಾಯಿಸಿದ ಮಾಲಾಶ್ರೀ


ಬೆಂಗಳೂರಿನಲ್ಲಿ ಮತದಾನ ಮಾಡಲು ಬಂದ ನಿರ್ದೇಶಕ ತರುಣ್ ಸುಧೀರ್ ತಮ್ಮ ಸರದಿಗಾಗಿ ಕಾಯುತ್ತಿದ್ದಾಗ ಕ್ಯಾಮೆರಾಗೆ ನೀಡಿದ ಪೋಸ್


ಮತ ಚಲಾಯಿಸಲು ಬಂದ ಹಿರಿಯ ನಟ ಅನಂತನಾಗ್ ಹಾಗೂ ಪತ್ನಿ ಗಾಯತ್ರಿ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಅಶ್ವತ್ ನಗರ ಬೂತ್ ನಂಬರ್ 60ರಲ್ಲಿ ಮತದಾನ ಮಾಡಿದರು


ನಾಗರಭಾವಿ ವಿಧಾಸಭಾ ಕ್ಷೇತ್ರದ ಆಕ್ಸ್ಫರ್ಡ್ ಶಾಲೆಯಲ್ಲಿ ಮತ ಚಲಾವಣೆಗೆ ತಾಯಿಯೊಂದಿಗೆ ಬಂದು ಮತ ಚಲಾಯಿಸಿದ ಬಿಗ್ಬಾಸ್ ಖ್ಯಾತಿಯ ಚಂದನ್ ಶೆಟ್ಟಿ