Success Story: ಅಪ್ಪನ ಕಪಾಳಕ್ಕೆ ಹೊಡೆದಿದ್ದ ಪೊಲೀಸ್; ಮಗ ಮುಂದೆ ಜೀವನದಲ್ಲಿ ಪುಟಿದೆದ್ದ ರೀತಿಯೇ ಒಂದು ಪವಾಡ

Judge Kamlesh Kumar Success Story : ಒಮ್ಮೊಮ್ಮೆ ಜೀವನದಲ್ಲಿ ನಡೆಯುವ ಕೆಟ್ಟ ಘಟನೆಗಳು ನಮ್ಮ ಜೀವನದ ದಿಕ್ಕನ್ನೇ ಬದಲಿಸಿ ಬಿಡುತ್ತೆ. ಅದರಲ್ಲೂ ಬಡವರು ಉಳ್ಳವರು, ಅಧಿಕಾರದಲ್ಲಿರುವವರಿಂದ ಶೋಷಣೆ-ಅವಮಾನಕ್ಕೊಳಗಾಗುವುದು ಹೆಚ್ಚು. ಅಂತಹ ಘಟನೆಗಳು ಕೆಲವರ ಜೀವನವನ್ನು ಬದಲಿಸಿದೆ. ಅದಕ್ಕೆ ಕಮಲೇಶ್ ಕುಮಾರ್ ಅವರ ಬದುಕಿನ ಕಥೆಯೇ ದೊಡ್ಡ ನಿದರ್ಶನ.

First published:

  • 17

    Success Story: ಅಪ್ಪನ ಕಪಾಳಕ್ಕೆ ಹೊಡೆದಿದ್ದ ಪೊಲೀಸ್; ಮಗ ಮುಂದೆ ಜೀವನದಲ್ಲಿ ಪುಟಿದೆದ್ದ ರೀತಿಯೇ ಒಂದು ಪವಾಡ

    ಬಿಹಾರದ ಸಹರ್ಸಾ ಜಿಲ್ಲೆಯ ಬಡ ಕುಟುಂಬಕ್ಕೆ ಸೇರಿದ ಕಮಲೇಶ್ ಕುಮಾರ್ ಅವರ ಕಥೆ ಎಂಥವರಿಗೂ ಸ್ಪೂರ್ತಿದಾಯಕ. 2022 ರಲ್ಲಿ ನಡೆದ ಬಿಹಾರ ನ್ಯಾಯಾಂಗ ಪರೀಕ್ಷೆಯಲ್ಲಿ ಕಮಲೇಶ್ 64 ನೇ ರ್ಯಾಂಕ್ ಗಳಿಸಿದ್ದಾರೆ. ಕಮಲೇಶ್ ಅವರ ಈ ಯಶಸ್ಸಿಗೆ ಸ್ವಂತ ಪರಿಶ್ರಮ ಮತ್ತು ಅವರ ತಂದೆಯ ತ್ಯಾಗವೇ ಕಾರಣ.

    MORE
    GALLERIES

  • 27

    Success Story: ಅಪ್ಪನ ಕಪಾಳಕ್ಕೆ ಹೊಡೆದಿದ್ದ ಪೊಲೀಸ್; ಮಗ ಮುಂದೆ ಜೀವನದಲ್ಲಿ ಪುಟಿದೆದ್ದ ರೀತಿಯೇ ಒಂದು ಪವಾಡ

    ಕುಟುಂಬದ ಜೀವನೋಪಾಯಕ್ಕಾಗಿ ಕಮಲೇಶ್ ಅವರ ತಂದೆ ಕೂಲಿ ಕೆಲಸ ಮಾಡುತ್ತಿದ್ದರು. ಕೆಲವೊಮ್ಮೆ ರಿಕ್ಷಾ ಓಡಿಸುತ್ತಿದ್ದರು. ದೆಹಲಿ ರೈಲ್ವೇ ನಿಲ್ದಾಣದಲ್ಲಿ ಕೂಲಿಯಾಗಿ ಕೆಲಸ ಮಾಡುತ್ತಿದ್ದರು. ಚಾಂದಿನಿ ಚೌಕ್ ನ ಬೀದಿಗಳಲ್ಲಿ ಚೋಲೆ-ಭಟೂರೆ ಅನ್ನು ಮಾರುತ್ತಿದ್ದರು.

    MORE
    GALLERIES

  • 37

    Success Story: ಅಪ್ಪನ ಕಪಾಳಕ್ಕೆ ಹೊಡೆದಿದ್ದ ಪೊಲೀಸ್; ಮಗ ಮುಂದೆ ಜೀವನದಲ್ಲಿ ಪುಟಿದೆದ್ದ ರೀತಿಯೇ ಒಂದು ಪವಾಡ

    ಒಂದು ದಿನ ಬೀದಿಬದಿಯಲ್ಲಿ ಗಾಡಿ ಹಾಕಿದ್ದಕ್ಕಾಗಿ ಪೊಲೀಸ್ ಒಬ್ಬರು ಕಮಲೇಶ್ ಅವರ ತಂದೆಗೆ ಕಪಾಳಕ್ಕೆ ಹೊಡೆದರು. ಈ ದುರ್ವರ್ತನೆ ಕಂಡು ಕಮಲೇಶ್ ಕನಲಿ ಹೋದರು. ಅಂದೇ ಅವರು ದೊಡ್ಡ ನಿರ್ಧಾರವನ್ನು ಮಾಡಿದರು. ತಂದೆಯೊಂದಿಗಿನ ಅನುಚಿತ ವರ್ತನೆ ಕಮಲೇಶ್ ಅವರ ಜೀವನವನ್ನೇ ಬದಲಾಯಿಸಿತು.

    MORE
    GALLERIES

  • 47

    Success Story: ಅಪ್ಪನ ಕಪಾಳಕ್ಕೆ ಹೊಡೆದಿದ್ದ ಪೊಲೀಸ್; ಮಗ ಮುಂದೆ ಜೀವನದಲ್ಲಿ ಪುಟಿದೆದ್ದ ರೀತಿಯೇ ಒಂದು ಪವಾಡ

    ತಂದೆಯ ಜೊತೆಗೆ ನಡೆದ ಘಟನೆಯನ್ನು ಅವರಿಗೆ ಮರೆಯಲು ಆಗಲೇ ಇಲ್ಲ. ಪೊಲೀಸ್ ಕೂಡ ಯಾರಿಗಾದರೂ ತಲೆ ಬಾಗುತ್ತಾರೆ, ಗೌರವಿಸುತ್ತಾರೆ ಎಂದರೆ ಅದು ನ್ಯಾಯಾಧೀಶರಿಗೆ ಎಂದು ಕಮಲೇಶ್ ಗೆ ತಿಳಿಯಿತು. ಅಂದೇ ತಾನೂ ಜೀವನದಲ್ಲಿ ಜಡ್ಜ್ ಆಗಬೇಕು ಎಂದು ಸಂಕಲ್ಪ ಮಾಡಿದರು.

    MORE
    GALLERIES

  • 57

    Success Story: ಅಪ್ಪನ ಕಪಾಳಕ್ಕೆ ಹೊಡೆದಿದ್ದ ಪೊಲೀಸ್; ಮಗ ಮುಂದೆ ಜೀವನದಲ್ಲಿ ಪುಟಿದೆದ್ದ ರೀತಿಯೇ ಒಂದು ಪವಾಡ

    ಕಮಲೇಶ್ ಸೆಕೆಂಡ್ ಪಿಯು ಉತ್ತೀರ್ಣರಾದ ನಂತರ ದೆಹಲಿ ವಿಶ್ವವಿದ್ಯಾಲಯದಲ್ಲಿ ಕಾನೂನು ಅಧ್ಯಯನ ಪ್ರಾರಂಭಿಸಿದರು. ಜಡ್ಜ್ ಆಗಲು ಕಮಲೇಶ್ ಸಾಕಷ್ಟು ತಯಾರಿ ನಡೆಸಿದ್ದರು. 2017 ರಲ್ಲಿ ಯುಪಿ ನ್ಯಾಯಾಂಗ ಪರೀಕ್ಷೆಯನ್ನು ನೀಡಿದರು, ನಂತರ ಬಿಹಾರ ನ್ಯಾಯಾಂಗದ ಪರೀಕ್ಷೆಯನ್ನು ಸಹ ನೀಡಿದರು.

    MORE
    GALLERIES

  • 67

    Success Story: ಅಪ್ಪನ ಕಪಾಳಕ್ಕೆ ಹೊಡೆದಿದ್ದ ಪೊಲೀಸ್; ಮಗ ಮುಂದೆ ಜೀವನದಲ್ಲಿ ಪುಟಿದೆದ್ದ ರೀತಿಯೇ ಒಂದು ಪವಾಡ

    ಮೊದಲ ಯತ್ನದಲ್ಲಿ ಸೋತರೂ ಛಲ ಬಿಡಲಿಲ್ಲ. ಅಷ್ಟರಲ್ಲಿ ಕೊರೊನಾ ಕೂಡ ಬಂತು. ಕಮಲೇಶ್ ಅವರ 3 ವರ್ಷಗಳು ವ್ಯರ್ಥವಾಯಿತು, ಅವರ ವಯಸ್ಸು ಕೂಡ ಹೆಚ್ಚಿತು. ಇಷ್ಟೆಲ್ಲ ಆದರೂ ಕಮಲೇಶ್ ಹಗಲಿರುಳು ಶ್ರಮಿಸಿ ಕೊನೆಗೆ 2022ರಲ್ಲಿ ಆಯ್ಕೆಯಾದರು. ಅಕ್ಟೋಬರ್ 2022 ರಲ್ಲಿ ನಡೆದ 31 ನೇ ಬಿಹಾರ ನ್ಯಾಯಾಂಗ ಪರೀಕ್ಷೆಯಲ್ಲಿ ಕಮಲೇಶ್ 64 ನೇ ರ್ಯಾಂಕ್ ಗಳಿಸಿದರು. ಇದರೊಂದಿಗೆ ನ್ಯಾಯಾಧೀಶರಾಗುವ ಅವರ ಕನಸು ನನಸಾಗಿದೆ.

    MORE
    GALLERIES

  • 77

    Success Story: ಅಪ್ಪನ ಕಪಾಳಕ್ಕೆ ಹೊಡೆದಿದ್ದ ಪೊಲೀಸ್; ಮಗ ಮುಂದೆ ಜೀವನದಲ್ಲಿ ಪುಟಿದೆದ್ದ ರೀತಿಯೇ ಒಂದು ಪವಾಡ

    ಕಮಲೇಶ್ ಅವರು ಜಡ್ಜ್ ಆಗಿ ಆಯ್ಕೆಯಾದ ಸಮಯದಲ್ಲಿ, ಅವರ ತಂದೆ ಚಾಂದಿನಿ ಚೌಕ್ ನಲ್ಲಿ ಚೋಲೆ-ಭಾತುರೆ ಮಾರಾಟ ಮಾಡುತ್ತಿದ್ದರು. ಮಗನ ಸಾಧನೆಯ ಸುದ್ದಿ ಕೇಳಿ ಭಾವುಕರಾದರು. ಮನೆಯಲ್ಲಿ ವಿಷಯ ತಿಳಿದಾಗ ಎಲ್ಲರ ಕಣ್ಣಲ್ಲೂ ಆನಂದದ ಭಾಷ್ಪ. ಕಮಲೇಶ್ ಅವರ ಈ ಹೋರಾಟ ನಮಗೆಲ್ಲಾ ನಿಜಕ್ಕೂ ಸ್ಪೂರ್ತಿ.

    MORE
    GALLERIES