Job Offer: ಲೇಆಫ್ ಸೀಸನ್​ನಲ್ಲಿ ಯಾವುದೇ ಜಾಬ್ ಆಫರ್​ ಒಪ್ಪಿಕೊಳ್ಳುವ ಮುನ್ನ ಎಚ್ಚರಿಕೆ

ಭಾರತ ಸೇರಿದಂತೆ ವಿಶ್ವಾದ್ಯಂತ ಲೇಆಫ್ ಭೂತ ಉದ್ಯೋಗಿಗಳನ್ನು ಕಾಡುತ್ತಿದೆ. ಇಂತಹ ಸಂಕಷ್ಟದ ಸಮಯದಲ್ಲೂ ಹೊಸ ನೇಮಕಾತಿಗಳು ನಡೆಯುತ್ತಿವೆ. ಆದರೆ ಹೊಸ ನೇಮಕಾತಿಗಳ ಮೇಲೆ ಲೇ ಆಫ್ ಪರಿಣಾಮ ಬೀರುತ್ತಿದೆ. ಆ ನಿಟ್ಟಿನಲ್ಲಿ ಯಾವುದೇ ಹೊಸ ಕೆಲಸಕ್ಕೆ ಸೇರುವ ಮೊದಲು ಆ ಕಂಪನಿಯ ಬಗ್ಗೆ ನೀವು ನಿಖರವಾಗಿ ಏನನ್ನು ತಿಳಿದುಕೊಳ್ಳಬೇಕು ಎಂಬುದನ್ನು ನಾವು ಇಂದು ನಿಮಗೆ ಹೇಳಲಿದ್ದೇವೆ.

First published:

  • 17

    Job Offer: ಲೇಆಫ್ ಸೀಸನ್​ನಲ್ಲಿ ಯಾವುದೇ ಜಾಬ್ ಆಫರ್​ ಒಪ್ಪಿಕೊಳ್ಳುವ ಮುನ್ನ ಎಚ್ಚರಿಕೆ

    ಯಾವುದೇ ಕೆಲಸಕ್ಕಾಗಿ ನಡೆಯುವ ಇಂಟರ್ ವ್ಯೂನಲ್ಲಿ ನಿಮ್ಮ ನಡವಳಿಕೆ, ಮಾತು, ಶಿಕ್ಷಣದ ಜೊತೆಗೆ ನಿಮ್ಮ ಕೆಲವು ಸುಪ್ತ ಅಂಶಗಳನ್ನು ಸಹ ಪರಿಶೀಲಿಸಲಾಗುತ್ತದೆ. ನಿಮಗೆ ಕೆಲಸ ಸಿಗುತ್ತದೋ ಇಲ್ಲವೋ ಎಂಬುದನ್ನು ಈ ಅಂಶಗಳೇ ನಿರ್ಧರಿಸುತ್ತವೆ. ಸಂದರ್ಶಕರು ನಿಮ್ಮ ಬಗ್ಗೆ ಎಲ್ಲವನ್ನೂ ಖಚಿತಪಡಿಸಿಕೊಂಡ ನಂತರವೇ ನಿಮ್ಮನ್ನು ನೇಮಿಸಿಕೊಳ್ಳುತ್ತಾರೆ.

    MORE
    GALLERIES

  • 27

    Job Offer: ಲೇಆಫ್ ಸೀಸನ್​ನಲ್ಲಿ ಯಾವುದೇ ಜಾಬ್ ಆಫರ್​ ಒಪ್ಪಿಕೊಳ್ಳುವ ಮುನ್ನ ಎಚ್ಚರಿಕೆ

    ಆದರೆ, ಯಾವುದೇ ಕಂಪನಿಯಲ್ಲಿ ಆಯ್ಕೆಯಾದ ನಂತರ ನೀವು ಆ ಕಂಪನಿಯ ಬಗ್ಗೆ ಹೆಚ್ಚು ತಿಳಿದುಕೊಳ್ಳಲೇಬೇಕು. ಇಲ್ಲದಿದ್ದರೆ ಮುಂದೆ ನಿಮ್ಮ ಉದ್ಯೋಗ ಹಾಗೂ ಕರಿಯರ್ ಗೆ ಅಪಾಯ ಎದುರಾಗುತ್ತದೆ. ಹಾಗಾಗಿ ಯಾವುದೇ ಕೆಲಸಕ್ಕೆ ಸೇರುವ ಮೊದಲು ಆ ಕಂಪನಿಯ ಬಗ್ಗೆ ನೀವು ನಿಖರವಾಗಿ ಏನನ್ನು ತಿಳಿದುಕೊಳ್ಳಬೇಕು. ಆ ಬಗ್ಗೆ ಮಾಹಿತಿ ಇಲ್ಲಿದೆ.

    MORE
    GALLERIES

  • 37

    Job Offer: ಲೇಆಫ್ ಸೀಸನ್​ನಲ್ಲಿ ಯಾವುದೇ ಜಾಬ್ ಆಫರ್​ ಒಪ್ಪಿಕೊಳ್ಳುವ ಮುನ್ನ ಎಚ್ಚರಿಕೆ

    1) ವರ್ಕ್ ಲೈಫ್ ಬ್ಯಾಲೆನ್ಸ್ ತುಂಬಾನೇ ಮುಖ್ಯ: ವಾರದಲ್ಲಿ ಇಲ್ಲವೇ ತಿಂಗಳಲ್ಲಿ ಎಷ್ಟು ದಿನ, ಎಷ್ಟು ಗಂಟೆಗಳ ಕಾಲ ಕೆಲಸ ಮಾಡಬೇಕು ಎಂಬ ಖಚಿತ ಮಾಹಿತಿಯನ್ನು ಪಡೆದುಕೊಳ್ಳಿ. ಇಲ್ಲವಾದರೆ ಮುಂದೆ ಪಶ್ಚಾತಾಪಪಡಬೇಕಾಗುತ್ತದೆ.

    MORE
    GALLERIES

  • 47

    Job Offer: ಲೇಆಫ್ ಸೀಸನ್​ನಲ್ಲಿ ಯಾವುದೇ ಜಾಬ್ ಆಫರ್​ ಒಪ್ಪಿಕೊಳ್ಳುವ ಮುನ್ನ ಎಚ್ಚರಿಕೆ

    2) ಪ್ರಯೋಜನಗಳು: ವಿವಿಧ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಆರೋಗ್ಯ ರಕ್ಷಣೆ, ಟೀಂ ವೆಕೇಷನ್, ಕೌಶಲ್ಯ ಅಭಿವೃದ್ಧಿ, ಉದ್ಯೋಗದ ತರಬೇತಿ, ಹೆಚ್ಚಿನ ಸಂಭಾವನೆ ಮತ್ತು ಪ್ರಾಯೋಜಿತ ವೃತ್ತಿಪರ ಕೋರ್ಸ್ ಗಳನ್ನು ಒಳಗೊಂಡಿರುವ ಬೆನಿಫಿಟ್ಸ್ ನೊಂದಿಗೆ ಆಕರ್ಷಿಸುತ್ತವೆ. ಈ ಎಲ್ಲಾ ವಿಷಯಗಳು ನಿಮಗೆ ತುಂಬಾ ಪ್ರಯೋಜನಕಾರಿಯಾಗಬಹುದು. ಅದಕ್ಕಾಗಿಯೇ ಕಂಪನಿಯಲ್ಲಿನ ಸೌಲಭ್ಯಗಳ ಬಗ್ಗೆ ಆರಂಭದಲ್ಲಿ ತಿಳಿದುಕೊಳ್ಳುವುದು ಅವಶ್ಯಕ.

    MORE
    GALLERIES

  • 57

    Job Offer: ಲೇಆಫ್ ಸೀಸನ್​ನಲ್ಲಿ ಯಾವುದೇ ಜಾಬ್ ಆಫರ್​ ಒಪ್ಪಿಕೊಳ್ಳುವ ಮುನ್ನ ಎಚ್ಚರಿಕೆ

    3) ಕಂಪನಿಯ ಸೇವೆ ಅಥವಾ ಉತ್ಪನ್ನದ ಬಗ್ಗೆ ತಿಳಿಯಿರಿ: ಕಂಪನಿಯ ಉತ್ಪನ್ನದ ಬಗ್ಗೆ ತಿಳಿದುಕೊಳ್ಳಿ. ನೀವು ಈ ಮಾಹಿತಿಯನ್ನು ಕಂಪನಿಯ ವೆಬ್ ಸೈಟ್ ನಲ್ಲಿ ಸಂಗ್ರಹಿಸಬಹುದು. ವ್ಯಾಪಾರ ವೆಬ್ ಸೈಟ್ ನಲ್ಲಿ ಅವರ ಹಣಕಾಸಿನ ಮಾಹಿತಿಯನ್ನು ತಿಳಿದುಕೊಳ್ಳಬಹುದು.

    MORE
    GALLERIES

  • 67

    Job Offer: ಲೇಆಫ್ ಸೀಸನ್​ನಲ್ಲಿ ಯಾವುದೇ ಜಾಬ್ ಆಫರ್​ ಒಪ್ಪಿಕೊಳ್ಳುವ ಮುನ್ನ ಎಚ್ಚರಿಕೆ

    4) ಕಂಪನಿಯ ಪರಿಸರದ ಬಗ್ಗೆ ಮಾಹಿತಿ ಇರಬೇಕು. ಕಂಪನಿಯ ಪರಿಸರ ಅಂದರೆ ಕಂಪನಿಯಲ್ಲಿನ ಉದ್ಯೋಗಿಗಳು ಪರಸ್ಪರ ಹೇಗೆ ವರ್ತಿಸುತ್ತಾರೆ? ನೀವು ಹೇಗೆ ಅಡ್ಜೆಸ್ಟ್ ಆಗಬಹುದು? ಮ್ಯಾನೇಜರ್ / ಬಾಸ್ ಉದ್ಯೋಗಿಗಳನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದರ ಕುರಿತು ತಿಳಿಯಿರಿ.

    MORE
    GALLERIES

  • 77

    Job Offer: ಲೇಆಫ್ ಸೀಸನ್​ನಲ್ಲಿ ಯಾವುದೇ ಜಾಬ್ ಆಫರ್​ ಒಪ್ಪಿಕೊಳ್ಳುವ ಮುನ್ನ ಎಚ್ಚರಿಕೆ

    ಕಂಪನಿಯಲ್ಲಿ ಕೆಲಸ ಮಾಡಿದ ಕೆಲವು ಹಳೆಯ ಉದ್ಯೋಗಿಗಳು ನಿಮಗೆ ಈ ಮಾಹಿತಿಯನ್ನು ನೀಡಬಹುದು. ಈ ಎಲ್ಲಾ ವಿಷಯಗಳನ್ನು ತಿಳಿದುಕೊಂಡ ಬಳಿಕವಷ್ಟೇ ನೀವು ಹೊಸ ಉದ್ಯೋಗದ ಜಾಬ್ ಆಫರ್ ಅನ್ನು ಅಕ್ಸೆಪ್ಟ್ ಮಾಡಿ. (ಸಾಂಕೇತಿಕ ಚಿತ್ರ)

    MORE
    GALLERIES