IRMSE ಎರಡು ಹಂತದ ಪರೀಕ್ಷೆಯಾಗಿದೆ. ಪ್ರಾಥಮಿಕ ಸ್ಕ್ರೀನಿಂಗ್ ಪರೀಕ್ಷೆಯ ನಂತರ ಮುಖ್ಯ ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಇರುತ್ತದೆ. ಭಾರತೀಯ ರೈಲ್ವೆ ನಿರ್ವಹಣಾ ಸೇವಾ ಮೊದಲ ಪರೀಕ್ಷೆಯನ್ನು (IRMSE) 2023 ರಲ್ಲಿ ನಡೆಸಲಾಗುವುದು.
2/ 7
UPSC ಸಿವಿಲ್ ಸರ್ವೀಸಸ್ ಪ್ರಿಲಿಮ್ಸ್ 2023 ಅನ್ನು ಫೆಬ್ರವರಿ 1 ಮತ್ತು ಮೇ 28 ರಂದು ನಡೆಸುವುದಾಗಿ ಹೇಳಿದ್ದಾರೆ. CSP ಪರೀಕ್ಷೆ 2023 ಅನ್ನು IRMS (ಮುಖ್ಯ) ಪರೀಕ್ಷೆಗೆ ಅಭ್ಯರ್ಥಿಗಳ ಸ್ಕ್ರೀನಿಂಗ್ ಗೆ ಸಹ ಪರಿಗಣಿಸಲಾಗುತ್ತದೆ. ಆದ್ದರಿಂದ ಆ ವೇಳಾಪಟ್ಟಿಯ ನಂತರ IRMS ಪರೀಕ್ಷೆ-2023 ಅನ್ನು ಸೂಚಿಸಲಾಗುವುದು.
3/ 7
IRMSE ಎರಡು ಹಂತದ ಪರೀಕ್ಷೆಯಾಗಿರುತ್ತದೆ. ಪೂರ್ವಭಾವಿ ಸ್ಕ್ರೀನಿಂಗ್ ಪರೀಕ್ಷೆ ನಂತರ ಮುಖ್ಯ ಲಿಖಿತ ಪರೀಕ್ಷೆ. ಇದಾದ ಬಳಿಕ ಸಂದರ್ಶನ ನಡೆಯಲಿದೆ. IRMS ಮುಖ್ಯ ಪರೀಕ್ಷೆಯಲ್ಲಿ ಸಾಂಪ್ರದಾಯಿಕ ಪ್ರಬಂಧ ಪ್ರಕಾರದ 4 ಪೇಪರ್ಗಳು ಇರುತ್ತವೆ. ಇದರಲ್ಲಿ ಸಬ್ಜೆಕ್ಟ್ ಸೆಟ್ ಅನ್ನು ಆಯ್ಕೆ ಮಾಡಿಕೊಳ್ಳಬೇಕು.
4/ 7
ಈ ಪತ್ರಿಕೆಗಳು ಅರ್ಹತಾ ಪತ್ರಿಕೆಗಳಲ್ಲಿ ಇರುತ್ತವೆ. ಪೇಪರ್ Aನಲ್ಲಿ ಅಭ್ಯರ್ಥಿಯು ಸಂವಿಧಾನದ ಎಂಟನೇ ಶೆಡ್ಯೂಲ್ ನಲ್ಲಿರುವ ಯಾವುದೇ ಒಂದು ಭಾರತೀಯ ಭಾಷೆಯನ್ನು ಆಯ್ಕೆ ಮಾಡಬೇಕಾಗುತ್ತದೆ. ಇದು 300 ಅಂಕಗಳಿಗೆ ಆಗಿರುತ್ತದೆ. ಅರ್ಹತಾ ಪತ್ರಿಕೆ B ಇಂಗ್ಲಿಷ್ ಆಗಿರುತ್ತದೆ. ಇದು ಸಹ 300 ಅಂಕಗಳಿಗೆ ಪರೀಕ್ಷೆ ನಡೆಸಲಾಗುತ್ತೆ.
5/ 7
ಐಚ್ಛಿಕ ವಿಷಯದ ಒಂದನೇ ಪೇಪರ್ 250 ಅಂಕಗಳನ್ನು ಹೊಂದಿರುತ್ತದೆ. ಐಚ್ಛಿಕ ವಿಷಯದ ಪೇಪರ್ 2 ಸಹ 250 ಅಂಕಗಳಾಗಿರುತ್ತದೆ. ವ್ಯಕ್ತಿತ್ವ ಪರೀಕ್ಷೆಯು 100 ಅಂಕಗಳಾಗಿರುತ್ತದೆ.
6/ 7
ಐಚ್ಛಿಕ ವಿಷಯಗಳ ಪಟ್ಟಿ: ಸಿವಿಲ್ ಇಂಜಿನಿಯರಿಂಗ್, ಮೆಕ್ಯಾನಿಕಲ್ ಇಂಜಿನಿಯರಿಂಗ್, ಎಲೆಕ್ಟ್ರಿಕಲ್ ಇಂಜಿನಿಯರಿಂಗ್, ಕಾಮರ್ಸ್ ಮತ್ತು ಅಕೌಂಟೆನ್ಸಿ.. ಇವುಗಳಲ್ಲಿ ಅಭ್ಯರ್ಥಿಯು ಕೇವಲ ಒಂದು ಐಚ್ಛಿಕ ವಿಷಯವನ್ನು ಆರಿಸಬೇಕಾಗುತ್ತದೆ.
7/ 7
pib.gov.in ನಲ್ಲಿ ಪತ್ರಿಕಾ ಪ್ರಕಟಣೆಯನ್ನು ಹೊರಡಿಸುವ ಮೂಲಕ ಈ ಪರೀಕ್ಷೆಗೆ ಸಂಬಂಧಿಸಿದ ಎಲ್ಲಾ ಬದಲಾವಣೆಗಳ ಮಾಹಿತಿಯನ್ನು ಪತ್ರಿಕಾ ಮಾಹಿತಿ ಬ್ಯೂರೋ ನೀಡಿದೆ. ವಿವರವಾಗಿ ಓದಲು, https://pib.gov.in/PressReleasePage.aspx?PRID=1880524 ಗೆ ಭೇಟಿ ನೀಡಿ.