CA ಆದ ನಂತರ, ಶ್ರೇಯಾಂಶ್ ಸುರಾನಾ ಮುಂಬೈನ L&T Ltd ಕಂಪನಿಯಲ್ಲಿ 1 ವರ್ಷ ಕೆಲಸ ಮಾಡಿದರು. ಅವರು ಸೆಪ್ಟೆಂಬರ್ 2019 ರಲ್ಲಿ ದೆಹಲಿಯಲ್ಲಿ 2020 ರ ಸಿವಿಲ್ ಸರ್ವೀಸಸ್ ಪರೀಕ್ಷೆಗೆ ತಮ್ಮ ತಯಾರಿಯನ್ನು ಪ್ರಾರಂಭಿಸಿದರು. ಇದಕ್ಕಾಗಿ ಕೆಲಸ ಬಿಟ್ಟಿದ್ದರು. ಮಾರ್ಚ್ನಲ್ಲಿ ಲಾಕ್ ಡೌನ್ ಆದ ಕಾರಣ, ಅವರು ತಮ್ಮ ಮನೆಗೆ ಮರಳಿದರು. ಪರೀಕ್ಷೆಗೆ ಹೆಚ್ಚಿನ ತಯಾರಿಯನ್ನು ಸ್ವಯಂ ಅಧ್ಯಯನದ ಮೂಲಕ ಮಾಡಿದರು.
CA ಮತ್ತು CS ಪರೀಕ್ಷೆಯಂತೆ, ಶ್ರೇಯಾಂಶ್ ಸುರಾನಾ ಕೂಡ UPSC ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲಿ ತೇರ್ಗಡೆಯಾದರು. ಅವರು 2020 ರ ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ 269 ನೇ ರ್ಯಾಂಕ್ ಪಡೆದರು. ಅವರಿಗೆ IRS (C&IT) ಸೇವೆಯನ್ನು ಮಂಜೂರು ಮಾಡಲಾಗಿದೆ. ಪ್ರಸ್ತುತ ಅವರು ಫರಿದಾಬಾದ್ ನಲ್ಲಿರುವ NACIN ನಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಅವರಿಗೆ ಸಹಾಯಕ ಕಮಿಷನರ್ ಹುದ್ದೆಯನ್ನು ನೀಡಲಾಗಿದೆ.