UPSC Motivational: IFS ಅಧಿಕಾರಿ ವೆಡ್ಸ್ IAS ಆಫೀಸರ್: ಹೆಂಡ್ತಿ ಫಾರಿನ್ನಲ್ಲಿ, ಗಂಡ ಭಾರತದಲ್ಲಿ ಕೆಲಸ
Success Story of IFS Kanishka Singh: IAS, IPS, IFS ಅಧಿಕಾರಿಗಳಾಗಬೇಕು ಎಂದು UPSC ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಸಾವಿರಾರು ಆಕಾಂಕ್ಷಿಗಳಿಗೆ, ಈಗಾಗಲೇ ಪರೀಕ್ಷೆಯಲ್ಲಿ ಯಶಸ್ವಿಯಾದವರ ಜೀವನ-ಸಲಹೆಗಳು ಸ್ಫೂರ್ತಿದಾಯಕವಾಗಿರುತ್ತದೆ. ಈ ನಿಟ್ಟಿನಲ್ಲಿ ಇಂದು ಯುವ ಐಎಎಸ್ ಅಧಿಕಾರಿಯ ಬಗ್ಗೆ ಮಾಹಿತಿ ಹೊತ್ತು ತಂದಿದ್ದೇವೆ. (photo courtesy: Kanishka Singh instagram account)
ಇವರು ಕಾನಿಷ್ಕಾ ಸಿಂಗ್, ದೆಹಲಿಯ ನಿವಾಸಿ. UPSC ಪರೀಕ್ಷೆಯ ಎರಡನೇ ಪ್ರಯತ್ನದಲ್ಲಿ ಇವರು ಯಶಸ್ವಿಯಾದರು. ಅವರು ಮನಃಶಾಸ್ತ್ರವನ್ನು ಐಚ್ಛಿಕ ವಿಷಯವಾಗಿ ಆಯ್ಕೆ ಮಾಡಿಕೊಂಡಿದ್ದರು.
2/ 7
ಮೊದಲ ಯತ್ನದಲ್ಲಿ ಮಾಡಿದ ತಪ್ಪುಗಳಿಂದ ಪಾಠ ಕಲಿತು, ಎರಡನೆಯದರಲ್ಲಿ ಅದನ್ನು ಸರಿಪಡಿಸಲು ತಮ್ಮ ಕೈಲಾದ ಪ್ರಯತ್ನ ಮಾಡಿದರು. ಇದಕ್ಕಾಗಿ, ಕನಿಷ್ಕಾ ಸಿಂಗ್ 60 ಅಣಕು ಪರೀಕ್ಷೆಗಳನ್ನು ತೆಗೆದುಕೊಂಡಿದ್ದರಂತೆ. IFS ಕನಿಷ್ಕಾ ಸಿಂಗ್ ಅವರ ಯಶಸ್ಸಿನ ಕಥೆ ಇಲ್ಲಿದೆ.
3/ 7
IFS ಕನಿಷ್ಕಾ ಸಿಂಗ್ 12 ನೇ ತರಗತಿ ನಂತರ, ದೆಹಲಿ ವಿಶ್ವವಿದ್ಯಾನಿಲಯದ ಲೇಡಿ ಶ್ರೀ ರಾಮ್ ಕಾಲೇಜ್ ನಿಂದ ಮನೋವಿಜ್ಞಾನದಲ್ಲಿ ಪದವಿ ಪಡೆದರು. ಕನಿಷ್ಕಾ ಸಿಂಗ್ ಕಾಲೇಜಿನಲ್ಲಿ ಓದುವ ಸಮಯದಲ್ಲೇ UPSC ಪರೀಕ್ಷೆ ತೆಗೆದುಕೊಂಡು ಸರ್ಕಾರಿ ಉದ್ಯೋಗ ಮಾಡಲು ನಿರ್ಧರಿಸಿದ್ದರು.
4/ 7
ಕನಿಷ್ಕಾ ಸಿಂಗ್ 2017 ರಲ್ಲಿ UPSC ಪರೀಕ್ಷೆಯ ಮೊದಲ ಪ್ರಯತ್ನವನ್ನು ನೀಡಿದರು. ಈ ಪ್ರಯತ್ನದಲ್ಲಿ ಆಕೆ ಯುಪಿಎಸ್ ಸಿ ಪ್ರಿಲಿಮ್ಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಸಾಧ್ಯವಾಗಲಿಲ್ಲ. ಇದರ ನಂತರ, ತನ್ನ ತಪ್ಪುಗಳಿಂದ ಪಾಠವನ್ನು ಕಲಿತ, ಅವರು 2018 ರಲ್ಲಿ UPSC ಪರೀಕ್ಷೆಗೆ ಎರಡನೇ ಪ್ರಯತ್ನವನ್ನು ನೀಡಿದರು.
5/ 7
ಈ ಸಲ 416ನೇ ರ್ಯಾಂಕ್ ಪಡೆಯುವ ಮೂಲಕ ಐಎಫ್ ಎಸ್ ಅಧಿಕಾರಿಯಾದರು. ಅವರು ಮನೋವಿಜ್ಞಾನವನ್ನು ಐಚ್ಛಿಕ ವಿಷಯವಾಗಿ ಆರಿಸಿಕೊಂಡಿದ್ದರು. IFS ಕನಿಷ್ಕಾ ಸಿಂಗ್ ರಷ್ಯಾದ ರಾಜಧಾನಿ ಮಾಸ್ಕೋದಲ್ಲಿ ತರಬೇತಿಯೊಂದಿಗೆ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದರು.
6/ 7
ಕನಿಷ್ಕಾ ಸಿಂಗ್ ಅವರು ಐಎಎಸ್ ಅಧಿಕಾರಿ ಅನ್ಮೋಲ್ ಸಾಗರ್ ಅವರನ್ನು ವಿವಾಹವಾಗಿದ್ದಾರೆ. ಅನ್ಮೋಲ್ ಪ್ರಸ್ತುತ ಮಹಾರಾಷ್ಟ್ರದ ಗೊಂಡಿಯಾದಲ್ಲಿ ನೇಮಕಗೊಂಡಿದ್ದಾರೆ. ಅದೇ ಸಮಯದಲ್ಲಿ, ಕನಿಷ್ಕಾ ಸಿಂಗ್ ಅವರನ್ನು ತುರ್ಕಮೆನಿಸ್ತಾನದ ರಾಜಧಾನಿ ಅಶ್ಗಾಬಾತ್ ನ ರಾಯಭಾರ ಕಚೇರಿಯಲ್ಲಿ ನಿಯೋಜಿಸಲಾಗಿದೆ. ಸೆಕೆಂಡ್ ಸೆಕ್ರೆಟರಿ ಅಲ್ಲದೆ ಚಾನ್ಸರಿ ಮುಖ್ಯಸ್ಥರೂ ಆಗಿದ್ದಾರೆ.
7/ 7
ಕನಿಷ್ಕಾ ಸಿಂಗ್ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಸಕ್ರಿಯವಾಗಿದ್ದಾರೆ. ಅವರು Instagram ನಲ್ಲಿ 72 ಸಾವಿರಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ