ಐಎಎಸ್ ಫೈಜಾನ್ ಅಹ್ಮದ್ ಮಧ್ಯಪ್ರದೇಶದ ಕೋಟಾ ನಿವಾಸಿ. ಅವರ ತಂದೆ ಅಹ್ಸಾನ್ ಅಹ್ಮದ್ ರೈಲ್ವೆಯಲ್ಲಿ ಕೆಲಸ ಮಾಡುತ್ತಾರೆ. ಅವರು ಸ್ಟೇಷನ್ ಮಾಸ್ಟರ್. ತಾಯಿ ಶಾಹಿದಾ ಬಾನೋ ವಿಜ್ಞಾನ ಪದವೀಧರೆ. ಫೈಜಾನ್ ಮೂವರು ಒಡಹುಟ್ಟಿದವರಲ್ಲಿ ಹಿರಿಯರು. ಅವರ ಸಹೋದರಿ ಕೋಟಾ ವೈದ್ಯಕೀಯ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಮತ್ತು ಕಿರಿಯ ಸಹೋದರ ಇತಿಹಾಸದಲ್ಲಿ ಎಂಎ ಮಾಡುತ್ತಿದ್ದಾರೆ.
ಫೈಜಾನ್ ಅಹ್ಮದ್ ತನ್ನ ಆರಂಭಿಕ ಶಿಕ್ಷಣವನ್ನು ಕೋಟಾದ ಶಾಲೆಯೊಂದರಲ್ಲಿಯೇ ಮಾಡಿದರು. 2018 ರಲ್ಲಿ, ಅವರು ರಾಜಸ್ಥಾನ ತಾಂತ್ರಿಕ ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ನಲ್ಲಿ ಬಿ.ಟೆಕ್ ಪದವಿಯನ್ನು ಪಡೆದರು. ಪದವಿಯ ಸಮಯದಲ್ಲಿ, ಅವರು ನಾಗರಿಕ ಸೇವೆಯತ್ತ ಒಲವು ತೋರಿದರು. ಸಮಾಜದಲ್ಲಿ ಬದಲಾವಣೆ ತರಲು ಏನಾದರು ಮಾಡಬೇಕೆಂದು ಅಜ್ಜಿ ಬಯಸಿದ್ದರು. ಅದಕ್ಕಾಗಿಯೇ ಅವರ ಹಿರಿಯರು ಮತ್ತು ಸ್ನೇಹಿತರು ಯುಪಿಎಸ್ ಸಿ ಪರೀಕ್ಷೆಗೆ ತಯಾರಿ ನಡೆಸುವಂತೆ ಸಲಹೆ ನೀಡಿದರು.
ನಿತ್ಯ 9ರಿಂದ 10 ಗಂಟೆಗಳ ಕಾಲ ಅಧ್ಯಯನ ಮಾಡುತ್ತಿದ್ದರು. ಪ್ರತಿ ಎರಡು ಗಂಟೆಗಳಿಗೊಮ್ಮೆ 15 ರಿಂದ 20 ನಿಮಿಷಗಳ ಅಂತರವನ್ನು ತೆಗೆದುಕೊಳ್ಳತ್ತಿದ್ದರಂತೆ. ಕೊರೋನಾ ಅವಧಿಯಲ್ಲಿ, ಎಲ್ಲರೂ ಅವರವರ ಮನೆಗಳಲ್ಲಿ ಬಂಧಿತರಾಗಿದ್ದಾಗ, ಇವರು ವೀಡಿಯೊ ಕರೆಗಳು ಮತ್ತು ಚಾಟ್ ಗಳ ಮೂಲಕ ಸ್ನೇಹಿತರೊಂದಿಗೆ ಸಂಪರ್ಕದಲ್ಲಿದ್ದರು. ಸ್ನೇಹಿತರು ಯಾವಾಗಲು ಇವರನ್ನು ಪ್ರೇರೇಪಿಸುತ್ತಿದ್ದರಂತೆ.