ಪದವಿ ಪಡೆದ ತಕ್ಷಣ, ಅವರು ಹಣಕಾಸು ಮಾರುಕಟ್ಟೆ ವಿಶ್ಲೇಷಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಆದರೆ, 3 ತಿಂಗಳ ನಂತರ ಕೆಲಸ ಬಿಟ್ಟು UPSC ಪರೀಕ್ಷೆಗೆ ತಯಾರಿ ಆರಂಭಿಸಿದರು. UPSC ಪರೀಕ್ಷೆಯ ಎರಡನೇ ಪ್ರಯತ್ನದಲ್ಲಿ ಅರ್ಪಿತ್ ಗುಪ್ತಾ ಯಶಸ್ವಿಯಾಗಿದ್ದಾರೆ. ಅವರ ಮೊದಲ ಪ್ರಯತ್ನದಲ್ಲಿ ಕೇವಲ 1 ಅಂಕದಿಂದ ವಂಚಿತರಾದರು. ಇದರಿಂದಾಗಿ ಅವರು ತೀವ್ರ ನಿರಾಶೆಗೊಂಡರು.
IAS ಅರ್ಪಿತ್ ಗುಪ್ತಾ ಅವರು UPSC ಪರೀಕ್ಷೆಯ ಅಂಕಪಟ್ಟಿಯನ್ನು ಸಾಮಾಜಿಕ ಮಾಧ್ಯಮ ಸೈಟ್ Instagram ನಲ್ಲಿ ಹಂಚಿಕೊಂಡಿದ್ದಾರೆ. ಅವರು ಗಣಿತವನ್ನು ಐಚ್ಛಿಕ ವಿಷಯವಾಗಿ ಆಯ್ಕೆ ಮಾಡಿಕೊಂಡಿದ್ದರು. ಅರ್ಪಿತ್ ಲಿಖಿತ ಪರೀಕ್ಷೆಯಲ್ಲಿ ಒಟ್ಟು 805 ಅಂಕಗಳನ್ನು ಮತ್ತು ವ್ಯಕ್ತಿತ್ವ ಪರೀಕ್ಷೆಯಲ್ಲಿ ಅಂದರೆ ಐಎಎಸ್ ಸಂದರ್ಶನದಲ್ಲಿ 193 ಅಂಕಗಳನ್ನು ಪಡೆದಿದ್ದರು. ಅವರ ಒಟ್ಟು ಅಂಕಗಳು 998.