UPSC Inspirational: ಜಸ್ಟ್ 24 ವರ್ಷಕ್ಕೇ IAS ಅಧಿಕಾರಿ ಇವರು: ಪತ್ನಿ ಕೂಡ IFS ಆಫೀಸರ್
Success Story of IAS Anmol Sagar: ದೇಶದ ಅದೆಷ್ಟೋ ಯುವಕ, ಯುವತಿಯರು ಐಎಎಸ್, ಐಪಿಎಸ್ ಆಗಬೇಕೆಂದು ಕನಸು ಕಾಣುತ್ತಾರೆ. ಆದರೆ ಕೆಲವೇ ಕೆಲವರು ಮಾತ್ರ UPSC ಪರೀಕ್ಷೆಯಲ್ಲಿ ಯಶಸ್ವಿಯಾಗಿ, ತಮ್ಮ ಕನಸ್ಸನ್ನು ನನಸು ಮಾಡಿಕೊಳ್ಳುತ್ತಾರೆ. ಈ ರೀತಿ ಯುಪಿಎಸ್ ಸಿಯಲ್ಲಿ ಯಶಸ್ವಿಯಾದವರ ಕಥೆ, ಸಲಹೆಗಳು ಆಕಾಂಕ್ಷಿಗಳಿಗೆ ಸ್ಪೂರ್ತಿಯಾಗಿದೆ. ಈ ಸರಣಿಯಲ್ಲಿ ಇಂದಿನ ಅತಿಥಿ ಐಎಎಸ್ ಅಧಿಕಾರಿ ಅನ್ಮೋಲ್ ಸಾಗರ್.
1995 ರಲ್ಲಿ ಉತ್ತರ ಪ್ರದೇಶದಲ್ಲಿ ಜನಿಸಿದ ಅನ್ಮೋಲ್ ಸಾಗರ್ 24 ನೇ ವಯಸ್ಸಿನಲ್ಲಿ UPSC ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. 2016 ರಲ್ಲಿ ಪದವಿಯನ್ನು ಪೂರ್ಣಗೊಳಿಸಿದ ನಂತರ, ಅವರು 22 ನೇ ವಯಸ್ಸಿನಲ್ಲಿ UPSC ಪರೀಕ್ಷೆಗೆ ಮೊದಲ ಪ್ರಯತ್ನಿಸಿದರು.
2/ 7
ಮೊದಲ ಪ್ರಯತ್ನದಲ್ಲಿ ಪ್ರಿಲಿಮ್ಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಸಹ ಸಾಧ್ಯವಾಗಲಿಲ್ಲ. ಮೊದಲ ಬಾರಿಗೆ ಯುಪಿಎಸ್ ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದರೂ ಅನ್ಮೋಲ್ ಸಾಗರ್ ಛಲ ಬಿಡಲಿಲ್ಲ.
3/ 7
ನಂತರ 2ನೇ ಪ್ರಯತ್ನದಲ್ಲಿ 414ನೇ ರ್ಯಾಂಕ್ ಗಳಿಸಿದರು. ಲಿಖಿತ ಪರೀಕ್ಷೆಯಲ್ಲಿ ಅವರು ಒಟ್ಟು 809 ಅಂಕಗಳನ್ನು ಪಡೆದಿದ್ದರು. ಅದೇ ಸಮಯದಲ್ಲಿ, ಅವರ ವ್ಯಕ್ತಿತ್ವ ಪರೀಕ್ಷೆಯಲ್ಲಿ 168 ಅಂಕಗಳೊಂದಿಗೆ ಒಟ್ಟು ಅಂಕ 977 ಆಗಿತ್ತು.
4/ 7
ಐಎಎಸ್ ಅನ್ಮೋಲ್ ಸಾಗರ್ ಪ್ರಸ್ತುತ ಮಹಾರಾಷ್ಟ್ರ ಕೇಡರ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅನ್ಮೋಲ್ ಅವರ ಪತ್ನಿ ಕನಿಷ್ಕಾ ಸಿಂಗ್ IFS ಅಧಿಕಾರಿ (IFS Kanishka Singh). ಇವರು ತುರ್ಕಮೆನಿಸ್ತಾನದ ರಾಜಧಾನಿ ಅಶ್ಗಾಬಾತ್ ರಾಯಭಾರ ಕಚೇರಿಯಲ್ಲಿ ನೇಮಕಗೊಂಡಿದ್ದಾರೆ. ಅವರು ಎರಡನೇ ಕಾರ್ಯದರ್ಶಿ ಮತ್ತು ಚಾನ್ಸರಿ ಮುಖ್ಯಸ್ಥರಾಗಿದ್ದಾರೆ.
5/ 7
ಐಎಎಸ್ ಅನ್ಮೋಲ್ ಸಾಗರ್ ಅವರು ದೆಹಲಿ ವಿಶ್ವವಿದ್ಯಾನಿಲಯದ ಕಿರೋರಿ ಮಾಲ್ ಕಾಲೇಜಿನಲ್ಲಿ ಭೂಗೋಳಶಾಸ್ತ್ರದಲ್ಲಿ ಬಿಎ ಆನರ್ಸ್ ಮಾಡಿದ್ದಾರೆ. ಕಾಲೇಜಿನಲ್ಲಿ ಓದುತ್ತಿರುವಾಗಲೇ ಐಎಎಸ್ ಅಧಿಕಾರಿಯಾಗುವ ಮೂಲಕ ಸಾರ್ವಜನಿಕ ಸೇವೆ ಮಾಡಬೇಕೆಂದು ನಿರ್ಧರಿಸಿದ್ದರು.
6/ 7
IAS ಅನ್ಮೋಲ್ ಸಾಗರ್ Quora ನಲ್ಲಿ ಸಾಕಷ್ಟು ಸಕ್ರಿಯರಾಗಿದ್ದಾರೆ. ಅಲ್ಲಿನ ಬಳಕೆದಾರರ ಪ್ರಶ್ನೆಗಳಿಗೆ ಉತ್ತರಿಸಲು ಕೈಲಾದಷ್ಟು ಪ್ರಯತ್ನಿಸುತ್ತಾನೆ. ಇನ್ ಸ್ಟಾಗ್ರಾಮ್ ನಲ್ಲಿ ಸುಮಾರು 40 ಸಾವಿರ ಅನುಯಾಯಿಗಳನ್ನು ಅನ್ಮೋಲ್ ಹೊಂದಿದ್ದಾರೆ.
7/ 7
ಎಲ್ಲಾ ಅಭ್ಯರ್ಥಿಗಳಿಗೆ ಪರೀಕ್ಷೆಯ ತಯಾರಿಯ ಸಮಯವು ತುಂಬಾ ಕಠಿಣವಾಗಿರುತ್ತೆ ಎಂದು ಅನ್ಮೋಲ್ ಸಾಗರ್ ಸಲಹೆ ನೀಡುತ್ತಾರೆ. ಆ ಸಮಯದಲ್ಲಿ ನಿಮ್ಮ ಆಲೋಚನೆಯನ್ನು ಧನಾತ್ಮಕವಾಗಿ ಇಟ್ಟುಕೊಂಡು, ಪೂರ್ಣ ಮನಸ್ಸಿನಿಂದ ಅಧ್ಯಯನ ಮಾಡಿ ಎನ್ನುತ್ತಾರೆ.