ಮೂಲತಃ ದೆಹಲಿಯವರಾದ ಅಂಕಿತಾ ಜೈನ್ ಅವರಿಗೆ ಪ್ರಸ್ತುತ 28 ವರ್ಷ. ಅವರು ಆಗ್ರಾದ ನಿವಾಸಿಯಾಗಿರುವ ಐಪಿಎಸ್ ಅಭಿನವ್ ತ್ಯಾಗಿ ಅವರನ್ನು ವಿವಾಹವಾಗಿದ್ದಾರೆ. ಅಂಕಿತಾ ಜೈನ್ ಡಾ.ರಾಕೇಶ್ ತ್ಯಾಗಿ ಮತ್ತು ಡಾ.ಸವಿತಾ ತ್ಯಾಗಿ ಅವರ ಸೊಸೆ. ಅಂಕಿತಾ ಮತ್ತು ಅವರ ತಂಗಿ ವೈಶಾಲಿ ಜೈನ್ ಯುಪಿಎಸ್ಸಿ ಪರೀಕ್ಷೆಯಲ್ಲಿ ಒಟ್ಟಿಗೆ ತೇರ್ಗಡೆಯಾಗಿದ್ದಾರೆ. ವೈಶಾಲಿ ಕೂಡ ಐಎಎಸ್ ಅಧಿಕಾರಿ.
ಅವರು 2017 ರಲ್ಲಿ UPSC ಪರೀಕ್ಷೆಗೆ ತಯಾರಿ ಆರಂಭಿಸಿದರು. ಮೊದಲ ಪ್ರಯತ್ನದಲ್ಲಿ ಅವರಿಗೆ ಯಶಸ್ಸು ಸಿಗಲಿಲ್ಲ. ಎರಡನೇ ಸಲ 270ನೇ ರ್ಯಾಂಕ್ ಗಳಿಸಿದರು. ಈ ಕಾರಣದಿಂದಾಗಿ, ಅವರು ಐಎಎಸ್ ಗೆ ಆಯ್ಕೆಯಾಗಲಿಲ್ಲ ಮತ್ತು ಅವರು ಭಾರತೀಯ ಖಾತೆ ಸೇವೆಗೆ ಸೇರಿದರು. ನಂತರ ಮೂರನೇ ಪ್ರಯತ್ನದಲ್ಲಿ ವಿಫಲರಾದರು. ಕೊನೆಗೂ ನಾಲ್ಕನೇ ಪ್ರಯತ್ನದಲ್ಲಿ ಮೂರನೇ ರ್ಯಾಂಕ್ ಪಡೆದು ಐಎಎಸ್ ಆಗುವ ಕನಸನ್ನು ನನಸು ಮಾಡಿಕೊಂಡರು.