ಪಕ್ಕದ ರಾಜ್ಯ ತೆಲಂಗಾಣದ ಖಮ್ಮಂ ಪರೇಡ್ ಮೈದಾನದಲ್ಲಿ ನಡೆದ ಪೊಲೀಸ್ ಪೇದೆ ಮತ್ತು ಎಸ್ ಐ ದೈಹಿಕ ಸಾಮರ್ಥ್ಯ ಪರೀಕ್ಷೆಯಲ್ಲಿ ತಾಯಿ ಮತ್ತು ಮಗಳು ಎಸ್ ಐ ಹುದ್ದೆಗೆ ಆಯ್ಕೆಯಾಗಿ ಅರ್ಹತೆ ಪಡೆದರು. ಸಾಧಿಸುವ ಹಠ, ಮಾಡುತ್ತಿರುವ ಉದ್ಯೋಗದಲ್ಲಿ ಉನ್ನತ ಮಟ್ಟಕ್ಕೇರಬೇಕೆಂಬ ಆ ತಾಯಿಯ ಆಸೆ ಫಲ ನೀಡಿದೆ. ತಾಯಿ ಕಲಿಸಿದ ಹಾದಿಯಲ್ಲಿ ಮಗಳು ಕೂಡ ಮೊದಲ ಪ್ರಯತ್ನದಲ್ಲೇ ಗುರಿ ಮುಟ್ಟಿದಳು.
ನಾಗಮಣಿ ಅವರ ಪತಿ ಕೃಷಿ ಕೂಲಿಕಾರರಾಗಿದ್ದರಿಂದ, ನಾಗಮಣಿಯಲ್ಲಿನ ಕ್ರೀಡಾ ಆಸಕ್ತಿಗೆ ಪ್ರೋತ್ಸಾಹ ನೀಡಿದರು. ನಾಗಮಣಿ ರಾಷ್ಟ್ರಮಟ್ಟದ ಹ್ಯಾಂಡ್ ಬಾಲ್ ಸ್ಪರ್ಧೆಗಳಲ್ಲೂ ಭಾಗವಹಿಸಿದ್ದರು. ಪದವಿ ಪಡೆದ ನಾಗಮಣಿ ಮೊದಲು ಖಮ್ಮಂ ಜಿಲ್ಲೆಯಲ್ಲಿ ಅಂಗನವಾಡಿ ಶಿಕ್ಷಕಿಯಾಗಿ ಕೆಲಸ ಮಾಡಿದರು. ಬಳಿಕ 2007ರಲ್ಲಿ ಗೃಹರಕ್ಷಕರಾಗಿ ಆಯ್ಕೆಯಾಗಿ 2018ರವರೆಗೆ ಕರ್ತವ್ಯ ನಿರ್ವಹಿಸಿದ್ದರು.
ಅಂತಿಮವಾಗಿ ತಾಯಿ ಮತ್ತು ಮಗಳು ಒಟ್ಟಿಗೆ ದೈಹಿಕ ಪರೀಕ್ಷೆಯಲ್ಲಿ ಪಾಸ್ ಮಾಗಿದ್ದಾರೆ. ತಾಯಿಯಂತೆಯೇ ಪೊಲೀಸ್ ಇಲಾಖೆಯಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳುವ ಗುರಿ ಹೊಂದಿರುವುದಾಗಿ ತ್ರಿಲೋಕಿಣಿ ಹೇಳಿದ್ದಾರೆ. ಕಾನ್ಸ್ಟೆಬಲ್ ನಾಗಮಣಿ ಹಾಗೂ ಅವರ ಪುತ್ರಿ ತ್ರಿಲೋಕಿನಿ ಕೂಡ ಎಸ್ ಐ ಹುದ್ದೆಗೆ ಅರ್ಹತೆ ಪಡೆದಿರುವುದಕ್ಕೆ ಎಲ್ಲರೂ ಹರ್ಷ ವ್ಯಕ್ತಪಡಿಸಿದ್ದಾರೆ. ಅವರ ಪರಿಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.