Career News: ಸಂಬಳ, ಪ್ರಮೋಷನ್, ರಜೆಗಳು- ಇವುಗಳಲ್ಲಿ ಭಾರತದ ಉದ್ಯೋಗಿಗಳಿಗೆ ಯಾವುದು ಮುಖ್ಯ?
ಭಾರತದಲ್ಲಿನ ಉದ್ಯೋಗಿಗಳು ತಮ್ಮ ಕೆಲಸದಿಂದ, ಸಂಸ್ಥೆಯಿಂದ ಏನನ್ನು ನಿರೀಕ್ಷಿಸುತ್ತಾರೆ ಗೊತ್ತೇ? ಈ ಬಗ್ಗೆ ಜಾಬ್ ಸರ್ಚ್ ವೆಬ್ ಸೈಟ್ ಲಿಂಕ್ಡ್ ಇನ್ ವಿಶಿಷ್ಟವಾದ ಸರ್ವೆಯನ್ನು ನಡೆಸಿದೆ. ಅದಲ್ಲಿ ಅನೇಕ ಕುತೂಹಲಕಾರಿ ವಿಚಾರಗಳು ತಿಳಿದು ಬಂದಿದೆ.
ಉದ್ಯೋಗಾಕಾಂಕ್ಷಿಗಳು ಹಾಗೂ ಕಂಪನಿಗಳ ಮಧ್ಯೆ ಕೊಂಡಿಯಂತೆ ಕೆಲಸ ಮಾಡುತ್ತಿರುವ ಲಿಂಕ್ಡ್ ಇನ್, ಉದ್ಯಮದ ಅಗತ್ಯತೆಗಳು ಮತ್ತು ಪ್ರವೃತ್ತಿಗಳ ಕುರಿತು ಸಮೀಕ್ಷೆಗಳನ್ನು ಪ್ರಕಟಿಸುತ್ತದೆ. ನಮ್ಮ ದೇಶದ ಉದ್ಯೋಗಿಗಳು ಮತ್ತು ಉದ್ಯೋಗಾಕಾಂಕ್ಷಿಗಳು ಏನು ಬಯಸುತ್ತಾರೆ ಎಂಬುದನ್ನು ಈಗ ತಿಳಿಸಿದ್ದಾರೆ.
2/ 8
ಲಿಂಕ್ಡ್ ಇನ್ ವರದಿಯ ಪ್ರಕಾರ, ಸಿಲ್ಕ್ಸ್ ಹೆಚ್ಚಿಸುವುದು, ವರ್ಕ್-ಲೈಫ್ ಬ್ಯಾಲೆನ್ಸ್, ಹೆಚ್ಚಿನ ಸಂಬಳವನ್ನು ಬಯಸುವುದು, ಇಲ್ಲದಿದ್ದರೆ ಹೆಚ್ಚಿನ ಬಡ್ತಿಗಳನ್ನು ನಿರೀಕ್ಷಿಸುವುದು ನಮ್ಮ ಉದ್ಯೋಗಿಗಳ ಆದ್ಯತೆಯಾಗಿದೆಯಂತೆ.
3/ 8
ಉದ್ಯೋಗಿಗಳು ವೃತ್ತಿಜೀವನದ ಆರಂಭಿಕ ಪ್ರಗತಿಯು ಮುಖ್ಯವೆಂದು ಭಾವಿಸುತ್ತಾರೆ ಎಂದು ಲಿಂಕ್ಡ್ ಇನ್ ಹೇಳುತ್ತದೆ. ಎರಡು ಅಥವಾ ಮೂರು ವರ್ಷಗಳ ಕಾಲ ಒಂದೇ ಪೋಸ್ಟ್ ನಲ್ಲಿ ಉಳಿದಿರುವ ಉದ್ಯೋಗಿಗಳಿಗಿಂತ, ಡೆಸಿಗ್ನೇಷನ್ ಬದಲಾಯಿಸಿದವರು ಅದೇ ಕಂಪನಿಯಲ್ಲಿ ಉಳಿಯಲು ಬಯಸುತ್ತಾರೆ.
4/ 8
ಹೆಚ್ಚಿನ ಕ್ಷೇತ್ರಗಳಲ್ಲಿನ ಉದ್ಯೋಗಿಗಳಿಗೆ ತಮ್ಮ ವೃತ್ತಿಜೀವನದಲ್ಲಿ ವೇಗವಾಗಿ ಮುನ್ನಡೆಯುವುದು ಮತ್ತು ಇನ್ನೂ ಬದಲಾವಣೆಯನ್ನು ಬಯಸುವುದು ಒಂದು ಪ್ರಮುಖ ಆದ್ಯತೆಯಾಗಿದೆ. ವೃತ್ತಿಪರರು ವಿಶೇಷವಾಗಿ ಏನು ಬಯಸುತ್ತಾರೆ? ಉದ್ಯೋಗದಾತರು ಏನು ನೀಡುತ್ತಿದ್ದಾರೆ? ಇವೆರಡರ ನಡುವೆ ಸಂಪರ್ಕ ಕಡಿತವಾಗುತ್ತಿರುವುದನ್ನು ಈ ಸಂಶೋಧನೆ ಒತ್ತಿ ಹೇಳಿದೆ.
5/ 8
2015ರ ನಂತರ ಉದ್ಯೋಗಿಗಳಿಗೆ ಅಗತ್ಯವಿರುವ ಕೌಶಲ್ಯಗಳಲ್ಲಿ ಹಲವು ಬದಲಾವಣೆಗಳಾಗಿವೆ. ಈ ಬದಲಾವಣೆಗಳು 2025 ರ ವೇಳೆಗೆ 50 ಪ್ರತಿಶತದಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಕಂಪನಿಗಳು ಉದ್ಯೋಗಿಗಳ ಅಸ್ತಿತ್ವದಲ್ಲಿರುವ ಕೌಶಲ್ಯಗಳನ್ನು ಸಹ ನೋಡುತ್ತವೆ.
6/ 8
ಭಾರತದಲ್ಲಿ ಅರ್ಧದಷ್ಟು (51%) ಉದ್ಯೋಗದಾತರು ಈಗ ಉದ್ಯೋಗಿ ಸಹಯೋಗ ಮತ್ತು ಜ್ಞಾನ ಹಂಚಿಕೆಯನ್ನು ಪ್ರೋತ್ಸಾಹಿಸುತ್ತಾರೆ. ಇದು ಉದ್ಯೋಗಿಗಳಿಗೆ ತಮ್ಮ ಸಹೋದ್ಯೋಗಿಗಳೊಂದಿಗೆ ಸಂಬಂಧವನ್ನು ಬೆಳೆಸಲು ಸಹಾಯ ಮಾಡುತ್ತದೆ.
7/ 8
ಕಂಪನಿ ಉದ್ಯೋಗಿಗಳನ್ನು ನಡೆಸಿಕೊಳ್ಳುವ ರೀತಿ ತುಂಬಾನೇ ಮುಖ್ಯ. ಇಲ್ಲವಾದರೆ ಅವರು ಕಂಪನಿಯ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುವ ಸಾಧ್ಯತೆಗಳಿವೆ. ಆದ್ದರಿಂದ ಸಂಸ್ಥೆಗಳು ಇಂತಹ ವಿಷಯಗಳಲ್ಲಿ ಜಾಗರೂಕರಾಗಿರಬೇಕು.
8/ 8
ನಾಯಕರು ಯಾವಾಗಲೂ ತಮ್ಮ ಉದ್ಯೋಗಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು. ಇಂತಹ ವಿಷಯಗಳನ್ನು ಕಲಿಯಲು ಅನೇಕ ಲಿಂಕ್ಡ್ ಇನ್ ಕಲಿಕೆಯ ಕೋರ್ಸ್ಗಳಿವೆ. ಈ ವರ್ಷದ ಡಿಸೆಂಬರ್ 31 ರವರೆಗೆ ಅವು ಉಚಿತವಾಗಿ ಲಭ್ಯವಿವೆ. ಪ್ರಾತಿನಿಧಿಕ ಚಿತ್ರ