KAS Motivational: ಕೆಎಎಸ್ ಪರೀಕ್ಷೆಯಲ್ಲಿ ಪಾಸ್ ಆದ ಕೂಲಿ: ರೈಲ್ವೆ ನಿಲ್ದಾಣದಲ್ಲಿನ ಉಚಿತ ವೈ-ಫೈಯೇ ಆಸರೆ
ಸರ್ಕಾರಿ ಕೆಲಸ ಪಡೆದುಕೊಳ್ಳುವುದು ಬಹುತೇಕರ ಕನಸು. ಪ್ರತಿವರ್ಷ ಲಕ್ಷಾಂತರ ಅಭ್ಯರ್ಥಿಗಳು ಸರ್ಕಾರಿ ಕೆಲಸಗಳಿಗಾಗಿ ನಡೆಯುವ ಕಠಿಣ ಪರೀಕ್ಷೆಗಳಿಗೆ ಹಾಜರಾಗುತ್ತಾರೆ. ಆದರೆ ಕೆಲವೇ ಕೆಲವು ಮಂದಿ ಇದರಲ್ಲಿ ಯಶಸ್ವಿಯಾಗಿ ಸರ್ಕಾರಿ ನೌಕರಿ ಪಡೆದುಕೊಳ್ಳುತ್ತಾರೆ. ಇಂತವರ ಸಾಲಿನಲ್ಲಿ ಅಪರೂಪದ ವ್ಯಕ್ತಿಯೊಬ್ಬರು ಸ್ಥಾನ ಪಡೆದುಕೊಂಡಿದ್ದಾರೆ.
ಇವರ ಹೆಸರು ಶ್ರೀನಾಥ್ ಕೆ.. ಕೊಚ್ಚಿ ರೈಲ್ವೆ ನಿಲ್ದಾಣದಲ್ಲಿ ಕೂಲಿ ಕೆಲಸ ಮಾಡುತ್ತಾರೆ. ಕೂಲಿ ಕಾರ್ಮಿಕನಾದರೂ ಕೆಲಸದ ಜೊತೆ ಕಠಿಣ ಪರಿಶ್ರಮದಿಂದ ಓದಿ ಈಗ KAS (ಕೇರಳ ಲೋಕಸೇವಾ ಆಯೋಗ) ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದಾರೆ.
2/ 7
ಶ್ರೀನಾಥ್ ಸರ್ಕಾರಿ ಕೆಲಸದ ಪರೀಕ್ಷೆಗಾಗಿ ಯಾವುದೇ ತರಬೇತಿ, ವಿಶೇಷ ಪುಸ್ತಕಗಳನ್ನು ಅವಲಂಬಿಸಿರಲಿಲ್ಲ. ತಾನು ಕೆಲಸ ಮಾಡುತ್ತಿದ್ದ ರೈಲ್ವೆ ನಿಲ್ದಾಣದಲ್ಲಿ ಸಿಗುವ ಉಚಿತ ವೈಫೈ ಅನ್ನೇ ಬಳಸಿಕೊಂಡು ಅಪರೂಪದ ಸಾಧನೆ ಮಾಡಿದ್ದಾರೆ.
3/ 7
ಕುಟುಂಬಕ್ಕೆ ಆಸರೆ ಆಗಬೇಕು, ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎಂದ ಇವರ ಛಲಕ್ಕೆ ಬಡತನ ಅಡ್ಡಿಯಾಗಿಲ್ಲ. ಕೂಡಿಟ್ಟ ಹಣದಲ್ಲಿ ಸ್ಮಾರ್ಟ್ ಫೋನ್, ಸಿಮ್ ಖರೀದಿಸಿದರಂತೆ. ರೈಲ್ವೆ ಸ್ಟೇಷನ್ ನಲ್ಲಿ ಸಿಗುತ್ತಿದ್ದ ಉಚಿತ ಇಂಟರ್ ನೆಟ್ ಅನ್ನೇ ಬಳಸಿಕೊಳ್ಳುತ್ತಿದ್ದರಂತೆ.
4/ 7
ಮೊಬೈಲ್ ನಲ್ಲೇ ಕೆಎಎಸ್ ಪರೀಕ್ಷೆಗೆ ಬೇಕಾದ ಅಧ್ಯಯನ ಸಾಮಾಗ್ರಿಗಳನ್ನು ಕಲೆ ಹಾಕಿದ್ದರಂತೆ. ಆಡಿಯೋ ಪುಸ್ತಕಗಳನ್ನು ಕೇಳುತ್ತಾ ಕೆಲಸ ಮಾಡುತ್ತಿದ್ದರಂತೆ. ಇದರ ಸಹಾಯದಿಂದಲೇ ಇಂದು ರಾಜ್ಯ ಮಟ್ಟದ ಕಠಿಣ ಪರೀಕ್ಷೆಯಾದ ಕೆಎಎಸ್ ನಲ್ಲಿ ಯಶಸ್ವಿಯಾಗಿದ್ದಾರೆ.
5/ 7
ನಿರಂತರ ಶ್ರಮದಿಂದ ಈಗ ವಿಲೇಜ್ ಅಸಿಸ್ಟೆಂಟ್ ಹುದ್ದೆಯನ್ನು ಪಡೆದುಕೊಂಡಿದ್ದಾರೆ. ಎಲ್ಲಾ ಸೌಲಭ್ಯಗಳಿದ್ದರೂ ಪರೀಕ್ಷೆ ಕಠಿಣ, ಸಮಯ ಇಲ್ಲ ಎಂದು ಕಾರಣಗಳನ್ನು ನೀಡುವವರ ಮಧ್ಯೆ ಸದ್ದೇ ಇಲ್ಲದೇ ಸಾಧನೆ ಮಾಡಿ ತೋರಿಸಿದ್ದಾರೆ ಶ್ರೀನಾಥ್.
6/ 7
ಈತನ ಸಾಧನೆಯಲ್ಲಿ ಕೇಂದ್ರ ಸಚಿವ ಪಿಯೂಷ್ ಗೋಯೆಲ್ ಕೂಡ ಶ್ಲಾಘಿಸಿದ್ದಾರೆ. ಇನ್ನು ಶ್ರೀನಾಥ್ ಸಾಧನೆ ಅವರ ಜೊತೆ ಕೆಲಸ ಮಾಡುತ್ತಿದ್ದ ಇತರೆ ಕೂಲಿಗಳಿಗೂ ಹೆಮ್ಮೆ ತಂದಿದೆಯಂತೆ.
7/ 7
ಒಂದು ಸರ್ಕಾರಿ ಕೆಲಸ ಸಿಕ್ಕಿ ಬಿಡ್ತು, ಜೀವನವೇ ಸೆಟಲ್ ಆಯ್ತು ಎಂದು ಶ್ರೀನಾಥ್ ಸಂಭ್ರಮಿಸುತ್ತಿಲ್ಲ. ಬದಲಿಗೆ ಮುಂದೆ ಐಎಎಸ್ ಅಧಿಕಾರಿಯಾಗುವ ಕನಸು ಕಂಡಿದ್ದಾರೆ. ಇದಕ್ಕಾಗಿ ಯುಪಿಎಸ್ ಸಿ ಪರೀಕ್ಷೆ ಗೆ ತಯಾರಿ ಆರಂಭಿಸಿದ್ದಾರಂತೆ. ಈ ಬಡ ಹುಡ್ಗನ ಸಾಧನೆಗೆ ನಿಮ್ಮದೂ ಒಂದು ಹಾರೈಕೆಯೂ ಇರಲಿ. (ಸಾಂದರ್ಭಿಕ ಚಿತ್ರ)