Job Interview Tips: ಇಂಟರ್ವ್ಯೂನಲ್ಲಿ ಜಸ್ಟ್ ಈ 3 ವಾಕ್ಯಗಳನ್ನು ಹೇಳಿದ್ರೆ ಕೆಲಸ ಸಿಗೋದು ಗ್ಯಾರಂಟಿ
ಒಂದು ಕೆಲಸಕ್ಕೆ ನೂರಾರು ಮಂದಿ ರೆಸ್ಯೂಮ್ ಕಳುಹಿಸುವುದನ್ನು ನಾವು ಕಾಣಬಹುದು. ಒಂದೊಳ್ಳೆಯ ಕೆಲಸಕ್ಕಾಗಿ ತುಂಬಾನೇ ಕಾಂಪಿಟೇಷನ್ ಇರುತ್ತೆ. 100 ಜನರ ಮಧ್ಯೆ ನಿಮ್ಮನ್ನೇ ಕಂಪನಿ ಆಯ್ಕೆ ಮಾಡಬೇಕೆಂದರೆ ಜಾಬ್ ಇಂಟರ್ ವ್ಯೂಯಲ್ಲಿ ಯಶಸ್ವಿಯಾಗಬೇಕು.
ಜಾಬ್ ಇಂಟರ್ ವ್ಯೂನಲ್ಲಿ ಯಶಸ್ವಿಯಾಗಲು ಪ್ರಮುಖ 3 ವಿಷಯಗಳನ್ನು ನಾವು ಇಂದು ಹೇಳುತ್ತೇವೆ. ಪ್ರತಿಯೊಬ್ಬ ಸಂದರ್ಶಕರು, ಅಭ್ಯರ್ಥಿ ಈ 3 ವಿಷಯಗಳನ್ನು ಹೇಳಲಿ ಎಂದು ಬಯಸುತ್ತಾರೆ. ಅವರ ನಿರೀಕ್ಷೆಗೆ ತಕ್ಕಂತೆ ಉತ್ತರಿಸಿದರೆ ನಿಮಗೆ ಕೆಲಸ ಸಿಗೋದು ಪಕ್ಕಾ ಎಂದೇ ಹೇಳಬಹುದು. (ಸಾಂದರ್ಭಿಕ ಚಿತ್ರ)
2/ 7
1) ಪ್ರತಿಯೊಂದು ಕಂಪನಿ ಬಯಸೋದು ಅವರ ಬಳಿ ಖಾಲಿ ಇರುವ ಹುದ್ದೆಗೆ ಸರಿಯಾದ ಕೆಲಸಗಾರ ಬೇಕು ಎಂಬುವುದು. ಕಂಪನಿಯಲ್ಲಿ ಆ ನಿರ್ದಿಷ್ಟ ಹುದ್ದೆಯನ್ನು ಸರಿಯಾಗಿ ಅರ್ಥ ಮಾಡಿಕೊಂಡವರು ಬಂದರೆ ಕೆಲಸ ಸುಲಭವಾಗುತ್ತೆ.
3/ 7
ಹೀಗಾಗಿ ನೀವು, ಜಾಬ್ ಡಿಸ್ಕ್ರಿಷನ್ ಅನ್ನು ಸರಿಯಾಗಿ ಓದಿಕೊಂಡಿರಬೇಕು. ಸಂದರ್ಶನದ ವೇಳೆ ನಿಮ್ಮ ಹುದ್ದೆಯ ವಿವರಣೆಯನ್ನು ಸರಿಯಾಗಿ ತಿಳಿದುಕೊಂಡಿರುವೆ. ನಾನು ಆ ಹುದ್ದೆಗೆ ಸರಿ ಹೊಂದುತ್ತೇನೆ ಎಂಬ ಭರವಸೆ ಇದೆ. ನಿಮ್ಮ ಕೆಲಸದ ಅಗತ್ಯಗಳನ್ನು ಪೂರೈಸುವ ನಂಬಿಕೆ ಇದೆ ಎಂದು ಹೇಳಬೇಕು.
4/ 7
2) ಸಂದರ್ಶಕರು ಶೀಘ್ರವಾಗಿ ಹೊಸದನ್ನು ಕಲಿಯುವ ಅಭ್ಯರ್ಥಿಗಳನ್ನು ಹುಡುಕುತ್ತಿರುತ್ತಾರೆ. ಕೆಲಸದ ಜಾಗದಲ್ಲಿ ಪರಿಸ್ಥಿತಿಗೆ ತಕ್ಕಂತೆ ಕೆಲಸ ಮಾಡುವುದನ್ನು ಯಾವ ಕಾಲೇಜು, ಕೋರ್ಸ್ ಗಳೂ ಕಲಿಸಲ್ಲ. ಕೆಲಸದ ಜಾಗದಲ್ಲಿ ಕಲಿಕೆ ಅನ್ನೋದು ನಿರಂತರವಾಗಿರುತ್ತದೆ.
5/ 7
ಹೀಗಾಗಿ ಕೆಲಸಕ್ಕೆ ಸೇರುವ ಅಭ್ಯರ್ಥಿ ಹೊಸದನ್ನು ಬೇಗ ಕಲಿಯಲಿ ಎಂದು ಕಂಪನಿ ಬಯಸುತ್ತೆ. ಇದಕ್ಕಾಗಿ ನೀವು ಸಂದರ್ಶನದಲ್ಲಿ ಹೊಸದನ್ನು ಕಲಿಯಲು, ವೇಗವಾಗಿ ಕಲಿಯುವ ಬಗ್ಗೆ ಆಸಕ್ತಿ ಇರುವುದನ್ನು ಅವರಿಗೆ ಮನದಟ್ಟು ಮಾಡಬೇಕು. ಸಾಂಕೇತಿಕ ಚಿತ್ರ
6/ 7
3) ನಿಮ್ಮನ್ನು ಈ ಕೆಲಸಕ್ಕೆ ಏಕೆ ಆಯ್ಕೆ ಮಾಡಬೇಕು ಎಂದು ಸಂದರ್ಶಕರು ಕೇಳುತ್ತಾರೆ. ಇದಕ್ಕೆ ಅಭ್ಯರ್ಥಿ ಸೂಕ್ತವಾಗಿ ಉತ್ತರಿಸಲು ಎಂದು ಸಂದರ್ಶಕರು ಬಯಸುತ್ತಾರೆ. ಈ ಪ್ರಶ್ನೆಗೆ ನೀವು ನಿಮ್ಮ ವಿದ್ಯಾಭ್ಯಾಸ, ನಿಮಗಿರುವ ಅನುಭವ, ಈ ಹಿಂದೆ ನೀವು ಸಮಸ್ಯೆಯನ್ನು ಬಗೆಹರಿಸಿದ ರೀತಿಯನ್ನು ಹೇಳಬೇಕು.
7/ 7
ಮೇಲಿನ 3 ಅಂಶಗಳನ್ನು ನೀವು ನಿಮ್ಮ ಸಂದರ್ಶನದಲ್ಲಿ ಹೇಳಿದರೆ ಸಂಸ್ಥೆಯವರಿಗೆ ನಿಮ್ಮ ಮೇಲೆ ಭರವಸೆ ಮೂಡುತ್ತದೆ. ನೂರಾರು ಅಭ್ಯರ್ಥಿಗಳ ಮಧ್ಯೆ ನೀವು ವಿಭಿನ್ನವಾಗಿ ನಿಲ್ಲುತ್ತೀರಿ. ಕೆಲಸ ಸಿಗುವ ಸಾಧ್ಯತೆಗಳು ಹೆಚ್ಚಿರುತ್ತವೆ.