ಸಂದರ್ಶಕರು ಕೇಳುವ ಪ್ರಶ್ನೆ ಇಲ್ಲವೇ ಕೌಶಲ್ಯದ ಬಗ್ಗೆ ನಿಮಗೆ ತಿಳಿದಿರದಿದ್ದರೆ, ಸಮಾಧಾನವಾಗಿ ಪೂರ್ತಿ ಪ್ರಶ್ನೆಯನ್ನು ಕೇಳಿಸಿಕೊಳ್ಳಿ. ಅವರು ಕೇಳುತ್ತಿರುವ ಪ್ರಶ್ನೆ ನಿಮ್ಮ ಕೆಲಸಕ್ಕೆ ಸಂಬಂಧಪಡದಿದ್ದರೆ, ಆ ವಿಷಯ ನನ್ನ ಕೆಲಸದ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ ಆ ಬಗ್ಗೆ ಹೆಚ್ಚಿನದ್ದನ್ನು ಇನ್ನೂ ತಿಳಿದುಕೊಳ್ಳಲು ಸಾಧ್ಯವಾಗಿಲ್ಲ ಎಂದು ಉತ್ತರಿಸಿ.