Job Interview Tips: ಸಂದರ್ಶನಕ್ಕೂ ಮುನ್ನ ನರ್ವಸ್ ಆಗ್ತೀರಾ? ಹಾಗಾದರೆ ಹೀಗೆ ಮನಸ್ಸನ್ನು ನಿಯಂತ್ರಿಸಿ
ಜಾಬ್ ಇಂಟರ್ ವ್ಯೂ ಹೊಸದೇನು ಅಲ್ಲ, ಆದರೆ ಈಗಲೂ ಅನೇಕರು ಇನ್ನೇನು ಸಂದರ್ಶನ ನಡೆಯುವ ಕೊಠಡಿಗೆ ಹೋಗಬೇಕು ಎನ್ನುವಷ್ಟರಲ್ಲಿ ತುಂಬಾನೇ ನರ್ವಸ್ ಆಗುತ್ತಾರೆ. ಏನೋ ಒಂದು ರೀತಿಯ ದುಗುಡ, ಗೊಂದಲ ಮನೆ ಮಾಡಿಬಿಡುತ್ತೆ.
ಈ ರೀತಿ ಇಂಟರ್ ವ್ಯೂಗೂ ಮುನ್ನ ಕಾಣಿಸಿಕೊಳ್ಳುವ ನರ್ವಸ್ ನೆಸ್ ಅನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಬಹುದು. ಮನದಲ್ಲಿ ಯಾವುದೇ ತೊಂದಲ ಉಂಟಾಗದಂತೆ ಮಾಡಲು ಕೆಲವೊಂದು ಟಿಪ್ಸ್ ಇವೆ. ಅವನ್ನು ಫಾಲೋ ಮಾಡಿದರೆ ಸಾಕು.
2/ 7
1) ಯಾವುದೇ ಜಾಬ್ ಇಂಟರ್ ವ್ಯೂ ಇರಲಿ ಆತ್ಮವಿಶ್ವಾಸ ತುಂಬಾನೇ ಮುಖ್ಯ. ಆಗ ಮಾತ್ರ ನೀವು ಕೇಳಿದ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಬಹುದು. ಸಂದರ್ಶನದ ಸಮಯದಲ್ಲಿ ಸಮಚಿತ್ತದಿಂದ ಮಾತನಾಡಿ ಸಂದರ್ಶಕರಲ್ಲಿ ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನು ಮೂಡಿಸಬಹುದು.
3/ 7
2) ಸರಾಗವಾಗಿ ದೀರ್ಘವಾಗಿ ಉಸಿರಾಡಿ. ಸಂದರ್ಶನದ ಸಮಯದಲ್ಲಿ ಆತಂಕವನ್ನು ತಪ್ಪಿಸಲು ಉತ್ತಮ ಮಾರ್ಗವೆಂದರೆ ನಿಮ್ಮ ಕಾಯುವ ಅವಧಿಯಲ್ಲಿ ದೀರ್ಘ ಮತ್ತು ಆಳವಾದ ಉಸಿರನ್ನು ತೆಗೆದುಕೊಳ್ಳುವುದು. ಇದು ನಿಮ್ಮ ಗಮನವನ್ನು ಭಯದಿಂದ ಬೇರೆಡೆಗೆ ತಿರುಗಿಸುತ್ತದೆ. ಸಂದರ್ಶಕರ ಪ್ರಶ್ನೆಗಳಿಗೆ ನೀವು ಉತ್ತಮವಾಗಿ ಉತ್ತರಿಸಲು ಸಾಧ್ಯವಾಗುತ್ತದೆ.
4/ 7
3) ಸಂದರ್ಶಕರೊಂದಿಗೆ ಕಣ್ಣಿನ ಸಂಪರ್ಕ ಚೆನ್ನಾಗಿರಬೇಕು. ಸಂದರ್ಶನದಲ್ಲಿ ಆತ್ಮವಿಶ್ವಾಸದಿಂದ ಕಾಣುವ ಒಂದು ವಿಧಾನವೆಂದರೆ ಪ್ಯಾನೆಲ್ ನಿಂದ ದೂರ ನೋಡುವ ಬದಲು ಅವರ ಕಣ್ಣುಗಳನ್ನು ನೋಡುವ ಮೂಲಕ ಉತ್ತರಿಸಲು ಪ್ರಯತ್ನಿಸಿ, ಇದು ನಿಮ್ಮನ್ನು ಕಾನ್ಫಿಡೆಂಟ್ ಆಗಿ ಕಾಣುವಂತೆ ಮಾಡುತ್ತದೆ.
5/ 7
4) ಆತಂಕವನ್ನು ನಿಯಂತ್ರಿಸಬಹುದು. ಟೆನ್ಶನ್ ಆಗುತ್ತಿದೆ ಎಂದು ಕಾಲು ಅಲುಗಾಡಿಸುವುದು, ಪದೇ ಪದೇ ಮುಖ ಮುಟ್ಟಿಕೊಳ್ಳುವುದು ಮಾಡಬೇಡಿ. ಈ ವರ್ತನೆಗಳನ್ನು ಮೊದಲೇ ನಿಯಂತ್ರಿಸಿದರೆ, ಸಂದರ್ಶನದ ಕೊಠಡಿಯಲ್ಲಿ ಆರಾಮಾಗಿ ಉತ್ತರಿಸಬಹುದು. ಸಾಂದರ್ಭಿಕ ಚಿತ್ರ
6/ 7
5) ಡ್ರೆಸ್ ಬಗ್ಗೆ ಕಾಳಜಿ ಇರಬೇಕು. ಸಂದರ್ಶನದ ಸಮಯದಲ್ಲಿ ನಿಮ್ಮ ಇಮೇಜ್ ಮತ್ತು ಆತ್ಮವಿಶ್ವಾಸವು ನೀವು ಧರಿಸಿರುವುದನ್ನು ಅವಲಂಬಿಸಿರುತ್ತದೆ. ನಿಮ್ಮ ಡ್ರೆಸ್ಸಿಂಗ್ ಶೈಲಿಯಿಂದ ನಿಮ್ಮ ಆತ್ಮವಿಶ್ವಾಸದ ಮಟ್ಟವನ್ನು ಸಹ ಕಂಡು ಹಿಡಿಯಬಹುದು. ಆದ್ದರಿಂದ ಸಂದರ್ಶನದ ಸಮಯದಲ್ಲಿ ಕ್ಯಾಶುಯಲ್ ಬಟ್ಟೆ ಬೇಡ, ಫಾರ್ಮಲ್ಸ್ ಧರಿಸುವುದು ಹೆಚ್ಚು ಸೂಕ್ತ.
7/ 7
ಮೇಲಿನ 5 ವಿಷಯಗಳ ಬಗ್ಗೆ ಗಮನ ಹರಿಸಿದರೆ ಸಾಕು. ನಿಮ್ಮಲ್ಲಿನ ಆತಂಕ, ದುಗುಡ ದೂರವಾಗುತ್ತದೆ. ಆಗ ನೀವು ಜಾಬ್ ಇಂಟರ್ ವ್ಯೂನಲ್ಲಿ ಯಶಸ್ವಿಯಾಗಬಹುದು.