Job Interview Tips: ಓದಿನಲ್ಲಿ ನಿಮ್ಮ ಮಾರ್ಕ್ಸ್ ಕಡಿಮೆ ಏಕಿದೆ ಎಂಬ ಪ್ರಶ್ನೆಗೆ ಉತ್ತರಿಸೋದು ಹೇಗೆ?

Job Interview Questions: ಕೆಲಸಕ್ಕಾಗಿ ನಡೆಯುವ ಸಂದರ್ಶನಗಳಲ್ಲಿ ಕೇಳುವ ಪ್ರಶ್ನೆಗಳಿಗೆ ಸೂಕ್ತ ರೀತಿಯಲ್ಲಿ ಉತ್ತರಿಸುವುದು ಹೇಗೆ ಎಂಬ ಸರಣಿಯಲ್ಲಿ ನಾವು ಇಂದು ಹೊಸ ಪ್ರಶ್ನೆ ಹಾಗೂ ಅದಕ್ಕೆ ಸರಿಯಾದ ಉತ್ತರದೊಂದಿಗೆ ಬಂದಿದ್ದೇವೆ. ಹಾಗಾದರೆ ಇಂದಿನ ಪ್ರಶ್ನೆ ಏನು ಎಂದು ತಿಳಿಯೋಣ ಬನ್ನಿ.

First published:

  • 17

    Job Interview Tips: ಓದಿನಲ್ಲಿ ನಿಮ್ಮ ಮಾರ್ಕ್ಸ್ ಕಡಿಮೆ ಏಕಿದೆ ಎಂಬ ಪ್ರಶ್ನೆಗೆ ಉತ್ತರಿಸೋದು ಹೇಗೆ?

    ಜಾಬ್ ಇಂಟರ್ ವ್ಯೂನಲ್ಲಿ ನಿಮ್ಮ ಮತ್ತು ಸಂದರ್ಶಕ ಮಧ್ಯೆ ಬಹುದೊಡ್ಡ ಸಂವಹನ ನಿಮ್ಮ ರೆಸ್ಯೂಮ್ ಆಗಿರುತ್ತದೆ. ಸಂದರ್ಶಕರು ಮೊದಲೇ ನಿಮ್ಮ ರೆಸ್ಯೂಮ್ ಅನ್ನು ನೋಡಿರುತ್ತಾರೆ, ಇಲ್ಲವೇ ನಿಮಗೆ ಪ್ರಶ್ನೆಗಳನ್ನು ಕೇಳುತ್ತಾ ನಿಮ್ಮ ರೆಸ್ಯೂಮ್ ಮೇಲೆ ಕಣ್ಣಾಡಿಸುತ್ತಾರೆ.

    MORE
    GALLERIES

  • 27

    Job Interview Tips: ಓದಿನಲ್ಲಿ ನಿಮ್ಮ ಮಾರ್ಕ್ಸ್ ಕಡಿಮೆ ಏಕಿದೆ ಎಂಬ ಪ್ರಶ್ನೆಗೆ ಉತ್ತರಿಸೋದು ಹೇಗೆ?

    ಈ ಸಮಯದಲ್ಲಿ ನಿಮ್ಮ ಶೈಕ್ಷಣಿಕ ಮಾಹಿತಿಯನ್ನು ಪ್ರತಿಯೊಬ್ಬ ಸಂದರ್ಶಕರು ಗಮನಿಸಿಯೇ ಇರುತ್ತಾರೆ. ಡಿಗ್ರಿ, ಪಿಯು, SSLC ಯ ನಿಮ್ಮ ಶೇಕಡಾವಾರು ಅಂಕಗಳನ್ನು ಸಂದರ್ಶಕರು ಗಮನಿಸುತ್ತಾರೆ. ನಿಮ್ಮ ಮಾರ್ಕ್ಸ್ ಕಡಿಮೆ ಇದ್ದರೆ ಆಗ ಬಗ್ಗೆ ಕೇಳಿಬಿಡಬಹುದು.

    MORE
    GALLERIES

  • 37

    Job Interview Tips: ಓದಿನಲ್ಲಿ ನಿಮ್ಮ ಮಾರ್ಕ್ಸ್ ಕಡಿಮೆ ಏಕಿದೆ ಎಂಬ ಪ್ರಶ್ನೆಗೆ ಉತ್ತರಿಸೋದು ಹೇಗೆ?

    ಓದಿನಲ್ಲಿ ನಿಮ್ಮ ಅಂಕಗಳು ಏಕೆ ಕಡಿಮೆ ಇದೆ? ಇಲ್ಲವೇ, ಸ್ಕೂಲ್ ನಲ್ಲಿ ಒಳ್ಳೆಯ ಅಂಕಗಳನ್ನು ಗಳಿಸಿರುವ ನೀವು ಕಾಲೇಜು ಶಿಕ್ಷಣದಲ್ಲಿ ಹಿಂದೆ ಬಿದ್ದಂತೆ ಕಾಣುತ್ತಿದೆ ಎಂದು ಸಹ ಪ್ರಶ್ನಿಸುವ ಸಾಧ್ಯತೆಗಳಿವೆ. ಇದಕ್ಕೆ ವಿಚಲಿತರಾಗದೆ ಸೂಕ್ತವಾಗಿ ಉತ್ತರಿಸೋದನ್ನು ಕರಗತ ಮಾಡಿಕೊಳ್ಳುವುದು ಉತ್ತಮ. ಸಾಂಕೇತಿಕ ಚಿತ್ರ

    MORE
    GALLERIES

  • 47

    Job Interview Tips: ಓದಿನಲ್ಲಿ ನಿಮ್ಮ ಮಾರ್ಕ್ಸ್ ಕಡಿಮೆ ಏಕಿದೆ ಎಂಬ ಪ್ರಶ್ನೆಗೆ ಉತ್ತರಿಸೋದು ಹೇಗೆ?

    ಅಂಕಗಳು ಮುಖ್ಯ ಎಂದು ನನಗೆ ಅನಿಸುವುದಿಲ್ಲ. ಕಾಲೇಜಿನಲ್ಲಿ ಫ್ರೆಂಡ್ಸ್ ಸಹವಾಸದಿಂದ ಮಾರ್ಕ್ಸ್ ಕಮ್ಮಿ ಆಯ್ತು. ನಾನು ಸ್ಪೋರ್ಟ್ಸ್ ನಲ್ಲಿ ಚೆನ್ನಾಗಿದ್ದೆ. ಲೆಕ್ಚರರ್ಸ್ ಸರಿಯಾಗಿ ಪಾಠ ಮಾಡುತ್ತಿರಲಿಲ್ಲ ಎಂದು ಉತ್ತರಿಸಲು ಹೋಗಲೇಬೇಡಿ. ಈ ರೀತಿಯ ಉತ್ತರ ನಿಮ್ಮ ಮೇಲಿನ ಅಭಿಪ್ರಾಯವನ್ನು ಕೆಡಿಸುತ್ತದೆ.

    MORE
    GALLERIES

  • 57

    Job Interview Tips: ಓದಿನಲ್ಲಿ ನಿಮ್ಮ ಮಾರ್ಕ್ಸ್ ಕಡಿಮೆ ಏಕಿದೆ ಎಂಬ ಪ್ರಶ್ನೆಗೆ ಉತ್ತರಿಸೋದು ಹೇಗೆ?

    ಮೊದಲಿಗೆ ಸಂದರ್ಶಕರ ಪ್ರಶ್ನೆಯನ್ನು ಪೂರ್ತಿಯಾಗಿ ಕೇಳಿ, ನಂತರ ಸಮಾಧಾನದಿಂದ ಉತ್ತರಿಸಿ. ಅಂಕಗಳ ಆಚೆಗೆ ನಿಮಗಿರುವ ಪ್ರತಿಭೆಯ ಬಗ್ಗೆ ಹೇಳಿ. ನಾಟಕ, ಪ್ರಾಜೆಕ್ಟ್ ವರ್ಕ್, ಸೆಮಿನಾರ್ ಗಳನ್ನು ಆಯೋಜಿಸಿದ್ದರ ಬಗ್ಗೆ ಹೇಳಿ.

    MORE
    GALLERIES

  • 67

    Job Interview Tips: ಓದಿನಲ್ಲಿ ನಿಮ್ಮ ಮಾರ್ಕ್ಸ್ ಕಡಿಮೆ ಏಕಿದೆ ಎಂಬ ಪ್ರಶ್ನೆಗೆ ಉತ್ತರಿಸೋದು ಹೇಗೆ?

    ನೀವು ನನಗೆ ಈ ಕೆಲಸವನ್ನು ನೀಡಿದರೆ, ನನ್ನ ಶೈಕ್ಷಣಿಕ ಅಂಕಗಳು ನನ್ನ ಪರ್ಫಾಮೆನ್ಸ್ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳುವೆ. ನನ್ನ ವೃತ್ತಿಗೆ ಬೇಕಾದ ಕೌಶಲ್ಯಗಳ ಕಲಿಕೆಯನ್ನು ಮುಂದುವರೆಸುವೆ ಎಂದು ಉತ್ತರಿಸಿ.

    MORE
    GALLERIES

  • 77

    Job Interview Tips: ಓದಿನಲ್ಲಿ ನಿಮ್ಮ ಮಾರ್ಕ್ಸ್ ಕಡಿಮೆ ಏಕಿದೆ ಎಂಬ ಪ್ರಶ್ನೆಗೆ ಉತ್ತರಿಸೋದು ಹೇಗೆ?

    ನಿಮ್ಮ ಕಡಿಮೆ ಅಂಕಗಳಿಗೆ ಯಾರನ್ನೂ ದೂರಬೇಡಿ, ಮಾರ್ಕ್ಸ್ ಮುಖ್ಯವೇ ಅಲ್ಲ ಎಂಬಂತೆಯೂ ಮಾತನಾಡಬೇಡಿ. ಬದಲಿಗೆ ಸ್ಮಾರ್ಟ್ ಆಗಿ ಅಂಕಗಳಿಗೂ ನಿಮ್ಮ ಪ್ರತಿಭೆಗೂ ಈಗೀನ ಪರಿಸ್ಥಿತಿಯಲ್ಲಿ ಸಂಬಂಧವಿಲ್ಲ ಎಂದು ಮನದಟ್ಟು ಮಾಡಿಕೊಡಿ. ಇದರಿಂದ ನಿಮಗೆ ಕೆಲಸ ಸಿಗುವ ಸಾಧ್ಯತೆಗಳು ಹೆಚ್ಚಾಗುತ್ತೆ.

    MORE
    GALLERIES