ಏಪ್ರಿಲ್ 15, 1958 ರಂದು ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಯಶಸ್ವಿಯಾದ ಎಲ್ಲಾ ಅಭ್ಯರ್ಥಿಗಳಿಗೆ ತರಬೇತಿ ನೀಡಲು ಮಸ್ಸೂರಿಯ ಚಾರ್ಲೆವಿಲ್ಲೆ ಎಸ್ಟೇಟ್ ನಲ್ಲಿ ರಾಷ್ಟ್ರೀಯ ಅಕಾಡೆಮಿಯನ್ನು ಸ್ಥಾಪಿಸಲು ನಿರ್ಧರಿಸಲಾಯಿತು. ಆ ಸಮಯದಲ್ಲಿ ಈ ಅಕಾಡೆಮಿಗೆ ನ್ಯಾಷನಲ್ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್ (NAA) ಎಂದು ಹೆಸರಿಸಲಾಯಿತು. 1972 ರಲ್ಲಿ ಇದನ್ನು ಲಾಲ್ ಬಹದ್ದೂರ್ ಶಾಸ್ತ್ರಿ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್ ಎಂದು ಬದಲಾಯಿಸಲಾಯಿತು.
UPSC ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಎಲ್ಲಾ ಅಭ್ಯರ್ಥಿಗಳಿಗೆ LBSNAA ಫೌಂಡೇಶನ್ ಕೋರ್ಸ್ ಗಾಗಿ ಆಫರ್ ಲೆಟರ್ ಗಳನ್ನು ಕಳುಹಿಸಲಾಗುತ್ತದೆ. ನಂತರ ಐಎಫ್ ಎಸ್ ಗೆ ಆಯ್ಕೆಯಾದ ಅಧಿಕಾರಿಗಳು ಹೆಚ್ಚಿನ ತರಬೇತಿಗಾಗಿ ಹೊಸದಿಲ್ಲಿಯಲ್ಲಿರುವ ಸುಷ್ಮಾ ಸ್ವರಾಜ್ ಇನ್ ಸ್ಟಿಟ್ಯೂಟ್ ಆಫ್ ಫಾರಿನ್ ಸರ್ವೀಸ್ ಗೆ ತೆರಳಬೇಕು. ಐಪಿಎಸ್ ಅಧಿಕಾರಿಗಳು ಹೈದರಾಬಾದ್ ನಲ್ಲಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ನ್ಯಾಷನಲ್ ಪೊಲೀಸ್ ಅಕಾಡೆಮಿಗೆ ಹೋಗಬೇಕು.
ಆಯುರ್ವೇದದ ತತ್ವಗಳ ಪ್ರಕಾರ ಅಡುಗೆ ಮಾಡುವ ಕೌಶಲ್ಯವನ್ನು ಕಲಿಸಲಾಗುತ್ತೆ. ಇದಲ್ಲದೇ ಪಠ್ಯೇತರ ಚಟುವಟಿಕೆಗಳಾಗಿ ಕ್ಯಾಲಿಗ್ರಫಿ, ಜೂಟ್ ಬ್ಯಾಗ್ ಗಳ ತಯಾರಿಕೆ, ಸಂಕೇತ ಭಾಷೆ ಕಲಿಯುವುದು ಮತ್ತು ಸ್ಮಾರ್ಟ್ ಫೋನ್ ಗಳ ಮೂಲಕ ಚಲನಚಿತ್ರ ತಯಾರಿಕೆಯ ತರಬೇತಿಯನ್ನು ಸಹ ನೀಡಲಾಗುತ್ತದೆ. ಇದರೊಂದಿಗೆ ಎಲ್ಲಾ ತರಬೇತಿ ಅಧಿಕಾರಿಗಳು ಅಲ್ಲಿ ಅಳವಡಿಸಲಾಗಿರುವ ಡ್ರೆಸ್ ಕೋಡ್ ಮತ್ತು ಇತರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.