ಐಎಎಸ್ ಸ್ಮಿತಾ ಸಬರ್ವಾಲ್ ಐಪಿಎಸ್ ಅಕುನ್ ಸಬರ್ವಾಲ್ ಅವರನ್ನು ವಿವಾಹವಾಗಿದ್ದಾರೆ. ಇವರಿಬ್ಬರ ಕಥೆ ಐಎಎಸ್ ವಲಯದಲ್ಲಿ ಸಾಕಷ್ಟು ಫೇಮಸ್. ತಿಳಿದರೆ ನೀವು ಆಶ್ಚರ್ಯ ಪಡುತ್ತೀರಿ. ಏಕೆಂದು ಇದು ಅವರಿಬ್ಬರ ಪ್ರೇಮ ವಿವಾಹವಾಗಿರಲಿಲ್ಲ. ಐಎಎಸ್ ಸ್ಮಿತಾ ಸಬರ್ವಾಲ್ ಅನೇಕ ಮಾಧ್ಯಮ ಸಂದರ್ಶನಗಳು ಮತ್ತು ಯೂಟ್ಯೂಬ್ ವೀಡಿಯೊಗಳಲ್ಲಿ ತಮ್ಮ ಜೀವನದ ಕಥೆಯನ್ನು ಹಂಚಿಕೊಂಡಿದ್ದಾರೆ.
ಐಎಎಸ್ ಸ್ಮಿತಾ ಸಬರ್ವಾಲ್ ಮತ್ತು ಐಪಿಎಸ್ ಅಕುನ್ ಸಬರ್ವಾಲ್ ಅವರ ಪೋಷಕರು ಪರಸ್ಪರ ಸಂಪರ್ಕದಲ್ಲಿದ್ದರು. ಸ್ಮಿತಾ ಮತ್ತು ಡಾ.ಅಕುನ್ ಸಬರ್ವಾಲ್ ಅವರ ಮದುವೆಯನ್ನು ಅವರೇ ನಿಶ್ಚಯಿಸಿದರು. ಸ್ಮಿತಾ ಮತ್ತು ಅಕುನ್ ಮಸ್ಸೂರಿಯ LBSNAA ನಲ್ಲಿ ತರಬೇತಿಯ ಸಮಯದಲ್ಲಿ ಸ್ನೇಹಿತರು ಮತ್ತು ಬ್ಯಾಚ್ಮೇಟ್ ಗಳಾಗಿದ್ದರು, ಆದರೆ ಅವರ ನಡುವೆ ಪ್ರೀತಿ ಏನೂ ಇರಲಿಲ್ಲ. ಅಕುನ್ ಮನೆಯವರು ಸ್ಮಿತಾ ಕುಟುಂಬವನ್ನು ಸಂಪರ್ಕಿಸಿದ್ದರು. ನಂತರ ಅವರು ಇಬ್ಬರ ಒಪ್ಪಿಗೆಯೊಂದಿಗೆ ಮದುವೆಯಾದರು.
ಐಪಿಎಸ್ ಅಕುನ್ ಸಬರ್ವಾಲ್ ಅವರ ತಂದೆ ಭಾರತೀಯ ವಾಯುಪಡೆಯಲ್ಲಿದ್ದರು. ಅಕುನ್ ತನ್ನ ಶಾಲಾ ದಿನಗಳಲ್ಲಿ ಗಣಿತದಲ್ಲಿ ತುಂಬಾ ಚುರುಕಾಗಿದ್ದರು ಆದರೆ ಅವರು ವೈದ್ಯಕೀಯ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಬಯಸಿದ್ದರು. ಪಟಿಯಾಲ ಡೆಂಟಲ್ ಕಾಲೇಜಿನಲ್ಲಿ ವೈದ್ಯಕೀಯ ಪದವಿ ಪಡೆದು ಅಕುನ್ ದಂತವೈದ್ಯರಾದರು. 2001ರ ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿರುವ ಅಕುನ್ ಸಬರ್ವಾಲ್ ಅವರು ಯುಪಿಎಸ್ಸಿ ಪರೀಕ್ಷೆಯಲ್ಲಿ 33ನೇ ರ್ಯಾಂಕ್ ಗಳಿಸಿದ್ದಾರೆ.