ಹೀಗೆ ಸೆಲೆಬ್ರಿಟಿಗಳನ್ನು ನೋಡಲು ಸಾವಿರಾರು ಜನ, ಲಕ್ಷಾಂತರ ಜನ ಸೇರಿದಾಗ ಅವರನ್ನು ರಕ್ಷಿಸಲು ಪರ್ಸನಲ್ ಸೆಕ್ಯೂರಿಟಿ ಗಾರ್ಡ್ ಗಳು ಇರುತ್ತಾರೆ. ಇವರು ಸೆಲೆಬ್ರಿಟಿಗಳಿಗೆ ರಕ್ಷಣೆಯನ್ನು ಒದಗಿಸುತ್ತಾರೆ. ಬಾಲಿವುಡ್ ಸ್ಟಾರ್ಗಳು, ಕ್ರಿಕೆಟಿಗರು ಮಾತ್ರವಲ್ಲ ನಮ್ಮ ಕನ್ನಡದ ನಟ-ನಟಿಯರು ಕೂಡ ಪರ್ಸನ್ ಸೆಕ್ಯೂರಿಟಿ ಗಾರ್ಡ್ ಗಳ ಜೊತೆ ಬರುತ್ತಾರೆ. ಇವರ ಕೆಲಸಕ್ಕೆ ಭರ್ಜರಿ ವೇತನವೂ ಇರುತ್ತದೆ. (ಸಾಂದರ್ಭಿಕ ಚಿತ್ರ)
2) ಪರ್ಸನಲ್ ಸೆಕ್ಯೂರಿಟಿ ಆಗಲು ಓದು, ಟ್ರೈನಿಂಗ್ ಇರಬೇಕೇ? : ಈ ವೃತ್ತಿಗೆ ನಿರ್ದಿಷ್ಟವಾದ ಶೈಕ್ಷಣಿಕ ಅರ್ಹತೆ ಆಗಲಿ ತರಬೇತಿಯಾಗಲಿ ಇಲ್ಲ. ಆದರೆ ಜನರನ್ನು ನಿಯಂತ್ರಿಸಲು, ಸೆಲೆಬ್ರಿಟಿಗಳನ್ನು ರಕ್ಷಿಸಲು ಕೆಲವೊಂದು ಕೌಶಲ್ಯಗಳನ್ನು ಕಲಿತಿರಬೇಕು. ಪೊಲೀಸ್, ಸೇನೆ ಅಂತಹ ಕೆಲಸಗಳಿಂದ ನಿವೃತ್ತಿಯಾದವರನ್ನು ಕೂಡ ಈ ವೃತ್ತಿಗೆ ನೇಮಿಸಿಕೊಳ್ಳಲಾಗುತ್ತೆ. (ಸಾಂದರ್ಭಿಕ ಚಿತ್ರ)