Layoff Season: ಎಲ್ಲೆಲ್ಲೂ ಉದ್ಯೋಗಿಗಳ ವಜಾ, ಇದಕ್ಕೆ ಸಿಲುಕದೇ ಕೆಲಸ ಉಳಿಸಿಕೊಳ್ಳುವುದು ಹೇಗೆ?
2022ನೇ ವರ್ಷದ ಕೊನೆಯ 3 ತಿಂಗಳಲ್ಲಿ ವಿಶ್ವಾದ್ಯಂತ ಅನೇಕ ದೊಡ್ಡ ದೊಡ್ಡ ಟೆಕ್ ಕಂಪನಿಗಳು ಸಾವಿರಾರು ಉದ್ಯೋಗಿಗಳನ್ನು ವಜಾ ಮಾಡಿವೆ. ಭಾರತಕ್ಕೂ ಲೇ ಆಫ್ ಬಿಸಿ ದೊಡ್ಡದಾಗೇ ತಟ್ಟಿದೆ. ಮುಂಬರುವ ಆರ್ಥಿಕ ಹಿಂಜರಿತದಿಂದ ಬಚಾವ್ ಆಗಲು ಕಂಪನಿಗಳು ಉದ್ಯೋಗ ಕಡಿತಕ್ಕೆ ನಿಂತಿವೆ.
ಇಲ್ಲಿಯವರೆಗೆ ಆಗಿರುವುದಷ್ಟೇ ಅಲ್ಲ ಮುಂದಿನ ದಿನಗಳಲ್ಲೂ ಲೇ ಆಫ್ ಅಲೆ ದೊಡ್ಡದಾಗಿ ಅಪ್ಪಳಿಸಲಿದೆ. ಈ ಬಿರುಗಾಳಿಯಿಂದ ಬಚಾವ್ ಆಗಿ ಉದ್ಯೋಗ ಉಳಿಸಿಕೊಳ್ಳುವುದು ಹೇಗೆ? ನಿಮ್ಮ ಆಫೀಸ್ ನಲ್ಲೂ ಲೇ ಆಫ್ ಮುನ್ಸೂಚನೆ ಇದ್ದರೆ ನಿಮ್ಮ ಕೆಲಸವನ್ನು ಉಳಿಸಿಕೊಳ್ಳಲು ಏನು ಮಾಡಬೇಕು ಎಂದು ನೋಡೋಣ ಬನ್ನಿ. (ಸಾಂದರ್ಭಿಕ ಚಿತ್ರ)
2/ 7
1) ಕಂಫರ್ಟ್ ಝೋನ್ ಅನ್ನೇ ನೆಚ್ಚಿಕೊಳ್ಳಬೇಡಿ: ವೃತ್ತಿ ಜೀವನದ ಪ್ರಗತಿಯಲ್ಲಿ ಕಂಫರ್ಟ್ ಝೋನ್ ದೊಡ್ಡ ಅಂಶವಾಗಿದೆ. ಆರಾಮದಾಯಕ ವಲಯದಲ್ಲಿ ಉಳಿಯುವುದು ಬಹುತೇಕ ಉದ್ಯೋಗಿಗಳ ಪ್ರವೃತ್ತಿಯಾಗಿದೆ. ಆದರೆ ಇದು ನಿಮ್ಮ ವೃತ್ತಿಜೀವನಕ್ಕೆ ಹಾನಿಕಾರಕ. (ಸಾಂಕೇತಿಕ ಚಿತ್ರ)
3/ 7
2) ಅಪಡೇಟ್ ಆಗುತ್ತಿರಬೇಕು: ಒಂದು ಕೆಲಸ ಅಂತ ಸಿಕ್ಕಿ ಒಂದಷ್ಟು ವರ್ಷಗಳು ಕಳೆದು ಬಿಟ್ಟರೆ ಹೊಸದನ್ನು ಕಲಿಯುವ ಗೋಜಿಗೇ ಹೋಗುವುದಿಲ್ಲ. ಇದು ನಿಮನ್ನು ಕೆಲಸದಿಂದ ತೆಗೆದು ಹಾಕಲು ಕಾರಣವಾಗಬಹುದು. (ಸಾಂದರ್ಭಿಕ ಚಿತ್ರ)
4/ 7
3) ನೆನಪಿಡಿ, ನೀವು ಕಲಿಯುವುದನ್ನು ನಿಲ್ಲಿಸಿದ ದಿನ, ನಿಮ್ಮ ಜೀವನವು ಕಡಿಮೆಯಾಗಲು ಪ್ರಾರಂಭಿಸುತ್ತದೆ. ಆದ್ದರಿಂದ, ಯಾವಾಗಲೂ ಹೊಸ ವಿಷಯಗಳನ್ನು ಕಲಿಯಲು ಮತ್ತು ಅನ್ವೇಷಿಸಲು ಮುಂದಾಗಿ. (ಸಾಂದರ್ಭಿಕ ಚಿತ್ರ)
5/ 7
4) ಸಮಯದ ಮೌಲ್ಯವನ್ನು ಅರ್ಥಮಾಡಿಕೊಳ್ಳಿ: ಬುದ್ಧಿವಂತಿಕೆಯಿಂದ ಬಳಸಿದರೆ ಸಮಯವು ದೊಡ್ಡ ಆಸ್ತಿಯಾಗಿದೆ. ನಿಮ್ಮ ಗುರಿಗಳನ್ನು ಸಾಧಿಸಲು ನಿಮಗೆ ತುಂಬಾ ಸಮಯವಿದೆ ಎಂದು ಎಂದಿಗೂ ಭಾವಿಸಬೇಡಿ. ಈಗ ನಿಮ್ಮ ಗುರಿಯತ್ತ ಕೆಲಸ ಮಾಡಲು ಪ್ರಾರಂಭಿಸಿ. ಇದು ನಿಮ್ಮ ಭವಿಷ್ಯಕ್ಕಾಗಿ ಸಮಯವನ್ನು ಉಳಿಸಲು ಸಹಾಯ ಮಾಡುತ್ತದೆ.
6/ 7
5) ನೀವೇ ತಯಾರಿ ಮಾಡಿಕೊಳ್ಳಿ: ಪ್ರಸ್ತುತ ಉದ್ಯೋಗ ಪ್ರೊಫೈಲ್ ಮತ್ತು ಭವಿಷ್ಯದ ಸವಾಲುಗಳನ್ನು ಸಾಧ್ಯವಾದಷ್ಟು ಬೇಗ ಪರಿಶೀಲಿಸಿ. ಕನಿಷ್ಠ ಮೂರು ವಿಭಿನ್ನ ವೃತ್ತಿಗಳಿಗೆ ನಿಮ್ಮನ್ನು ಸಿದ್ಧಪಡಿಸಿಕೊಳ್ಳಿ.
7/ 7
6) ಇದರರ್ಥ ನೀವು ಕಲಿಯುವುದನ್ನು ಎಂದಿಗೂ ನಿಲ್ಲಿಸಬಾರದು. ಹೊಸ ಕೌಶಲ್ಯವನ್ನು ಕಲಿತ ನಂತರ, ಅವಕಾಶಗಳಿಗಾಗಿ ಹುಡುಕುತ್ತಿರಿ. ಅವುಗಳಲ್ಲಿ ನಿಮ್ಮ ಕೌಶಲ್ಯಗಳನ್ನು ಬಳಸಿ.