ಉದ್ಯೋಗಿಗಳೇ, ನಿಮಗೆ Work from Home ನೀಡಲು ಮ್ಯಾನೇಜರ್ಗೆ ಈ ರೀತಿಯ ಕಾರಣಗಳನ್ನು ಕೊಡಿ
ನಮಗೆಲ್ಲಾ ತಿಳಿದಿರುವಂತೆ ಕೊರೊನಾ ಕಾಲದಲ್ಲಿ ಆಫೀಸ್ ಕೆಲಸ ಮನೆಗೆ ಬಂದಿತು. ಸುಮಾರು 2 ವರ್ಷಗಳ ಕಾಲ ಬಹುತೇಕ ಉದ್ಯೋಗಿಗಳು Work from homeಗೆ ಒಗ್ಗಿಕೊಂಡರು. ಆದರೆ ಕೊರೊನಾ ಕಾಟ ತಗ್ಗಿದ ಬಳಿಕ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಆಫೀಸ್ ಗೆ ಕರೆದಿವೆ.
ಮೊದಲಿನಂತೆ ಆಫೀಸ್ ನಿಂದಲೇ ಕೆಲಸ ಮಾಡಬೇಕೆಂದು ಕಂಪನಿಗಳು ಆದೇಶ ಹೊರಡಿಸಿವೆ. ಆದರೆ ಬಹುತೇಕ ಉದ್ಯೋಗಿಗಳು ಆಫೀಸ್ ಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಆರೋಗ್ಯ ಸೇರಿದಂತೆ ಹಲವು ಕಾರಣಗಳನ್ನು ನೀಡಿ ಮನೆಯಿಂದಲೇ ಕೆಲಸ ಮಾಡಲು ಪ್ರಯತ್ನಿಸುತ್ತಿದ್ದಾರೆ.
2/ 8
ಬೆಂಗಳೂರಿನಂತ ದೊಡ್ಡ ನಗರಗಳಲ್ಲಿ ವಾಸಿಸುತ್ತಿರುವ ಉದ್ಯೋಗಿಗಳು ಟ್ರಾಫಿಕ್ ಜಂಜಾಟದ ಮಧ್ಯೆ ಆಫೀಸ್ ಗೆ ಹೋಗುವುದಕ್ಕೆ ಹಿಂಜರಿಯುತ್ತಿದ್ದಾರೆ. ಇಂಥವರು ಈಗಲೂ ಸೂಕ್ತ ಕಾರಣಗಳನ್ನು ನೀಡಿ ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡುವಂತೆ ನಿಮ್ಮ ಟೀಂ ಲೀಡರ್/ ಮ್ಯಾನೇಜರ್ ಅಥವಾ HR ಅವರನ್ನು ಮನವೊಲಿಸಬಹುದು.
3/ 8
ಆಫೀಸ್ ಗೆ ಬಂದು ಕೆಲಸ ಮಾಡಲುವ ಬದಲು ಅದೇ ಕೆಲಸವನ್ನು ಮನೆಯಿಂದಲೇ ಮಾಡುತ್ತೇನೆ ಎಂದು ಹೇಗೆ ಮನವೊಲಿಸುವುದು ಎಂದು ನಾವು ತಿಳಿಯೋಣ. ಇದಕ್ಕೆ ನೀವು ಸೂಕ್ತ ಕಾರಣಗಳನ್ನು ನೀಡಬೇಕು. ಮನೆಯಲ್ಲಿದ್ದರೂ ಕೆಲಸಕ್ಕೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಬೇಕು.
4/ 8
ಇಷ್ಟು ದಿನ ಮನೆಯಿಂದಲೇ ಕೆಲಸ ಮಾಡಿ, ಈಗ ಆಫೀಸ್ ಗೆ ಬರಲು ನಂಗೆ ಇಷ್ಟ ಇಲ್ಲ. ತುಂಬಾ ಟ್ರಾಫಿಕ್ ಇರುತ್ತೆ. ಓಡಾಟದಲ್ಲೇ ಹೆಚ್ಚು ಸಮಯ ಕಳೆದು ಹೋಗುತ್ತೆ. ನನಗೆ ಹುಷಾರಿಲ್ಲ, ಆಫೀಸ್ ACಯಿಂದ ನನಗೆ ತೊಂದರೆ ಆಗುತ್ತಿದೆ ಅಂತೆಲ್ಲಾ ಕಾರಣಗಳನ್ನು ನೀಡಲೇಬೇಡಿ.
5/ 8
ಮನೆಯ ಏಕಾಂತದ ವಾತಾವರಣದಲ್ಲಿ ಹೆಚ್ಚಿನ ಕೆಲಸವನ್ನು ಮಾಡಬಹುದು. ಕಚೇರಿಯಲ್ಲಿರುವಂತೆ ಯಾವುದೇ ವಿಷಯ ನನ್ನನ್ನು ಡಿಸ್ಟರ್ಬ್ ಮಾಡುವುದಿಲ್ಲ. ಮನೆಯಲ್ಲಿನ ಸ್ವಂತ ಆಫೀಸ್ ಸ್ಪೇಸ್ ನಲ್ಲಿ ಕೆಲಸ ಮಾಡುವುದು ನನ್ನ ಕೆಲಸದ ಗುಣಮಟ್ಟವನ್ನು ಹೆಚ್ಚಿಸುತ್ತದೆ.
6/ 8
ನನ್ನ ಸಮಯದ ಅವಧಿ ಮೇಲೆ ನನಗೆ ಸಂಪೂರ್ಣ ಹಿಡಿತವಿರುತ್ತದೆ. ಸರಿಯಾದ ಸಮಯಕ್ಕೆ ಕೆಲಸಕ್ಕೆ ರಿಪೋರ್ಟ್ ಮಾಡಿಕೊಳ್ಳಲು ನನಗೆ ಸಾಧ್ಯವಾಗುತ್ತೆ. ರಿಮೋಟ್ ವರ್ಕ್ ಮೂಲಕ ನಾನು ನನ್ನೆಲ್ಲಾ ಟೀಂ ಸದಸ್ಯರ ಜೊತೆ ಸಂಪರ್ಕದಲ್ಲಿರುತ್ತೇನೆ.
7/ 8
ಮನೆಯಲ್ಲಿದ್ದರೂ ಕಂಪನಿಯ ಎಲ್ಲಾ ಇಮೇಲ್, ಕೆಲಸ ಸಂಬಂಧಿತ ವಿಚಾರಗಳಿಗೆ ಕೂಡಲೇ ಪ್ರತಿಕ್ರಿಯಿಸುವೆ. ಇದರಲ್ಲಿ ಯಾವುದೇ ತಡ ಆಗುವುದಿಲ್ಲ. ಯಾವುದೇ ರೀತಿಯ ಕಮ್ಯುನಿಕೇಷನ್ ಪ್ರಾಬ್ಲಂ ಆಗದಂತೆ ಎಚ್ಚರ ವಹಿಸುವೆ. ಹೀಗಾಗಿ ನನಗೆ ವರ್ಕ್ ಫ್ರಮ್ ಹೋಮ್ ನೀಡಿ ಎಂದು ವಿನಂತಿಸಿ.
8/ 8
ಮನೆಯಿಂದ ಕೆಲಸ ಮಾಡಲು ವೈಯಕ್ತಿಕ, ಆರೋಗ್ಯ ಕಾರಣಗಳನ್ನು ನೀಡುವುದಕ್ಕಿಂತ ಮೇಲೆ ತಿಳಿಸಿದಂತೆ ಕೆಲಸ ಸಂಬಂಧಿತ ಕಾರಣಗಳನ್ನು ನೀಡುವುದು ಹೆಚ್ಚು ಸೂಕ್ತ. ಆಗ ಮ್ಯಾನೇಜರ್ ನಿಮಗೆ ವರ್ಕ್ ಫ್ರಮ್ ಹೋಂಗೆ ಅವಕಾಶ ಮಾಡಿಕೊಡುತ್ತಾರೆ.