Career Tips: ಒಂದೇ ಕಂಪನಿಯ ವಿವಿಧ ಹುದ್ದೆಗಳಿಗೆ ರೆಸ್ಯೂಮ್ ಕಳುಹಿಸುವಾಗ ಈ ತಪ್ಪನ್ನು ಮಾಡಬೇಡಿ
ನೀವು ಕೆಲಸ ಹುಡುಕುವಾಗ, ರೆಸ್ಯೂಮ್ ಕಳುಹಿಸುವಾಗ ಮಾಡುವ ಸಣ್ಣ ಸಣ್ಣ ತಪ್ಪುಗಳೇ ನಿಮ್ಮನ್ನು ಅವಕಾಶ ವಂಚಿತರನ್ನಾಗಿ ಮಾಡುತ್ತೆ. ಈ ನಿಟ್ಟಿನಲ್ಲಿ ಜಾಬ್ ಸರ್ಚಿಂಗ್ ಸಿಲ್ಕ್ಸ್ ಇರುವುದು ತುಂಬಾನೇ ಮುಖ್ಯ. ಹಾಗಾದರೆ ನಾವು ಇಂದು ಹೇಳುತ್ತಿರುವ ಆ ಕೌಶಲ್ಯದ ಬಗ್ಗೆ ತಿಳಿಯೋಣ ಬನ್ನಿ.
ಒಂದೊಳ್ಳೆಯ ಕಂಪನಿ ತಮ್ಮಲ್ಲಿನ ವಿವಿಧ ಹುದ್ದೆಗಳಿಗಾಗಿ ಅಧಿಸೂಚನೆ ಹೊರಡಿಸಿರುತ್ತಾರೆ. ನಿಮ್ಮ ಶೈಕ್ಷಣಿಕ ಹಿನ್ನೆಲೆ, ವೃತ್ತಿ ಅನುಭವದ ಪ್ರಕಾರ ಆ ಕಂಪನಿಯ 2-3 ಹುದ್ದೆಗಳಿಗೆ ನೀವು ಸರಿ ಹೊಂದುತ್ತೀರಿ ಎಂದು ಎನಿಸುತ್ತೆ. ಒಂದೇ ಹುದ್ದೆಗಿಂತ 2-3 ಹುದ್ದೆಗಳಿಗೆ ಪ್ರಯತ್ನಿಸೋಣ ಎಂದು ಭಾವಿಸುತ್ತೀರ.
2/ 7
ಮೊದಲಿಗೆ ನೀವು ಒಬ್ಬ ಅಭ್ಯರ್ಥಿ ಆ ಸಂಸ್ಥೆಯ ವಿವಿಧ ಹುದ್ದೆಗಳಿಗೆ ಒಮ್ಮೆಲೇ ಪ್ರಯತ್ನಿಸಬಹುದೇ ಎಂದು ತಿಳಿದುಕೊಳ್ಳಿ. 2-3 ಹುದ್ದೆಗಳಿಗೆ ಪ್ರಯತ್ನಿಸಬಹುದು ಎಂದು ತಿಳಿದರೆ, ಪ್ರತ್ಯೇಕವಾಗಿ ರೆಸ್ಯೂಮ್ ಗಳನ್ನು ಕಳುಹಿಸಬೇಕೇ ಎಂಬ ಮಾಹಿತಿಯನ್ನು ಸಹ ಪಡೆದುಕೊಳ್ಳಿ. ಸಾಂದರ್ಭಿಕ ಚಿತ್ರ
3/ 7
ಮೇಲಿನ ಪ್ರಶ್ನೆಗಳಿಗೆ ಉತ್ತರ ಹೌದು ಎಂದರೆ ನೀವು ವಿವಿಧ ಹುದ್ದೆಗಳಿಗೆ ಪ್ರತ್ಯೇಕವಾಗಿ ರೆಸ್ಯೂಮ್ ಕಳುಹಿಸಬೇಕಾಗುತ್ತದೆ. ಈ ಸಮಯದಲ್ಲೇ ನೀವು ಎಚ್ಚರಿಕೆಯಿಂದ ಇರಬೇಕು. ಬಹುತೇಕ ಅಭ್ಯರ್ಥಿಗಳು ಮಾಡುವ ತಪ್ಪನ್ನು ಈ ಹಂತದಲ್ಲಿ ಮಾಡಬಾರದು.
4/ 7
ಬಹುತೇಕ ಅಭ್ಯರ್ಥಿಗಳು ಮಾಡುವ ತಪ್ಪು ಏನೆಂದರೆ, ಒಂದೇ ಮಾದರಿಯ ರೆಸ್ಯೂಮ್ ಅನ್ನು 2-3 ಹುದ್ದೆಗಳಿಗೆ ಕಳುಹಿಸುವುದು. ಪದೇ ಪದೇ ನಿಮ್ಮ ಒಂದೇ ಮಾದರಿಯ ರೆಸ್ಯೂಮ್ ಆಯ್ಕೆದಾರರನ್ನು ಸೆಳೆಯುವಲ್ಲಿ ವಿಫಲವಾಗುತ್ತದೆ.
5/ 7
ಇದರ ಬದಲಿಗೆ ನೀವು ಹುದ್ದೆಗೆ ಸರಿ ಹೊಂದುವ, ಜಾಬ್ ಡಿಸ್ಕ್ರಿಪ್ಷನ್ ಗೆ ಹೊಂದುವ ಮಾದರಿ ಬೇರೆ ಬೇರೆ ರೆಸ್ಯೂಮ್ ಕಳುಹಿಸಬೇಕು. ಆಗ ನಿಮಗೆ ಒಂದೇ ಸಂಸ್ಥೆಯಿಂದ 2-3 ಹುದ್ದೆಗಳಿಗೆ ಇಂಟರ್ ವ್ಯೂ ಕಾಲ್ ಬರುತ್ತದೆ.
6/ 7
ಒಂದೇ ರೀತಿಯ ರೆಸ್ಯೂಮ್ ಕಳುಹಿಸುವ ತಪ್ಪನ್ನು ಮಾಡಲೇಬೇಡಿ. ಬೇರೆ ರೀತಿಯ ರೆಸ್ಯೂಮ್ ಅನ್ನ ಎಡಿಟ್ ಮಾಡಿ, ಫಾರ್ಮೆಂಟ್ ಬದಲಿ, ಇಲ್ಲವೇ ಅಪಡೇಟ್ ಮಾಡಿ ಕಳುಹಿಸಿ.
7/ 7
ಇನ್ನು ಸಂದರ್ಶನದ ವೇಳೆಯೂ ನೀವು ಹೇಗೆ 2-3 ಹುದ್ದೆಗಳಿಗೆ ಸೂಕ್ತ ಅಭ್ಯರ್ಥಿ ಎಂಬುವುದನ್ನು ಹೇಳಿ. ಯಾವ ಹುದ್ದೆಗೆ ಪ್ರಾಶಸ್ತ್ಯ ನೀಡುತ್ತೀರಿ ಎಂಬುವುದನ್ನು ತಿಳಿಸಿ. ಆಗ ಕಂಪನಿಯವರಿಗೆ ನೀವು ಅವರಲ್ಲಿ ಕೆಲಸ ಮಾಡಲು ಆಸಕ್ತರಾಗಿದ್ದೀರಿ ಎಂದು ತಿಳಿಯುತ್ತದೆ.