4 Day Working Week: ವಾರದಲ್ಲಿ 4 ದಿನ ಕೆಲಸ, 3 ರಜೆಗಳಿಗೆ ಒಪ್ಪಿದ 100 ಕಂಪನಿಗಳು!
ವಿಶ್ವಾದ್ಯಂತ ಬಹುತೇಕ ಟೆಕ್ ಕಂಪನಿಗಳು ವಾರಂತ್ಯದಲ್ಲಿ ಅಂದರೆ ಶನಿವಾರ, ಭಾನುವಾರ ಉದ್ಯೋಗಿಗಳಿಗೆ ರಜೆ ನೀಡುತ್ತಿವೆ. ಈಗ ಉದ್ಯೋಗಿಗಳು ಕುಣಿದಾಡುವಂತ ಭರ್ಜರಿ ಸುದ್ದಿ ಹೊರಬಿದ್ದಿದೆ. ಇನ್ಮುಂದೆ ವಾರದಲ್ಲಿ 2 ದಿನ ಅಲ್ಲ, 3 ದಿನಗಳು ರಜೆ ಅಂತೆ.
ಹೌದು, ಉದ್ಯೋಗಿಗಳಿಗೆ ನಿಜಕ್ಕೂ ಗುಡ್ ನ್ಯೂಸ್ ಇದು. ವಾರದಲ್ಲಿ 4 ದಿನ ಕೆಲಸ, 3 ರಜೆಗಳಿಗೆ 100 ಕಂಪನಿಗಳು ಒಪ್ಪಿಗೆ ನೀಡಿವೆಯಂತೆ. ವಾರದಲ್ಲಿ 4 ದಿನಗಳ ಕೆಲಸ ಇನ್ಮುಂದೆ ಶಾಶ್ವತವಂತೆ. ಇದರ ಜೊತೆ ವೇತನ ಕಡಿತವೂ ಇಲ್ಲವಂತೆ.
2/ 7
ಸದ್ಯಕ್ಕೆ ಬ್ರಿಟನ್ ನ 100 ಕಂಪನಿಗಳು ಈ ನಿರ್ಧಾರವನ್ನು ಪ್ರಕಟಿಸಿವೆ. ಯುಕೆಯಲ್ಲಿನ ಉದ್ಯೋಗಿಗಳು ಹೊಸ ನೀತಿಯನ್ನು ಖುಷಿಯಿಂದ ಸ್ವಾಗತಿಸಿದ್ದಾರೆ.
3/ 7
ಬ್ರಿಟನ್ ನ 100 ಕಂಪನಿಗಳು ಯಾವುದೇ ವೇತನದ ನಷ್ಟವಿಲ್ಲದೆ ಎಲ್ಲಾ ಉದ್ಯೋಗಿಗಳಿಗೆ ಶಾಶ್ವತ ನಾಲ್ಕು ದಿನಗಳ ಕೆಲಸದ ವಾರಕ್ಕೆ ನಿರ್ಧರಿಸಿವೆ. 100 ಕಂಪನಿಗಳಲ್ಲಿ ಸುಮಾರು 2,600 ಉದ್ಯೋಗಿಗಳು ಹೊಸ ಕೆಲಸದ ಮಾದರಿಯಿಂದ ಪ್ರಯೋಜನ ಪಡೆಯಲಿದ್ದಾರೆ.
4/ 7
ಹೊಸ ಕೆಲಸದ ನೀತಿದೆ ಸೈನ್ ಅಪ್ ಮಾಡಿದ ಎರಡು ದೊಡ್ಡ ಕಂಪನಿಗಳೆಂದರೆ ಆಟಮ್ ಬ್ಯಾಂಕ್ ಮತ್ತು ಜಾಗತಿಕ ಮಾರ್ಕೆಟಿಂಗ್ ಕಂಪನಿ ಅವಿನ್. ಈ ಕಂಪನಿಗಳು ಯುಕೆಯಲ್ಲಿ ತಲಾ 450 ಸಿಬ್ಬಂದಿಯನ್ನು ಹೊಂದಿದೆ. ಸಾಂದರ್ಭಿಕ ಚಿತ್ರ
5/ 7
4 ದಿನಗಳ ಕೆಲಸ ಉದ್ಯೋಗಿಗಳ ವರ್ಕ್-ಲೈಫ್ ಬ್ಯಾಲೆನ್ಸ್ ಅನ್ನು ಮತ್ತಷ್ಟು ಸುಧಾರಿಸುತ್ತದೆ. ವಾರದಲ್ಲಿ 3 ದಿನಗಳ ಕಾಲ ರಜೆ ಇರುವುದು ಉದ್ಯೋಗಿಗಳ ಉತ್ಪಾದಕತೆ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ ಎಂದು ಕಂಪನಿಗಳು ತಮ್ಮ ಹೇಳಿಕೆಯಲ್ಲಿ ತಿಳಿಸಿವೆ.
6/ 7
ಇನ್ನು ಭಾರತದಲ್ಲಿ ಟೆಕ್ ಕಂಪನಿಗಳು ಮಾತ್ರ ವಾರಂತ್ಯದಲ್ಲಿ ಎರಡು ರಜೆಗಳನ್ನು ನೀಡುತ್ತಿವೆ. ಉಳಿದಂತೆ ಸರ್ಕಾರಿ ಸೇರಿದಂತೆ ಎಲ್ಲಾ ಖಾಸಗಿ ಸಂಸ್ಥೆಗಳು ವಾರಕ್ಕೆ ಒಂದು ರಜೆಯ ಮಾದರಿಯನ್ನೇ ಅವಲಂಬಿಸಿವೆ.
7/ 7
ಭಾರತದಲ್ಲೂ ಕಾರ್ಮಿಕರ ಕಾನೂನಿಗೆ ತಿದ್ದುಕಡಿಯನ್ನು ತಂದೆ ವಾರದಲ್ಲಿ 4 ದಿನಗಳು ಮಾತ್ರ ಕೆಲಸ ಮಾಡವ ನಿಮಯ ತರಲು ಚರ್ಚೆಗಳು ನಡೆಯುತ್ತಿವೆ. ಆದರೆ ಅದು ಪ್ರಸ್ತಾಪವಾಗಿಯೇ ಉಳಿದಿದೆ.