Farming Tips: ವಿದೇಶದಲ್ಲಿಯ ವಜ್ರದ ವ್ಯಾಪಾರ ಬಿಟ್ಟು ಭಾರತಕ್ಕೆ ಬಂದು ಕೃಷಿಯಲ್ಲಿ ಯಶಸ್ವಿಯಾದ ರೈತ
ಬನಸ್ಕಾಂತ ಪ್ರದೇಶದ ಯುವಕನೋರ್ವ ವಿದೇಶದಲ್ಲಿಯ ಕೆಲಸ ತೊರೆದು ಸ್ವಗ್ರಾಮದಲ್ಲಿ ಹಸು ಸಾಕಾಣಿಕೆ ಆರಂಭಿಸಿ ಯಶಸ್ವಿಯಾಗಿದ್ದಾರೆ. ಇದರ ಜೊತೆಗೆ ಅರಿಶಿನ ಬೆಳೆ ಬೆಳೆದು ಲಕ್ಷ ಲಕ್ಷ ಹಣ ಎಣಿಸುತ್ತಿದ್ದಾರೆ. ವಿದೇಶದಲ್ಲಿ ನಡೆಯುವ ಸಾವಯವ ಕೃಷಿ ಸ್ಪರ್ಧೆಗಳಲ್ಲಿ ಅನೇಕ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರ ಸಹ ಇವರನ್ನು ಗೌರವಿಸಿದೆ.
ವಿದೇಶದಲ್ಲಿ ವ್ಯಾಪಾರ ಮಾಡಿಕೊಂಡಿದ್ದ ಯಶಭಾಯ್ ಪಡಿಯಾರ್ ತವರೂರಿಗೆ ಬಂದು ಸಾವಯವ ಕೃಷಿ ಆರಂಭಿಸಿದ್ದಾರೆ. ಪ್ರತಿವರ್ಷವೂ ಉತ್ತಮ ಆದಾಯವನ್ನು ಯಶಭಾಯ್ ಪಡಿಯಾರ್ ಪಡೆದುಕೊಳ್ಳುತ್ತಿದ್ದಾರೆ.
2/ 8
ಬನಸ್ಕಾಂತ ಜಿಲ್ಲೆಯ ಪಾಲನ್ಪುರ ನಿವಾಸಿಯಾಗಿರುವ ಯಶಭಾಯ್ ಪಡಿಯಾರ್ ಸಿಂಗಾಪುರದಲ್ಲಿ ವಜ್ರದ ವ್ಯಾಪಾರ ನಡೆಸುತ್ತಿದ್ದರು. ತಾಯಿ ಕ್ಯಾನ್ಸರ್ ರೋಗಕ್ಕೆ ತುತ್ತಾದ ಹಿನ್ನೆಲೆ ಸಿಂಗಾಪುರನಿಂದ ಭಾರತಕ್ಕೆ ಬಂದು ಪಾಲನ್ಪುರಕ್ಕೆ ಬಂದಿದ್ದಾರೆ.
3/ 8
ರಾಸಾಯನಿಕ ಗೊಬ್ಬರ ಬಳಕೆ ಮಾಡಿರುವ ತರಕಾರಿ, ಕಲಬೆರಕೆ ಆಹಾರ ಸೇವನೆಯಿಂದ ತಮ್ಮ ತಾಯಿ ಕ್ಯಾನ್ಸರ್ ರೋಗಕ್ಕೆ ಕಾರಣ ಎಂದು ವೈದ್ಯರು ಹೇಳಿದ್ದರು. ಈ ಸಂಬಂಧ ಅಧ್ಯಯನ ಮಾಡಿದ ಯಶ್ ಪರಿಯಾರ್, ತಮ್ಮ ಕೃಷಿ ಭೂಮಿಯಲ್ಲಿ ಸಾವಯವ ಕೃಷಿ ಆರಂಭಿಸಿದರು.
4/ 8
ಉತ್ತರ ಗುಜರಾತಿನಲ್ಲಿ ಪ್ರಥಮ ಬಾರಿಗೆ ಅರಿಶಿನವನ್ನು ಬೆಳೆಸಿದ ರೈತರಾಗಿದ್ದಾರೆ. ಇಲ್ಲಿ ಬೆಳೆದ ಅರಿಶಿನವನ್ನು ವಿದೇಶಕ್ಕೆ ರಫ್ತು ಮಾಡಿ ಉತ್ತಮ ಆದಾಯವನ್ನು ಪಡೆದುಕೊಳ್ಳುತ್ತಿದ್ದಾರೆ. ಬಯೋಡೈನಮಿಕ್ ಕೃಷಿ ಮಾಡಿದ ಪಾಲನಪುರದ ಮೊದಲ ರೈತರಾಗಿದ್ದಾರೆ.
5/ 8
ಯಶ್ ಪಡಿಯಾರ್ ಬಯೋಡೈನಾಮಿಕ ಪದ್ಧತಿಯನ್ನು ಕೃಷಿಯಲ್ಲಿ ಅಳವಡಿಸಿಕೊಂಡಿದ್ದಾರೆ. ಅರಿಶಿನದ ಜೊತೆ ವಿವಿಧ ತರಕಾರಿ ಬೆಳೆದು ರಫ್ತು ಮಾಡುತ್ತಾರೆ.
6/ 8
ಕೃಷಿ ಜೊತೆಗೆ ಶಾಲೆಗಳಿಗೆ ತೆರಳುವ ಯಶ್ ಪಡಿಯಾರ್, ಮಕ್ಕಳಿಗೆ ಭಾರತದ ಕೃಷಿ ಪದ್ಧತಿ ಬಗ್ಗೆ ಮಾಹಿತಿ ನೀಡುತ್ತಾರೆ. ಇವರ ಕೃಷಿ ಭೂಮಿಗೆ ಮಕ್ಕಳು ಸಹ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳುತ್ತಾರೆ.
7/ 8
ಕಳೆದ 7 ವರ್ಷಗಳಿಂದ ತಮ್ಮ ಜಮೀನಿನಲ್ಲಿ ವಿವಿಧ ರೀತಿಯ ಸಾವಯವ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಇವರ ಕೃಷಿ ಭೂಮಿ ವಿದ್ಯಾರ್ಥಿಗಳಿಗೆ ಅಧ್ಯಯನ ಕೇಂದ್ರವಾಗಿದೆ.
8/ 8
ವಿದೇಶದಲ್ಲಿ ನಡೆಯುವ ಕೃಷಿ ಉತ್ಪನ್ನಗಳ ಸ್ಪರ್ಧೆಯಲ್ಲಿ ಯಶ್ ಭಾಗಿಯಾಗಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಇತ್ತ ರಾಜ್ಯ ಹಾಗೂ ಕೇಂದ್ರ ಸರ್ಕಾರವೂ ಸಹ ಯಶ್ ಅವರನ್ನು ಗೌರವಿಸಿವೆ.