ಸಾಮಾನ್ಯವಾಗಿ ನಾವು ಈ ಫೋಟೋ, ವಿಡಿಯೋ ಅಥವಾ ರೀಲ್ಸ್ ಪೋಸ್ಟ್ ಮಾಡಲು ಇನ್ಸ್ಟಾಗ್ರಾಮ್ ಬಳಸುತ್ತೇವೆ. ಆದರೆ ಸಾಮಾನ್ಯ ಜನರು ಸಹ ಇನ್ಸ್ಟಾಗ್ರಾಮ್ ನಿಂದಲೇ ಸಾವಿರಾರು ರೂಪಾಯಿಗಳನ್ನು ಗಳಿಸಬಹುದು. ನೀವು ಕೇಳುತ್ತಿರುವುದು ನಿಜ. ಇದಕ್ಕಾಗಿ ಈ ಕೆಲವು ಟ್ರಿಕ್ಸ್ ಪಾಲಿಸಿದರೆ ತಿಂಗಳಿಗೆ ರೂ.60 ಸಾವಿರದ ತನಕ ಆದಾಯ ಗಳಿಸಬಹುದು. ಅದು ಹೇಗೆ ಎಂದು ಇಲ್ಲಿ ತಿಳಿದುಕೊಳ್ಳೋಣ..? (ಸಾಂಕೇತಿಕ ಚಿತ್ರ)
ಮಿಲಿಯನ್ಗಟ್ಟಲೆ ಫಾಲೋವರ್ಸ್ ಹೊಂದಿರುವ ಸೆಲೆಬ್ರೆಟಿಗಳು ಇನ್ಸ್ಟಾಗ್ರಾಮ್ನಲ್ಲಿ ಒಂದು ಪೇಯ್ಡ್ ಪ್ರಮೋಷನ್ಗೆ ಲಕ್ಷಗಟ್ಟಲೇ ಚಾರ್ಜ್ ಮಾಡುತ್ತಿದ್ದಾರೆ. ಭಾರತದ ಕ್ರಿಕೆಟರ್ ವಿರಾಟ್ ಕೊಹ್ಲಿ ಪ್ರತಿ ಇನ್ಸ್ಟಾಗ್ರಾಮ್ ಪೇಯ್ಡ್ ಪೋಸ್ಟ್ಗೆ ಅಂದಾಜು 8 ಕೋಟಿ ರೂಪಾಯಿ ಪಡೆಯುತ್ತಿದ್ದಾರೆ. ಪೋರ್ಚುಗಲ್ ಫುಟ್ಬಾಲ್ ಆಟಗಾರ ಕ್ರಿಶ್ಚಿಯಾನೋ ರೋನಾಲ್ಡೊ 554 ಮಿಲಿಯನ್ ಫಾಲೋವರ್ಸ್ ಹೊಂದಿದ್ದು, ಪ್ರತಿ ಪೋಸ್ಡ್ಗೆ 19 ಕೋಟಿ ರೂ ಪಡೆಯುತ್ತಿದ್ದಾರೆ.