ಬ್ಯಾಂಕ್ ಸಿಬ್ಬಂದಿ ತಡವಾಗಿ ಬರುವುದರಿಂದ ಗ್ರಾಹಕರು ಮತ್ತು ನೌಕರರ ನಡುವೆ ಆಗಾಗ ಜಗಳಗಳು ನಡೆಯುತ್ತಿವೆ. ಊಟ, ತಿಂಡಿ, ಕಾಫಿ ಅಂತ ಬ್ಯಾಂಕ್ ಸಿಬ್ಬಂದಿ ಹಲವಾರು ಕಾರಣಗಳನ್ನು ನೀಡುತ್ತಾರೆ. ಒಂದು ವೇಳೆ ಈ ರೀತಿ ಸಮಸ್ಯೆಯನ್ನು ನೀವು ಎದುರಿಸುತ್ತಿದ್ರೆ ನೀವು ನೇರವಾಗಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಜೊತೆಗೆ ಲೋಕಪಾಲ್ ಅಥವಾ ಗ್ರಾಹಕರ ವೇದಿಕೆಗೆ ದೂರು ಸಲ್ಲಿಸಬಹುದು.(ಸಾಂದರ್ಭಿಕ ಚಿತ್ರ)
ದೇಶದ ಯಾವುದೇ ಬ್ಯಾಂಕ್ ತನ್ನ ಗ್ರಾಹಕರೊಂದಿಗೆ ಅನುಚಿತವಾಗಿ ವರ್ತಿಸಿದರೆ, ಆರ್‌ಬಿಐಗೆ ದೂರು ಬಂದಾಗ ಕ್ರಮ ತೆಗೆದುಕೊಳ್ಳಲಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಬ್ಯಾಂಕಿಂಗ್ ಒಂಬುಡ್ಸ್‌ಮನ್‌ಗೆ ದೂರುಗಳನ್ನು ಸಹ ಮಾಡಬಹುದು. ಬ್ಯಾಂಕ್ ಉದ್ಯೋಗಿಗಳ ಕುಂದುಕೊರತೆಗಳಿಗೆ ಸಂಬಂಧಿಸಿದ ಬ್ಯಾಂಕ್‌ನ ಕುಂದುಕೊರತೆ ಪರಿಹಾರ ಸಂಖ್ಯೆಗಳನ್ನು ನೀಡಲಾಗಿದೆ. ಇದಲ್ಲದೆ, ನೀವು ಬ್ಯಾಂಕ್ ಉದ್ಯೋಗಿಯ ಬಗ್ಗೆ ಬ್ಯಾಂಕಿಂಗ್ ಒಂಬುಡ್ಸ್‌ಮನ್‌ಗೆ ದೂರು ನೀಡಬಹುದು.(ಸಾಂದರ್ಭಿಕ ಚಿತ್ರ)