1) ಎಲಾನ್ ಮಸ್ಕ್: ಟೆಸ್ಲಾ ಸಿಇಒ ಎಲಾನ್ ಮಸ್ಕ್ ಈ ವರ್ಷ ಅಂತ್ಯತ ಹೆಚ್ಚು ಸುದ್ದಿಯಾದವರಲ್ಲಿ ಒಬ್ಬರು. ಟ್ವಿಟರ್ ಖರೀದಿಸಿದ ನಂತರವಂತೂ ಇವತ ಅಬ್ಬರ ಕೇಳಲೇಬೇಡಿ. ಟ್ವಿಟರ್ ತನ್ನ ತೆಕ್ಕೆಗೆ ಬರುತ್ತಿದ್ದಂತೆ ಉನ್ನದ ಅಧಿಕಾರಿಗಳು ಸೇರಿ ಸಾಕಷ್ಟು ಮಂದಿ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಿದರು. ಜೊತೆಗೆ ಕಂಪನಿಯಲ್ಲಿರುವ ಉದ್ಯೋಗಿಗಳಿಗೆ ದಿನಕ್ಕೆ 13 ಗಮಟೆ ಕೆಲಸ ಮಾಡುವಂತೆ ವಾರ್ನಿಂಗ್ ಕೂಡ ಕೊಟ್ಟಿದ್ದಾರೆ.
2) ಸ್ಯಾಮ್ ಬ್ಯಾಂಕ್ಮನ್-ಫ್ರೈಡ್: ಕ್ರಿಪ್ಟೋ ವಂಡರ್‌ಕೈಂಡ್‌ನ ಅದೃಷ್ಟವು ಈ ವರ್ಷ ತುಂಬಾ ಚೆನ್ನಾಗಿತ್ತು ಅಂದರೆ ತಪ್ಪಾಗಲ್ಲ. ಆದರೆ ಇದರ ಸಿಇಒ ಮಾತ್ರ ಈ ವರ್ಷ ಹೊರದೇಶದಲ್ಲಿ ಹೆಚ್ಚು ಸುದ್ದಿಯಾಗಿದ್ದರು. ಬ್ಯಾಂಕ್‌ಮ್ಯಾನ್-ಫ್ರೈಡ್ ಮತ್ತು ಅವರ ಆಂತರಿಕ ವಲಯವು ಐಷಾರಾಮಿ ಬಹಾಮಾಸ್ ವಿಳಾಸದಿಂದ ನಡೆಸುತ್ತಿರುವ ಕಂಪನಿಯಲ್ಲಿ ಪಾರದರ್ಶಕತೆಯ ಕೊರತೆಯ ಬಗ್ಗೆ ಖಂಡನೀಯ ವರದಿಗಳು ಹೊರಹೊಮ್ಮಿದವು. ಬ್ಯಾಂಕ್‌ಮ್ಯಾನ್-ಫ್ರೈಡ್ ಎಫ್‌ಟಿಎಕ್ಸ್ ಬಿಕ್ಕಟ್ಟಿನ ಮಧ್ಯದಲ್ಲಿ ಸಿಇಒ ಹುದ್ದೆಯಿಂದ ಕೆಳಗಿಳಿದರು