Cellato: ಜಪಾನ್‌ನ ಜನಪ್ರಿಯ ಐಸ್ ಕ್ರೀಂ ಬ್ರಾಂಡ್ ಆಗಿದೆ. ಇತ್ತೀಚೆಗೆ ಅಪರೂಪದ ದಾಖಲೆ ನಿರ್ಮಿಸಿದೆ. ಈ ಕಂಪನಿ ವಿಶ್ವದ ಅತ್ಯಂತ ದುಬಾರಿ ಐಸ್ ಕ್ರೀಂ ತಯಾರಿಸಿದೆ. ಇದು ಗಿನ್ನೆಸ್ ವಿಶ್ವ ದಾಖಲೆಗೂ ಸೇರಿದೆ. Cellato ತಯಾರಿಸಿದ ಈ ಐಸ್ ಕ್ರೀಂ ಅನ್ನು Backuya ಎಂದು ಕರೆಯಲಾಗುತ್ತದೆ. ಬೆಲೆ 873,400 ಜಪಾನೀಸ್ ಯೆನ್. ಅಂದರೆ ಭಾರತೀಯ ಕರೆನ್ಸಿ ಪ್ರಕಾರ 5.23 ಲಕ್ಷ ರೂಪಾಯಿ ಆಗಿದೆ. (image: Guinness World Records)
ಈ ಅದ್ಭುತ ಐಸ್ ಕ್ರೀಂನಲ್ಲಿ ವೈಟ್ ಟ್ರಫಲ್ ಮುಖ್ಯ ಅಂಶವಾಗಿದೆ. ಇದು ಇಟಲಿಯ ಆಲ್ಬಾ ಪ್ರದೇಶದಲ್ಲಿ ಪ್ರತ್ಯೇಕವಾಗಿ ಕಂಡುಬರುತ್ತದೆ. ಬಿಳಿ ಟ್ರಫಲ್ ಅದರ ವಿಶಿಷ್ಟ ಪರಿಮಳ ಮತ್ತು ಅತ್ಯುತ್ತಮ ರುಚಿಗೆ ಹೆಸರುವಾಸಿಯಾಗಿದೆ. ಅದಕ್ಕೆ ಬೇಡಿಕೆ ಹೆಚ್ಚಿದೆ. ಇದು ಪ್ರತಿ ಕೆಜಿಗೆ 2 ಮಿಲಿಯನ್ ಜಪಾನೀಸ್ ಯೆನ್. ಭಾರತೀಯ ಕರೆನ್ಸಿ ಪ್ರಕಾರ ಪ್ರತಿ ಕೆಜಿಗೆ 2 ಲಕ್ಷ ರೂಪಾಯಿ ಆಗಿದೆ. (image: Guinness World Records))
ವೈಟ್ ಟ್ರಫಲ್ ಬಳಕೆಯಿಂದಾಗಿ ಸೆಲ್ಲಾಟೊ ಬ್ಯಾಕುವಾ ಐಸ್ ಕ್ರೀಂ ದುಬಾರಿಯಾಗಿದೆ. ಬೆಲೆಬಾಳುವ ಐಸ್ಕ್ರೀಂ ವೈಟ್ ಟ್ರಫಲ್ ಜೊತೆಗೆ ಬೈಕುಯಾ ಪರ್ಮಿಗಿಯಾನೊ ರೆಗ್ಜಿಯಾನೊ ಹಾಗೂ ಸೇಕ್ ಲೀಸ್ ಗೋಲ್ಡನ್ ಲೀವ್ಸ್ ಒಳಗೊಂಡಿದೆ. ಈ ಪದಾರ್ಥಗಳನ್ನು ಬಳಸಿ ಯುರೋಪಿಯನ್ ಮತ್ತು ಜಪಾನೀಸ್ ರುಚಿಗಳನ್ನು ಸಂಯೋಜಿಸಿದಾಗ ದುಬಾರಿ ಐಸ್ಕ್ರೀಂ ತಯಾಗುತ್ತದೆ. (image: Guinness World Records)
ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ತಂಡವು ಈ ಅಸಾಮಾನ್ಯ ಸೃಷ್ಟಿಯನ್ನು ನೇರವಾಗಿ ಸ್ಯಾಂಪಲ್ ಮಾಡಿಲ್ಲ. ಆದರೆ ಸೆಲ್ಲಾಟೊದಲ್ಲಿ ನಡೆದ ಟೆಸ್ಟಿಂಗ್ ಸೆಷನ್ನಲ್ಲಿ ಈ ವಿಶೇಷವಾದ ರುಚಿಕರವಾದ ಆಹಾರ ಸಮ್ಮೇಳನದಲ್ಲಿ ಭಾಗವಹಿಸಿದ ಅನುಭವ ಇರುವ ಅಧಿಕಾರಿಗಳಿಂದ ದೃಢೀಕರಿಸಲ್ಪಟ್ಟಿದೆ. ಅವರೆಲ್ಲರೂ ವೈಟ್ ಟ್ರಫಲ್‌ನ ಪರಿಮಳ ಮತ್ತು ರುಚಿಯನ್ನು ಪ್ರಶಂಸಿಸಿದ್ದಾರೆ. (image: Guinness World Records)
ಸೆಲ್ಲಾಟೋ ಈ ಐಸ್ ಕ್ರೀಂ ತಯಾರಿಸಲು ಒಂದುವರೆ ವರ್ಷ ತೆಗೆದುಕೊಂಡಿದೆ. ಒಳ್ಳೆಯ ರುಚಿ ಪಡೆಯಲು ಹಲವಾರು ಪ್ರಯೋಗಗಳನ್ನು ಮಾಡಲಾಗಿದೆ. ಇದನ್ನು ತಯಾರಿಸುವ ದಾರಿಯಲ್ಲಿ ಹಲವು ಬಾರಿ ವಿಫಲರಾಗಿದ್ದೆವು. ಇದೀಗ ಯಶಸ್ವಿಯಾಗಿದ್ದು, ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಪಾತ್ರರಾಗಿದ್ದೇವೆ. ಭವಿಷ್ಯದಲ್ಲಿ ಇನ್ನಷ್ಟು ಹೊಸ ಉತ್ಪನ್ನಗಳನ್ನು ಪರಿಚಯಿಸಲು ಇದು ನಮಗೆ ಪ್ರೇರಣೆ ನೀಡಿದೆ ಎಂದಿದ್ದಾರೆ. (image: Guinness World Records)