ಅಶ್ವಿನಿಯ ಪಾನಿಪುರಿ ಸ್ಟಾಲ್ ತೆರೆದು ಎರಡು ತಿಂಗಳಾಗಿದೆ. ಆದರೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನಿತ್ಯ 150 ರಿಂದ 200 ಪ್ಲೇಟ್ ಪಾನಿಪುರಿ ಮತ್ತಿತರ ಆಹಾರ ಪದಾರ್ಥಗಳನ್ನು ಮಾರಾಟ ಮಾಡುತ್ತಾರೆ. ವಿವಿಧ ಬಗೆಯ ಖಾದ್ಯಗಳನ್ನು ತಯಾರಿಸುವ ಅಶ್ವಿನಿ ಇದೀಗ ಮಕ್ಕಳಿಗಾಗಿ ಚಾಕಲೇಟ್ ಪಾನಿಪುರಿ ಮಾಡುತ್ತಿದ್ದಾರೆ. ಜೊತೆಗೆ ವಾರದಲ್ಲಿ 2 ದಿನ ಅನಿಯಮಿತ ಪಾನಿಪುರಿ ಆಫರ್ ಕೂಡ ನೀಡಿದ್ದಾರೆ.