Anant Ambani: ಅನಂತ್ ಅಂಬಾನಿ ಯಾರು? ಯುವ ಉದ್ಯಮಿಯ ಬಗ್ಗೆ ಆಸಕ್ತಿಕರ ವಿಚಾರ ಇಲ್ಲಿದೆ ನೋಡಿ
ಇಶಾ ಮತ್ತು ಆಕಾಶ್ ಅಂಬಾನಿ ನಂತರ ಅನಂತ್ ಅಂಬಾನಿ ಅವರು 1995 ರಲ್ಲಿ ಜನಿಸಿದರು. ಅನಂತ್ ಅಂಬಾನಿ ಅವರು ಮುಕೇಶ್ ಅಂಬಾನಿಯವರ ಕಿರಿಯ ಪುತ್ರರಾಗಿದ್ದಾರೆ. ಧೀರೂಭಾಯಿ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲ್ನಲ್ಲಿ ತಮ್ಮ ಶಿಕ್ಷಣವನ್ನು ಪ್ರಾರಂಭಿಸಿದ ಅನಂತ್ ಅಂಬಾನಿ ನಂತರ ಅಮೇರಿಕಾದ ಬ್ರೌನ್ ವಿಶ್ವವಿದ್ಯಾನಿಲಯದಲ್ಲಿ ಪದವಿ ಮುಗಿಸಿದರು.
ರಿಲಯನ್ಸ್ ಇಂಡಸ್ಟ್ರೀಸ್ (ಆರ್ಐಎಲ್) ಅಧ್ಯಕ್ಷ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅನಂತ್ ಅಂಬಾನಿ ಇಂದು ರಾಧಿಕಾ ಮರ್ಚೆಂಟ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು. ಅಷ್ಟಕ್ಕೂ ಅನಂತ್ ಅಂಬಾನಿ ಯಾರು ಅಂತ ಗೊತ್ತಾ? ಈ ಕುರಿತು ನಿಮಗೆ ಗೊತ್ತಿರದ ಒಂದಷ್ಟು ಮಾಹಿತಿ ಈ ಕೆಳಗಿನಂತಿದೆ ನೋಡಿ.
2/ 10
ರಾಜಸ್ಥಾನದ ನಾಥದ್ವಾರದಲ್ಲಿರುವ ಶ್ರೀನಾಥ್ಜಿ ದೇವಸ್ಥಾನದಲ್ಲಿ ಕೈಗಾರಿಕೋದ್ಯಮಿ ವೀರೇನ್ ಮರ್ಚೆಂಟ್ ಅವರ ಪುತ್ರಿಯಾಗಿರುವ ರಾಧಿಕಾ ಮರ್ಚೆಂಟ್ ಜೊತೆ ಅನಂತ್ ಅಂಬಾನಿ ಎಂಗೆಜ್ಮೆಂಟ್ ಸಾಂಪ್ರದಾಯಿಕವಾಗಿ ಗುರು ಹಿರಿಯರ ನಡುವೆ ಪರಸ್ಪರ ಉಂಗುರಗಳನ್ನು ಬದಲಾಯಿಸಿಕೊಂಡರು.
3/ 10
ಇನ್ನೂ ಈ ಫೋಟೋವನ್ನು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನಿರ್ದೇಶಕ ಪರಿಮಳ್ ನಾಥ್ವಾನಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಶುಭ ಕೋರಿದರು. ಫೋಟೋದಲ್ಲಿ ಅನಂತ್ ಪಿಂಕ್ ಕುರ್ತಾ ಧರಿಸಿದ್ದು, ರಾಧಿಕಾ ಪಿಂಕ್ ಲೆಹೆಂಗಾ ಮತ್ತು ಆಭರಣದಲ್ಲಿ ಅದ್ಬುತವಾಗಿ ಕಂಗೊಳಿಸಿದರು.
4/ 10
ಇಶಾ ಮತ್ತು ಆಕಾಶ್ ಅಂಬಾನಿ ನಂತರ ಅನಂತ್ ಅಂಬಾನಿ ಅವರು 1995 ರಲ್ಲಿ ಜನಿಸಿದರು. ಅನಂತ್ ಅಂಬಾನಿ ಅವರು ಮುಕೇಶ್ ಅಂಬಾನಿಯವರ ಕಿರಿಯ ಪುತ್ರರಾಗಿದ್ದಾರೆ.
5/ 10
ಧೀರೂಭಾಯಿ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲ್ನಲ್ಲಿ ತಮ್ಮ ಶಿಕ್ಷಣವನ್ನು ಪ್ರಾರಂಭಿಸಿದ ಅನಂತ್ ಅಂಬಾನಿ ನಂತರ ಅಮೇರಿಕಾದ ಬ್ರೌನ್ ವಿಶ್ವವಿದ್ಯಾನಿಲಯದಲ್ಲಿ ಪದವಿ ಮುಗಿಸಿದರು.
6/ 10
27 ವರ್ಷದವರಾಗಿರುವ ಅನಂತ್ ಅಂಬಾನಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನ ಇಂಧನ ವ್ಯವಹಾರವನ್ನು ಮುನ್ನಡೆಸುತ್ತಿದ್ದಾರೆ. ಇದು ಅಂಬಾನಿಯವರು ಹೂಡಿಕೆ ಮಾಡಿರುವ ಪ್ರಮುಖ ಕ್ಷೇತ್ರವಾಗಿದೆ.
7/ 10
ಈ ವ್ಯವಹಾರದ ಜೊತೆಗೆ ಅನಂತ್ ಅಂಬಾನಿಯವರು ತಾಯಿ ನೀತಾ ಅಂಬಾನಿ ಜೊತೆಗೆ, ಕುಟುಂಬದ ಒಡೆತನದ ಮುಂಬೈ ಇಂಡಿಯನ್ಸ್, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫ್ರಾಂಚೈಸಿಯ ಪ್ರಮುಖ ವ್ಯಕ್ತಿಯಾಗಿದ್ದಾರೆ.
8/ 10
ಅನಂತ್ ಅಂಬಾನಿ ಎರಡು ವರ್ಷಗಳಿಂದ ಜಿಯೋ ಪ್ಲಾಟ್ಫಾರ್ಮ್ಗಳ ನಿರ್ದೇಶಕರಾಗಿದ್ದಾರೆ ಮತ್ತು ಈ ವರ್ಷದ ಆರಂಭದಲ್ಲಿ ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್ (RRVL) ನ ನಿರ್ದೇಶಕರಾಗಿ ನೇಮಕಗೊಳ್ಳಲಿದ್ದಾರೆ.
9/ 10
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಬಾಲ್ಯದ ಗೆಳೆಯರಾಗಿದ್ದಾರೆ. ಪ್ರಸಿದ್ಧ ಕುಟುಂಬದ ಹಿನ್ನೆಲೆ ಹೊಂದಿರುವ ರಾಧಿಕಾ ಮರ್ಚೆಂಟ್ ತರಬೇತಿ ಪಡೆದಿರುವ ಶಾಸ್ತ್ರೀಯ ನೃತ್ಯಗಾರ್ತಿಯಾಗಿದ್ದಾರೆ. ರಾಧಿಕಾ ಮರ್ಚೆಂಟ್ ಅವರ ತಂದೆ ವೀರೇನ್ ಮರ್ಚೆಂಟ್ ಎನ್ಕೋರ್ ಹೆಲ್ತ್ಕೇರ್ನ ಸಿಇಒ ಆಗಿದ್ದಾರೆ.
10/ 10
ಕೆಲವು ದಿನಗಳ ಹಿಂದೆ ಇಶಾ ಅಂಬಾನಿಗೆ ಅವಳಿ ಮಕ್ಕಳಾಗಿದ್ದವು. ಇದರ ನಡುವೆ ಅಂಬಾನಿ ಕುಟುಂಬ ಮತ್ತೊಂದು ಸಂತಸದ ಕ್ಷಣಕ್ಕೆ ಸಾಕ್ಷಿಯಾಗಿದೆ. ಅನಂತ್ ಅಂಬಾನಿ ರಾಧಿಕಾ ಮರ್ಚೆಂಟ್ ಜೊತೆ ಅದ್ದೂರಿಯಾಗಿ ಜರುಗಿದೆ. ಇಬ್ಬರೂ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ.