ಭಾರತದಲ್ಲಿ ಸಿನಿಮಾ ನಟ-ನಟಿಯರನ್ನು ದೇವರ ರೀತಿ ಕೆಲ ಅಭಿಮಾನಿಗಳು ಬಿಂಬಿಸಿದ್ದಾರೆ. ನೆಚ್ಚಿನ ನಟ-ನಟಿಯರ ಜೊತೆ ಒಂದು ಫೋಟೋಗಾಗಿ ಏನೆಲ್ಲಾ ಸರ್ಕಸ್ ಮಾಡ್ತಾರೆ ಅಂತ ಎಲ್ಲರೂ ನೋಡಿದ್ದೀವಿ.
2/ 9
ಇನ್ನೂ ಕೆಲವರು ಅಭಿಮಾನದಿಂದ ತಮ್ಮ ಮಕ್ಕಳಿಗೆ ಅವರ ಹೆಸರು ಇಡುವುದನ್ನೂ ನೋಡಿದ್ದೇವೆ. ತಮ್ಮ ನೆಚ್ಚಿನ ನಟ ಅಥವಾ ನಟಿಯರ ಹೆಸರನ್ನು ಅಭಿಮಾನಿಗಳು ಅಚ್ಚೆ ಹಾಕಿಸಿಕೊಳ್ಳುತ್ತಾರೆ.
3/ 9
ಆದರೆ ಇಲ್ಲಿ ಮಹಿಳಾ ಅಭಿಮಾನಿಯೊಬ್ಬರು ಇಲ್ಲಿಯವರೆಗೂ ಯಾವ ಅಭಿಮಾನಿಯೂ ಮಾಡಿದಂತಹ ದೊಡ್ಡ ಕೆಲಸವನ್ನು ಮಾಡಿದ್ದಾರೆ. ಇಂತಹ ದೊಡ್ಡ ಕೆಲಸವನ್ನು ಮಾಡಿ ತಾನು ಮಾತ್ರ ಸಾವನ್ನಪ್ಪಿದ್ದರು.
4/ 9
ಮುಂಬೈನಲ್ಲಿ ಇರುವ ಮಲಬಾರಿನ ನಿವಾಸಿ ನಿಶಾ ಪಾಟೀಲ್ ಎನ್ನುವವರು ತಾನು ಸಾಯುವದಕ್ಕೂ ಮುನ್ನ ತನ್ನ 73 ಕೋಟಿ ಆಸ್ತಿಯ್ನು ತನ್ನ ನೆಚ್ಚಿನ ನಟನ ಹೆಸರಿಗೆ ಬರೆದು ಸಾವನ್ನಪ್ಪಿದ್ದರು.
5/ 9
ಕೆಜಿಎಫ್ನ ಅಧೀರ, ಬಾಲಿವುಡ್ ಖ್ಯಾತ ನಟ ಸಂಜಯ್ ದತ್(Bollywood actor Sanjay Datt) ಅಂದ್ರೆ ನಿಶಾ ಪಾಟೀಲ್ಗೆ ಅದೇನೋ ಪ್ರೀತಿ, ಅಭಿಮಾನವಿತ್ತು. ಆದ್ದರಿಂದ ತಾನು ಸಾಯುವುದಕ್ಕೂ ಮೊದಲು ತನ್ನ ನೆಚ್ಚಿನ ನಟನ ಹೆಸರಿನಲ್ಲಿ ಆಸ್ತಿ ಬರೆದು ಸತ್ತಿದ್ದರು.
6/ 9
ನಿಶಾ ಪಾಟೀಲ್ ಎನ್ನುವ ಅಭಿಮಾನಿಯೊಬ್ಬರು ತಾನು ಸಾಯುವುದಕ್ಕೂ ಮೊದಲು ತಮ್ಮೆಲ್ಲ ಆಸ್ತಿ ಹಣ ಬ್ಯಾಂಕ್ ನಲ್ಲಿ ಇರುವಂತಹ ಒಡವೆ ಎಲ್ಲವನ್ನು ಬಾಲಿವುಡ್ ನಟ ಸಂಜಯ್ ದತ್ ರವರ ಹೆಸರಿಗೆ ಬರೆದು ಪ್ರಾಣಬಿಟ್ಟಿದ್ದರು.
7/ 9
ನಿಶಾ ಪಾಟೀಲ್ ತನ್ನ ಸಹೋದರರ ಜೊತೆ ವಾಸವಾಗಿದ್ದರು. ಇವರ ಮನೆಯ ಬೆಲೆ ಸುಮಾರು 10 ಕೋಟಿ ರೂಪಾಯಿ. ನಿಶಾ ಪಾಟೀಲ್ ರವರ ಒಟ್ಟು ಆಸ್ತಿ ಸುಮಾರು 73 ಕೋಟಿ ರೂಪಾಯಿಯಾಗಿತ್ತು.
8/ 9
ಇದು ಈಗ ನಡೆದಿದ್ದಲ್ಲ 2018ರಲ್ಲಿ ಸಂಜಯ್ ದತ್ ಹೆಸರಿಗೆ ಆಸ್ತಿ ಬರೆದು ಅಭಿಮಾನಿ ಸಾವನ್ನಪ್ಪಿದ್ದರು. ಆಕೆಯ ಅಭಿಮಾನಕ್ಕೆ ಮನಸೋತಿದ್ದ ಸಂಜಯ್ ದತ್ ಕೊನೆಗೆ ನಿಶಾ ಪಾಟೀಲ್ ಮಕ್ಕಳಿಗೆ ಹಾಗೂ ಸಹೋದರರಿಗೆ ಆಸ್ತಿಯನ್ನು ಹಿಂದಿರುಗಿಸಿದ್ದರು.
9/ 9
ಬ್ಯಾಂಕ್ ಲಾಕರ್ ನಲ್ಲೂ ಕೂಡ ನಿಶಾ ಪಾಟೀಲ್ ಬೆಲೆ ಬಾಳುವ ಆಭರಣಗಳನ್ನು ಇಟ್ಟಿದ್ದರು ಆಭರಣಗಳನ್ನು ಕೂಡ ಸಂಜಯ್ ದತ್ ಅವರ ಕುಟುಂಬಕ್ಕೆ ಹಿಂತಿರುಗಿಸಿದ್ದರು. ಈ ವಿಚಾರ ಇವಾಗಾ ಯಾಕೆ ಅಂದ್ರೆ ಈಗೆಲ್ಲಾ ಅಭಿಮಾನದ ಹೆಸರಿನಲ್ಲಿ ಗಲಾಟೆಗಳೇ ಹೆಚ್ಚು. ಇದನ್ನು ನೋಡಿ ಅಭಿಮಾನ ಅಂದ್ರೆ ಏನು ಅಂತ ಎಲ್ಲರೂ ತಿಳಿದುಕೊಳ್ಳಬೇಕು.