ಬ್ಯಾಂಕ್ ಖಾತೆ ತೆರೆಯುವ ಸಮಯದಲ್ಲಿ ನಾಮಿನಿಯ ಹೆಸರನ್ನು ನೀಡಬೇಕು. ಫಾರ್ಮ್ನಲ್ಲಿ ಇದಕ್ಕೆ ಸ್ವತಃ ಸ್ಥಳವನ್ನು ಇರಲಿದ್ದು, ನಾಮಿನಿಯ ಹೆಸರನ್ನು ಅಲ್ಲಿ ಬರೆಯಬೇಕು. ಇದು ಖಾತೆ ತೆರೆಯುವಾಗ ಮುಖ್ಯವಾದ ಪ್ರಕ್ರಿಯೆಯಾಗಿರುತ್ತದೆ. ಖಾತೆದಾರನ ಮರಣದ ಸಂದರ್ಭದಲ್ಲಿ, ಠೇವಣಿ ಮಾಡಿದ ಎಲ್ಲಾ ಹಣವನ್ನು ನಾಮಿನಿ ಪಡೆಯುತ್ತಾನೆ. ಕೆಲವರಲ್ಲಿ ನಾಮಿನಿ ಮಾಡದಿದ್ದರೆ, ಖಾತೆಯಲ್ಲಿರುವ ಎಲ್ಲಾ ಹಣವನ್ನು ಬ್ಯಾಂಕ್ ತನ್ನಲ್ಲೇ ಇಟ್ಟುಕೊಳ್ಳಬಹುದಾ ? ಎಂಬ ಪ್ರಶ್ನೆ ಮೂಡಿರುತ್ತದೆ. ಅದಕ್ಕೆ ಉತ್ತರ ಇಲ್ಲಿದೆ.
ಖಾತೆದಾರೆ ಯಾವುದೇ ನಾಮಿನಿ ಮಾಡದಿದ್ದರೆ ಏನಾಗುತ್ತದೆ?: ಖಾತೆದಾರನು ನಾಮಿನಿಯನ್ನು ನಮೂದಿಸದಿದ್ದರೆ, ಖಾತೆಯಲ್ಲಿನ ಹಣ ಅಥವಾ ಹೂಡಿಕೆಯು ಆತನ ಉತ್ತರಾಧಿಕಾರಿಗೆ ಹೋಗುತ್ತದೆ. ಆದರೆ ಈ ಹಣವನ್ನು ಪಡೆಯುವುದು ಅವರಿಗೆ ಅಷ್ಟು ಸುಲಭದ ಕೆಲಸವಲ್ಲ. ಖಾತೆದಾರನ ಮರಣದ ನಂತರ ಖಾತೆಗೆ ಸಂಬಂಧಿಸಿದ ಯಾವುದೇ ಸ್ವತ್ತುಗಳನ್ನು ಪಡೆಯುವುದು ದೀರ್ಘ ಮತ್ತು ಸಂಕೀರ್ಣ ಪ್ರಕ್ರಿಯೆಯಾಗಿರುತ್ತದೆ. ಅಂದರೆ, ಖಾತೆದಾರರ ಕುಟುಂಬಕ್ಕೆ ಅಗತ್ಯವಿರುವ ಸಮಯದಲ್ಲಿ ಈ ಹಣ ಸಿಗುವುದಿಲ್ಲ.
ಖಾತೆದಾರರು ಹೊಂದಿರುವ ಬ್ಯಾಂಕ್ ಖಾತೆಯಲ್ಲಿ ಒಬ್ಬ ವ್ಯಕ್ತಿಯನ್ನು ಮಾತ್ರ ನಾಮನಿರ್ದೇಶನ ಮಾಡಲಾಗುತ್ತದೆ. ಇದು ಪೋಷಕರು, ಒಡಹುಟ್ಟಿದವರು, ಸಂಗಾತಿಗಳು, ಮಕ್ಕಳು ಅಥವಾ ಕುಟುಂಬದ ಬೇರೆ ಸದಸ್ಯರಾಗಿರಬಹುದು. ಒಂದೇ ಹೆಸರಿನ ವಿವಿಧ ಬ್ಯಾಂಕ್ ಖಾತೆಗಳನ್ನು ಹೊಂದಿದ್ದರೆ ಪ್ರತ್ಯೇಕವಾಗಿ ನಾಮಿನಿ ಮಾಡಬಹುದು. ಒಂದೇ ಬ್ಯಾಂಕಿನಲ್ಲಿ ಫಿಕ್ಸೆಡ್ ಡೆಪಾಸಿಟ್ (ಎಫ್‌ಡಿ), ಉಳಿತಾಯ ಮತ್ತು ಆರ್‌ಡಿ ಖಾತೆಗಳಂತಹ ವಿಭಿನ್ನ ಖಾತೆಗಳಿಗೆ ವಿಭಿನ್ನ ನಾಮಿನಿಗಳು ಸಹ ಇರಬಹುದು.