ಕೊರೋನಾದಿಂದಾಗಿ ಬಹುತೇಕ ವಲಯಗಳು ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡಲು ಒಗ್ಗಿಕೊಂಡಿವೆ. ಆದರೂ ಕೊರೋನಾದಲ್ಲಿ ಇತ್ತೀಚಿನ ಇಳಿಕೆಯ ನಂತರ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್), ಇನ್ಫೋಸಿಸ್, ಎಚ್ಸಿಎಲ್ ಮತ್ತು ಇತರ ಐಟಿ ದೈತ್ಯರು ತಮ್ಮ ಉದ್ಯೋಗಿಗಳನ್ನು ವಾಪಸ್ ಕರೆಸಿಕೊಳ್ಳಲು ಯೋಜಿಸುತ್ತಿದ್ದಾರೆ. ಅಲ್ಲದೇ ಐಟಿ ಕಂಪನಿಗಳು ಹೈಬ್ರಿಡ್ ಮಾದರಿಯ ಕೆಲಸವನ್ನು ಆಯ್ಕೆ ಮಾಡಲು ಬಯಸುತ್ತಿವೆ. (ಸಾಂಕೇತಿಕ ಚಿತ್ರ)
ಐಟಿ ಕಂಪನಿಗಳು '25x25 ಮಾದರಿ'ಯನ್ನು ಅಳವಡಿಸಿಕೊಳ್ಳಲು ಉದ್ಯೋಗಿಗಳಿಗೆ ಸಾಂದರ್ಭಿಕ ಕಾರ್ಯಾಚರಣಾ ವಲಯಗಳು (OOZ) ಮತ್ತು ಹಾಟ್ ಡೆಸ್ಕ್ ಸ್ಥಾಪಿಸುತ್ತಿವೆ ಎಂದು TCS ಹೇಳಿದೆ. ಈ ಮಾದರಿಯ ಮೂಲಕ ತಮ್ಮ ಶೇಕಡಾ 25 ಕ್ಕಿಂತ ಹೆಚ್ಚು ಸಮಯವನ್ನು ಕಚೇರಿಯಲ್ಲಿ ಕಳೆಯಬೇಕಾಗಿಲ್ಲ. ಅಥವಾ ಉದ್ಯೋಗಿಗಳು ತಮ್ಮ ಕೆಲಸದ ಸಮಯದ ಶೇಕಡಾ 25ರಷ್ಟು ಭಾಗವನ್ನು ಮಾತ್ರ ಕಚೇರಿಯಲ್ಲಿ ಇದ್ದರೆ ಸಾಕು. (ಸಾಂಕೇತಿಕ ಚಿತ್ರ)
ಮುಂಬರುವ ತಿಂಗಳುಗಳಲ್ಲಿ ನಮ್ಮ ಉದ್ಯೋಗಿಗಳನ್ನು ಮತ್ತೆ ಕಚೇರಿಗೆ ತರಲು ನಾವು ಶ್ರಮಿಸುತ್ತೇವೆ. ನಾವು ಈಗಾಗಲೇ ಕೆಲಸವನ್ನು ಪ್ರಾರಂಭಿಸಿದ್ದೇವೆ. ಹಿರಿಯ ನಿರ್ವಹಣಾ ಮಟ್ಟದ ಅಧಿಕಾರಿಗಳು ನಿಯಮಿತವಾಗಿ ಕಚೇರಿಯಿಂದ ಕೆಲಸ ಮಾಡಲು ಪ್ರಾರಂಭಿಸಿದ್ದಾರೆ" ಎಂದು ಟಿಸಿಎಸ್ ಹೇಳಿದೆ. ಇನ್ಫೋಸಿಸ್, ಕಾಗ್ನಿಜೆಂಟ್ ಮತ್ತು ಎಚ್ಸಿಎಲ್ ಕೂಡ ಹೈಬ್ರಿಡ್ಗೆ ಬದಲಾಗುತ್ತಿವೆ. ನಾವು ಹೈಬ್ರಿಡ್ ಮಾದರಿಯಲ್ಲಿ ಕೆಲಸ ಮಾಡುವುದನ್ನು ಮುಂದುವರಿಸಲು ಯೋಜಿಸುತ್ತಿವೆ. (ಸಾಂಕೇತಿಕ ಚಿತ್ರ)