Money Transfer; ಇದ್ದಕ್ಕಿದ್ದಂತೆ ನಿಮ್ಮ ಖಾತೆಗೆ ಲಕ್ಷ ಲಕ್ಷ ಹಣ ಬಂದ್ರೆ ಏನ್ ಮಾಡಬೇಕು ಗೊತ್ತಾ?
ಕೆಲವು ಸಾರಿ ಹಣ ವರ್ಗಾವಣೆ (Money Transfer) ಮಾಡುವಾಗ ಸಣ್ಣ ತಪ್ಪಿನಿಂದ ಹಣ ಬೇರೆಯವರ ಖಾತೆಗೆ ವರ್ಗಾವಣೆ ಆಗಿರುತ್ತದೆ. ಈ ರೀತಿ ಯಾರದ್ದೋ ಹಣ ನಿಮ್ಮ ಖಾತೆಗೆ (Bank Account) ಬಂದಾಗ ನೀವು ಏನ್ ಮಾಡಬೇಕು ಎಂಬುದರ ಬಗ್ಗೆ ನಾವು ನಿಮಗೆ ಹೇಳುತ್ತಿದ್ದೇವೆ.
ಈ ರೀತಿಯಾಗಿ ಬಂದ ಹಣವನ್ನು ಖರ್ಚು ಮಾಡಬೇಡಿ. ನಿಮ್ಮ ಖಾತೆಗೆ ಈ ರೀತಿಯಾಗಿ ಇದ್ದಕ್ಕಿದ್ದಂತೆ ಹಣ ಬಂದರೆ ಮೊದಲು ಬಳಸದೇ ಹಾಗೆ ತೆಗೆದಿಡಿ. ಈ ಹಣ ನಿಮ್ಮದಲ್ಲ ಅನ್ನೋದು ನಿಮಗೆ ತಿಳಿದಿರಬೇಕು. (ಸಾಂದರ್ಭಿಕ ಚಿತ್ರ)
2/ 7
ನಿಮ್ಮ ಖಾತೆಗೆ ಬಂದ ಹಣ ಕಾನೂನುಬದ್ಧವಾಗಿ ನಿಮ್ಮದೇ ಆಗಿರಬಹುದು. ಆದರೆ ನೈತಿಕವಾಗಿ ನಿಮ್ಮದಾಗಿರಲ್ಲ. ಅನೇಕ ಬಾರಿ ತಾಂತ್ರಿಕ ದೋಷ ಅಥವಾ ಸಿಬ್ಬಂದಿಯ ತಪ್ಪಿನಿಂದ ಆ ಹಣ ನಿಮ್ಮ ಖಾತೆಗೆ ವರ್ಗಾವಣೆ ಆಗಿರುವ ಸಾಧ್ಯತೆಗಳಿವೆ. ಆದ್ದರಿಂದ ನಿಮ್ಮ ಖಾತೆಯಿಂದ ಹಣ ಪಡೆಯಲು ಬ್ಯಾಂಕ್ ಮುಂದಾಗುತ್ತದೆ. (ಸಾಂದರ್ಭಿಕ ಚಿತ್ರ)
3/ 7
ಒಂದು ವೇಳೆ ಹಣ ಬಂದ ಖುಷಿಯಲ್ಲಿ ನೀವು ಖರ್ಚು ಮಾಡಿದ್ರೆ, ಬ್ಯಾಂಕ್ ಕೇಳಿದಾಗ ಮರು ಪಾವತಿಸಬೇಕಾಗುತ್ತದೆ. ಒಂದೇ ಸಮಯದಲ್ಲಿ ಇಷ್ಟೊಂದು ಹಣ ನಿಮಗೆ ಹಿಂದಿರುಗಿಸಲು ಕಷ್ಟವಾಗಬಹುದು. (ಸಾಂದರ್ಭಿಕ ಚಿತ್ರ)
4/ 7
ನಿಮಗೆ ಗೊತ್ತಿಲ್ಲದೇ ಹಣ ಬಂದ್ರೆ ಮೊದಲು ನಿಮ್ಮ ಬ್ಯಾಂಕ್ ಶಾಖೆಗೆ ಮಾಹಿತಿ ನೀಡಿ. ನಿಮ್ಮ ಬ್ಯಾಂಕ್ ಖಾತೆಗೆ ಹಣ ಹೇಗೆ ಮತ್ತು ಯಾರಿಂದ ಬಂದಿದೆ ಎಂಬುದರ ಮಾಹಿತಿ ಪಡೆದುಕೊಳ್ಳಿ. (ಸಾಂದರ್ಭಿಕ ಚಿತ್ರ)
5/ 7
ಈ ರೀತಿ ಬ್ಯಾಂಕಿಗೆ ಹೋಗಿ ಮಾಹಿತಿ ಪಡೆದುಕೊಳ್ಳುವದರಿಂದ ಈ ಮೊತ್ತವು ಕೆಲವು ಅಕ್ರಮ ವಹಿವಾಟಿಗೆ ಸಂಬಂಧಿಸಿದೆ ಎಂದು ನಿಮಗೆ ತಿಳಿದಿದೆಯೇ? ಇದು ಕಾನೂನು ತೊಂದರೆಗಳಲ್ಲಿ ಸಿಲುಕಿಕೊಳ್ಳುವುದರಿಂದ ನಿಮ್ಮನ್ನು ಉಳಿಸುತ್ತದೆ. (ಸಾಂದರ್ಭಿಕ ಚಿತ್ರ)
6/ 7
ಈ ಹಿಂದೆ ಹಲವು ಪ್ರಕರಣಗಳು ವರದಿ ಆಗಿವೆ. ಬ್ಯಾಂಕ್ ಎಲ್ಲ ಸಮಯದಲ್ಲಿ ಖಾತೆಯಿಂದ ಮಾಹಿತಿ ನೀಡಿ ಹಣ ಹಿಂಪಡೆದುಕೊಂಡಿದೆ. (ಸಾಂದರ್ಭಿಕ ಚಿತ್ರ)
7/ 7
ಸದ್ಯ ಆನ್ ಲೈನ್ ನಲ್ಲಿಯ ಹಣ ವರ್ಗಾವಣೆ ಮಾಡಲಾಗುತ್ತದೆ. ಕೆಲವೊಮ್ಮೆ ಮೊಬೈಲ್ ಸಂಖ್ಯೆ ತಪ್ಪಾಗಿ ನಮೂದು ಮಾಡುವುದರಿಂದ ಹಣ ಬೇರೆಯವರ ಖಾತೆಗೆ ವರ್ಗಾವಣೆ ಆಗಿರುತ್ತದೆ. (ಸಾಂದರ್ಭಿಕ ಚಿತ್ರ)