ಗೃಹ ಸಾಲಗಳ ಮೇಲಿನ ತೆರಿಗೆ ಪ್ರಯೋಜನಗಳ ಸಹಾಯದಿಂದ, ತೆರಿಗೆದಾರರು ಪ್ರತಿ ಆರ್ಥಿಕತೆ ವರ್ಷದಲ್ಲಿ ರೂ.3.5 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಉಳಿಸಬಹುದು. ಭಾರತದಲ್ಲಿ ಮೊದಲ ಬಾರಿಗೆ ಮನೆ ಖರೀದಿ ಮಾಡುವವರಿಗೆ ಲಭ್ಯವಿರುವ ಹೋಮ್ ಲೋನ್ ತೆರಿಗೆ ಪ್ರಯೋಜನಗಳ ಕುರಿತು ನಾವಿಂದು ಈ ಲೇಖನದಲ್ಲಿ ತಿಳಿದುಕೊಳ್ಳೋಣ. ಅದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ. ಮುಂದೆ ಓದಿ.
ಮೊದಲ ಬಾರಿಗೆ ಮನೆ ಖರೀದಿ ಮಾಡುವವರಿಗೆ ಮಾತ್ರ ಲಭ್ಯವಿರುವ ಗೃಹ ಸಾಲದ ತೆರಿಗೆ ವಿನಾಯಿತಿ ಪ್ರಯೋಜನಗಳು ಹೀಗಿವೆ: ಈಗ ಮೊದಲ ಬಾರಿಗೆ ಮನೆ ಖರೀದಿ ಮಾಡುವವರಿಗೆ ಮಾತ್ರ ಲಭ್ಯವಿರುವ ಗೃಹ ಸಾಲದ ತೆರಿಗೆ ವಿನಾಯಿತಿ ಪ್ರಯೋಜನಗಳ ಬಗ್ಗೆ ತಿಳಿಯೋಣ. ಬನ್ನಿ. ಸೆಕ್ಷನ್ 80EE ಮತ್ತು ಸೆಕ್ಷನ್ 80 EEA ಈ ಎರಡರಲ್ಲೂ ಸಹ ಮೊದಲ ಬಾರಿಗೆ ಮನೆ ಖರೀದಿ ಮಾಡುವವರಿಗೆ ಲಭ್ಯವಿರುವ ಗೃಹ ಸಾಲದ ತೆರಿಗೆ ವಿನಾಯಿತಿ ಪ್ರಯೋಜನಗಳನ್ನು ಪಡೆಯಬಹುದಾಗಿದೆ.