Best Mileage Bikes: 70 ಸಾವಿರದೊಳಗೆ ಹೆಚ್ಚು ಮೈಲೇಜ್ ನೀಡುವ ಟಾಪ್ 7 ಬೈಕ್ಗಳಿವು!
Mileage Bikes: ನೀವು ಹೆಚ್ಚಿನ ಮೈಲೇಜ್ ಕೊಡುವ ಬೈಕ್ಗಳನ್ನು ಖರೀದಿಸಲು ಪ್ಲ್ಯಾನ್ ಮಾಡಿಕೊಂಡಿದ್ದೀರಾ? ಹಾಗಿದ್ದರೆ ಇಲ್ಲಿ ನಾವು ಟಾಪ್ 7 ಬೆಸ್ಟ್ ಮೈಲೇಜ್ ನೀಡುವ ಬೈಕ್ಗಳ ಬಗ್ಗೆ ಮಾಹಿತಿ ನೀಡಿದ್ದೇವೆ ನೋಡಿ.
Top Mileage Bikes: ನೀವು ಹೊಸ ಬೈಕ್ ಖರೀದಿಸಲು ಪ್ಲ್ಯಾನ್ ಮಾಡಿಕೊಂಡಿದ್ದೀರಾ? ಹಾಗಿದ್ದರೆ ಉತ್ತಮ ಮೈಲೇಜ್ ನೀಡುವ ದ್ವಿಚಕ್ರ ವಾಹನಗಳ ಬಗ್ಗೆ ಇಲ್ಲಿದೆ ಮಾಹಿತಿ ನೋಡಿ. 70 ಸಾವಿರದೊಳಗೆ ಯಾವ ಬೈಕ್ಗಳು ಹೆಚ್ಚು ಮೈಲೇಜ್ ನೀಡುತ್ತಿವೆ ಎಂಬುದನ್ನು ಈಗ ತಿಳಿದುಕೊಳ್ಳೋಣ.
2/ 9
ಬಜಾಜ್ CT 110X ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ಈ ಬೈಕ್ನ ಎಕ್ಸ್ ಶೋ ರೂಂ ಆರಂಭಿಕ ಬೆಲೆ ರೂ. 59,104 ರಿಂದ. ಇದು 115 ಸಿಸಿ ಎಂಜಿನ್ ಹೊಂದಿದೆ. ಇದು ಪ್ರತಿ ಲೀಟರ್ ಗೆ 104 ಕಿಲೋಮೀಟರ್ ಮೈಲೇಜ್ ನೀಡಬಲ್ಲದು.
3/ 9
ಹೀರೋ ಹೆಚ್ಎಫ್ ಡಿಲಕ್ಸ್ ಬೈಕ್ ಕೂಡ ಇದೆ. ಇದು ಮತ್ತೊಂದು ಕೈಗೆಟುಕುವ ಬೈಕ್. ಇದು ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ಇದರ ಎಕ್ಸ್ ಶೋ ರೂಂ ಬೆಲೆ ರೂ. 59,990 ರಿಂದ ಶುರುವಾಗುತ್ತೆ. ಇದು 97.2 ಸಿಸಿ ಎಂಜಿನ್ ಅನ್ನು ಸಹ ಹೊಂದಿದೆ. ಈ ಬೈಕಿನ ಮೈಲೇಜ್ 83 ಕಿ.ಮೀ. ಸಂಚರಿಸುತ್ತೆ.
4/ 9
ಹೀರೋ HF 100 ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ಈ ಬೈಕಿನ ಎಕ್ಸ್ ಶೋ ರೂಂ ಬೆಲೆ ರೂ. 56,968. ಇದು ಕೇವಲ ಒಂದು ರೂಪಾಂತರದಲ್ಲಿ ಲಭ್ಯವಿದೆ. ಇದು 97.2 ಸಿಸಿ ಎಂಜಿನ್ ಹೊಂದಿದೆ. ಇದರ ಮೈಲೇಜ್ 83 kmpl.
5/ 9
ಹೋಂಡಾ ಸಿಡಿ 110 ಡ್ರೀಮ್ ಬೈಕ್ನ ಎಕ್ಸ್ ಶೋ ರೂಂ ಬೆಲೆ ರೂ. 71,133. ಈ ಬೈಕ್ 109 ಸಿಸಿ ಎಂಜಿನ್ ಹೊಂದಿದೆ. ಪ್ರತಿ ಲೀಟರ್ ಗೆ 74 ಕಿ.ಮೀ ಮೈಲೇಜ್ ನೀಡುವ ಸಾಧ್ಯತೆ ಇದೆ.
6/ 9
ಬಜಾಜ್ ಪ್ಲಾಟಿನಾ ಅತ್ಯುತ್ತಮ ಮೈಲೇಜ್ ಬೈಕ್ಗಳಲ್ಲಿ ಒಂದಾಗಿದೆ. ಇದು ಕಡಿಮೆ ತೂಕದ, ದೀರ್ಘ ಮೈಲೇಜ್ ಬೈಕ್. ಇದರ ಎಕ್ಸ್ ಶೋ ರೂಂ ಬೆಲೆ ರೂ. 65,856 ರೂ.ನಿಂದ ಪ್ರಾರಂಭವಾಗುತ್ತದೆ. ಇದು ಪ್ರತಿ ಲೀಟರ್ ಗೆ 90 ಕಿಲೋಮೀಟರ್ ಮೈಲೇಜ್ ನೀಡಬಲ್ಲದು. ಇದು 102 ಸಿಸಿ ಎಂಜಿನ್ ಹೊಂದಿದೆ.
7/ 9
ಟಿವಿಎಸ್ ಸ್ಪೋರ್ಟ್ ಬೈಕ್ ಕೂಡ ಇದೆ. ಇದರ ಎಕ್ಸ್ ಶೋ ರೂಂ ಬೆಲೆ ರೂ. 63,990 ರಿಂದ ಶುರುವಾಗುತ್ತೆ. ಇದು 109 ಸಿಸಿ ಎಂಜಿನ್ ಹೊಂದಿದೆ. ಈ ಬೈಕ್ ಪ್ರತಿ ಲೀಟರ್ ಗೆ 75 ಕಿಲೋಮೀಟರ್ ಮೈಲೇಜ್ ನೀಡಬಲ್ಲದು.
8/ 9
ಟಿವಿಎಸ್ ರೇಡಿಯನ್ ಬೈಕ್ ಕೂಡ ಸೂಪರ್ ಮೈಲೇಜ್ ನೀಡುತ್ತಿದೆ. ಇದು ಮೂರು ರೂಪಾಂತರಗಳಲ್ಲಿ ಲಭ್ಯವಿದೆ. ಇದರ ಎಕ್ಸ್ ಶೋ ರೂಂ ಆರಂಭಿಕ ಬೆಲೆ ರೂ. 59,925. ಇದು 109 ಸಿಸಿ ಎಂಜಿನ್ ಹೊಂದಿದೆ. ಈ ಬೈಕ್ ಪ್ರತಿ ಲೀಟರ್ ಗೆ 74 ಕಿಲೋಮೀಟರ್ ಮೈಲೇಜ್ ನೀಡಬಲ್ಲದು.
9/ 9
ಈ ಬೈಕ್ಗಳ ಆನ್-ರೋಡ್ ಮೈಲೇಜ್ ವಿಭಿನ್ನವಾಗಿರಬಹುದು. ಹಾಗಾಗಿ ಬೈಕ್ ಖರೀದಿದಾರರು ಈಗಾಗಲೇ ಇಂತಹ ಬೈಕ್ ಗಳನ್ನು ಖರೀದಿಸಿರುವವರಿಂದ ಫೀಡ್ ಬ್ಯಾಕ್ ಪಡೆಯುವುದು ಉತ್ತಮ.