Electric Bikes: ಟಾಪ್​ 5 ಎಲೆಕ್ಟ್ರಿಕ್​ ಬೈಕ್​ಗಳಿವು! ಒಂದೇ ಚಾರ್ಜ್​ನಲ್ಲಿ 300 ಕಿ.ಮೀ ಹೋಗ್ಬಹುದು

Top 5 Electric Bikes: ಪೆಟ್ರೋಲ್ ಬೆಲೆ ಹೆಚ್ಚಾದಂತೆ ಹೆಚ್ಚಿನ ಜನರು ಎಲೆಕ್ಟ್ರಿಕ್​ ಬೈಕ್​, ಸ್ಕೂಟರ್​ಗಳನ್ನು ಖರೀದಿ ಮಾಡ್ತಾ ಇದ್ದಾರೆ. ಆದರೆ ಕೆಲವರಿಗೆ ಬೆಸ್ಟ್​ ಎಲೆಕ್ಟ್ರಿಕ್​ ಬೈಕ್​​ಗಳು ಯಾವುದು ಎಂದು ತಿಳಿದಿರುವುದಿಲ್ಲ. ಹಾಗಿದ್ರೆ ಮಾರುಕಟ್ಟೆಯಲ್ಲಿರುವ ಟಾಪ್​ 5 ಎಲೆಕ್ಟ್ರಿಕ್​ ಬೈಕ್​ಗಳು ಯಾವುದು ಎಂಬುದನ್ನು ಈ ಲೇಖನದಲ್ಲಿ ತಿಳಿಯಿರಿ.

First published:

  • 111

    Electric Bikes: ಟಾಪ್​ 5 ಎಲೆಕ್ಟ್ರಿಕ್​ ಬೈಕ್​ಗಳಿವು! ಒಂದೇ ಚಾರ್ಜ್​ನಲ್ಲಿ 300 ಕಿ.ಮೀ ಹೋಗ್ಬಹುದು

    ನೀವು ಹೊಸ ಎಲೆಕ್ಟ್ರಿಕ್ ಬೈಕ್ ಖರೀದಿಸಲು ಯೋಚಿಸುತ್ತಿದ್ದೀರಾ? ಹಾಗಿದ್ರೆ ಒಳ್ಳೆಯ ಸುದ್ದಿ. ಪ್ರಸ್ತುತ, ಮಾರುಕಟ್ಟೆಯಲ್ಲಿ ವಿವಿಧ ಮಾದರಿಯಲ್ಲಿ ಎಲೆಕ್ಟ್ರಿಕ್​​ ಬೈಕ್​ಗಳು ಲಭ್ಯವಿದೆ. ಈಗ ಟಾಪ್ 5 ಎಲೆಕ್ಟ್ರಿಕ್ ಬೈಕ್‌ಗಳು ಯಾವುವು, ಅವುಗಳ ಬೆಲೆ ಹೇಗಿದೆ ಮತ್ತು ಅವುಗಳ ಫೀಚರ್ಸ್​ ಹೇಗಿದೆ ಅನ್ನೋದನ್ನು ತಿಳಿಯೋಣ.

    MORE
    GALLERIES

  • 211

    Electric Bikes: ಟಾಪ್​ 5 ಎಲೆಕ್ಟ್ರಿಕ್​ ಬೈಕ್​ಗಳಿವು! ಒಂದೇ ಚಾರ್ಜ್​ನಲ್ಲಿ 300 ಕಿ.ಮೀ ಹೋಗ್ಬಹುದು

    Ultraviolette​ F77 ಎಲೆಕ್ಟ್ರಿಕ್ ಬೈಕ್​. ಇದು ಅದ್ಭುತ ವಿನ್ಯಾಸವನ್ನು ಹೊಂದಿದೆ. ಈ ಬೈಕ್ ತನ್ನ ಸೂಪರ್ ವಿನ್ಯಾಸದಿಂದ ಎಲ್ಲರನ್ನೂ ಆಕರ್ಷಿಸುತ್ತಿದೆ. ಇದರ ದರ ರೂ. 3.8 ಲಕ್ಷದಿಂದ ಆರಂಭವಾಗುತ್ತದೆ. ಈ ಬೈಕ್​ ಅನ್ನು ಒಂದು ಬಾರಿ ಚಾರ್ಜ್ ಮಾಡಿದರೆ 300 ಕಿಲೋಮೀಟರ್​ವರೆಗೆ ಪ್ರಯಾಣಿಸಬಹುದಾಗಿದೆ.

    MORE
    GALLERIES

  • 311

    Electric Bikes: ಟಾಪ್​ 5 ಎಲೆಕ್ಟ್ರಿಕ್​ ಬೈಕ್​ಗಳಿವು! ಒಂದೇ ಚಾರ್ಜ್​ನಲ್ಲಿ 300 ಕಿ.ಮೀ ಹೋಗ್ಬಹುದು

    ಈ ಬೈಕ್​ನ ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು 5 ಗಂಟೆ ತೆಗೆದುಕೊಳ್ಳುತ್ತದೆ. ಬೈಕ್‌ನ ಗರಿಷ್ಠ ವೇಗ ಗಂಟೆಗೆ 152 ಕಿ.ಮೀ. ಕೇವಲ 2.9 ಸೆಕೆಂಡುಗಳಲ್ಲಿ 0 ರಿಂದ 60 kmph ವೇಗವನ್ನು ಪಡೆಯುತ್ತದೆ. ಇದು ಕ್ರ್ಯಾಶ್ ಡಿಟೆಕ್ಷನ್, ಜಿಯೋ-ಫೆನ್ಸಿಂಗ್ ಮತ್ತು ನ್ಯಾವಿಗೇಶನ್‌ನಂತಹ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

    MORE
    GALLERIES

  • 411

    Electric Bikes: ಟಾಪ್​ 5 ಎಲೆಕ್ಟ್ರಿಕ್​ ಬೈಕ್​ಗಳಿವು! ಒಂದೇ ಚಾರ್ಜ್​ನಲ್ಲಿ 300 ಕಿ.ಮೀ ಹೋಗ್ಬಹುದು

    ಆಕ್ಸೋ ಹೋಪ್ ಎಲೆಕ್ಟ್ರಿಕ್ ಬೈಕ್: ಈ ಎಲೆಕ್ಟ್ರಿಕ್ ಬೈಕ್ ಅನ್ನು ಒಂದು ಬಾರಿ ಚಾರ್ಜ್ ಮಾಡಿದರೆ 150 ಕಿಲೋಮೀಟರ್ ಪ್ರಯಾಣಿಸಬಹುದು ಎಂದು ಕಂಪನಿ ಹೇಳಿಕೊಂಡಿದೆ. ಪ್ರತಿ ಕಿಲೋಮೀಟರ್‌ಗೆ 25 ಪೈಸೆ ವೆಚ್ಚವಾಗುತ್ತದೆ. ಇದಲ್ಲದೆ, ಈ ಎಲೆಕ್ಟ್ರಿಕ್ ಬೈಕ್ ಗಂಟೆಗೆ 95 ಕಿಲೋಮೀಟರ್ ವೇಗವನ್ನು ಹೊಂದಿದೆ.

    MORE
    GALLERIES

  • 511

    Electric Bikes: ಟಾಪ್​ 5 ಎಲೆಕ್ಟ್ರಿಕ್​ ಬೈಕ್​ಗಳಿವು! ಒಂದೇ ಚಾರ್ಜ್​ನಲ್ಲಿ 300 ಕಿ.ಮೀ ಹೋಗ್ಬಹುದು

    ಇನ್ನು ಈ ಬೈಕಿನ ಬೆಲೆಯ ಬಗ್ಗೆ ಹೇಳುವುದಾದರೆ, ಇದರ ಬೆಲೆ ರೂ. 1,39,999 ರಿಂದ ಪ್ರಾರಂಭವಾಗುತ್ತದೆ.

    MORE
    GALLERIES

  • 611

    Electric Bikes: ಟಾಪ್​ 5 ಎಲೆಕ್ಟ್ರಿಕ್​ ಬೈಕ್​ಗಳಿವು! ಒಂದೇ ಚಾರ್ಜ್​ನಲ್ಲಿ 300 ಕಿ.ಮೀ ಹೋಗ್ಬಹುದು

    Revolt RV 400 ಬೈಕ್: ರಿವೋಲ್ಟ್​ ಆರ್​ವಿ 400 ಬೈಕ್​ನ ದರ ರೂ. 1.24 ಲಕ್ಷದಿಂದ ಪ್ರಾರಂಭವಾಗುತ್ತದೆ. ಒಂದು ಬಾರಿ ಚಾರ್ಜ್ ಮಾಡಿದರೆ ಈ ಬೈಕ್ ಅನ್ನು 150 ಕಿಲೋಮೀಟರ್ ವರೆಗೆ ಪ್ರಯಾಣಿಸಬಹುದು. ಬೈಕಿನ ಗರಿಷ್ಠ ವೇಗ ಗಂಟೆಗೆ 85 ಕಿಲೋಮೀಟರ್. ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು 4.5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ.

    MORE
    GALLERIES

  • 711

    Electric Bikes: ಟಾಪ್​ 5 ಎಲೆಕ್ಟ್ರಿಕ್​ ಬೈಕ್​ಗಳಿವು! ಒಂದೇ ಚಾರ್ಜ್​ನಲ್ಲಿ 300 ಕಿ.ಮೀ ಹೋಗ್ಬಹುದು

    ಈ ಎಲೆಕ್ಟ್ರಿಕ್ ಬೈಕ್ ಸ್ವ್ಯಾಪ್ ಮಾಡಬಹುದಾದ ಬ್ಯಾಟರಿ, ಡಿಸ್ಕ್ ಬ್ರೇಕ್‌ಗಳು, ಸಂಪೂರ್ಣ ಡಿಜಿಟಲ್ ಎಲ್‌ಸಿಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್, 4 ಜಿ ಕನೆಕ್ಟಿವಿಟಿ, ಜಿಯೋ ಫೆನ್ಸಿಂಗ್​ನಂತಹ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

    MORE
    GALLERIES

  • 811

    Electric Bikes: ಟಾಪ್​ 5 ಎಲೆಕ್ಟ್ರಿಕ್​ ಬೈಕ್​ಗಳಿವು! ಒಂದೇ ಚಾರ್ಜ್​ನಲ್ಲಿ 300 ಕಿ.ಮೀ ಹೋಗ್ಬಹುದು

    ಟಾರ್ಕ್ ಕ್ರಾಟೋಸ್ ಆರ್ ಎಲೆಕ್ಟ್ರಿಕ್ ಬೈಕ್ ಟಾಪ್​ 5 ಎಲೆಕ್ಟ್ರಿಕ್​ ಬೈಕ್​ಗಳಲ್ಲಿ ಒಂದಾಗಿದೆ. ಇದರ ಆರಂಭಿಕ ಬೆಲೆ ರೂ. 1.68 ಲಕ್ಷ. ಈ ಬೈಕ್ ಅನ್ನು ಒಂದು ಬಾರಿ ಚಾರ್ಜ್ ಮಾಡಿದರೆ 180 ಕಿಲೋಮೀಟರ್ ವರೆಗೆ ಚಲಿಸಬಹುದು. ಇದರ ಗರಿಷ್ಠ ವೇಗ ಗಂಟೆಗೆ 105 ಕಿಲೋಮೀಟರ್. ಕೇವಲ 3.5 ಸೆಕೆಂಡುಗಳಲ್ಲಿ 0 ರಿಂದ 40 kmph ವೇಗವನ್ನು ಹೆಚ್ಚಿಸುತ್ತದೆ.

    MORE
    GALLERIES

  • 911

    Electric Bikes: ಟಾಪ್​ 5 ಎಲೆಕ್ಟ್ರಿಕ್​ ಬೈಕ್​ಗಳಿವು! ಒಂದೇ ಚಾರ್ಜ್​ನಲ್ಲಿ 300 ಕಿ.ಮೀ ಹೋಗ್ಬಹುದು

    ಈ ಬೈಕಿನ ಬ್ಯಾಟರಿಯನ್ನು ಶೇಕಡಾ 0 ರಿಂದ 80 ರಷ್ಟು ಚಾರ್ಜ್ ಮಾಡಲು ಕೇವಲ 60 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಈ ಬೈಕ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಮಲ್ಟಿ ಡ್ರೈವ್ ಮೋಡ್, ರಿವರ್ಸ್ ಮೋಡ್, ಮೊಬೈಲ್ ಕನೆಕ್ಟಿವಿಟಿ, ಆ್ಯಪ್ ನೇವಿಗೇಷನ್, ಯುಎಸ್‌ಬಿ ಚಾರ್ಜಿಂಗ್ ಮುಂತಾದ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

    MORE
    GALLERIES

  • 1011

    Electric Bikes: ಟಾಪ್​ 5 ಎಲೆಕ್ಟ್ರಿಕ್​ ಬೈಕ್​ಗಳಿವು! ಒಂದೇ ಚಾರ್ಜ್​ನಲ್ಲಿ 300 ಕಿ.ಮೀ ಹೋಗ್ಬಹುದು

    ಒಬೆನ್ ರೋರ್ ಎಲೆಕ್ಟ್ರಿಕ್ ಬೈಕ್: ಒಬೆನ ರೋರ್​ ಬೈಕ್​ನ ದರ ರೂ. 1.03 ಲಕ್ಷ. ಇದನ್ನು ಒಂದು ಬಾರಿ ಚಾರ್ಜ್ ಮಾಡಿದರೆ 200 ಕಿಲೋಮೀಟರ್ ದೂರ ಹೋಗಬಹುದು. ಇದರ ಗರಿಷ್ಠ ವೇಗ ಗಂಟೆಗೆ 100 ಕಿಲೋಮೀಟರ್. ಈ ಬೈಕ್ ಕೇವಲ 3 ಸೆಕೆಂಡುಗಳಲ್ಲಿ 0 ರಿಂದ 40 ಕಿ.ಮೀ ವೇಗವನ್ನು ತಲುಪುತ್ತದೆ.

    MORE
    GALLERIES

  • 1111

    Electric Bikes: ಟಾಪ್​ 5 ಎಲೆಕ್ಟ್ರಿಕ್​ ಬೈಕ್​ಗಳಿವು! ಒಂದೇ ಚಾರ್ಜ್​ನಲ್ಲಿ 300 ಕಿ.ಮೀ ಹೋಗ್ಬಹುದು

    ಈ ಬೈಕಿನ ಬ್ಯಾಟರಿ ಕೇವಲ 2 ಗಂಟೆಗಳಲ್ಲಿ ಪೂರ್ಣಗೊಳ್ಳುತ್ತದೆ. ಇದು ರೈಡ್ ವಿವರಗಳು, ಬ್ಯಾಟರಿ ಸ್ಥಿತಿ, ಜಿಯೋ ಫೆನ್ಸಿಂಗ್, ಜಿಯೋ ಟ್ಯಾಗಿಂಗ್, ಬ್ಯಾಟರಿ ಕಳ್ಳತನದ ರಕ್ಷಣೆ, ಚಾರ್ಜಿಂಗ್ ಸ್ಟೇಷನ್ ಲೊಕೇಟರ್ ಮುಂತಾದ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.

    MORE
    GALLERIES