Gold-Silver Price Today: ಚಿನ್ನ ಖರೀದಿಗಿದು ಪರ್ಫೆಕ್ಟ್​ ಟೈಮ್, ಬಂಗಾರ ಬೆಲೆ ಇಳಿಕೆ: ಹೀಗಿದೆ ಇಂದಿನ ದರ

Gold and Silver Price on August 12, 2022: ಕೆಲ ದಿನಗಳಿಂದ ಚಿನ್ನ-ಬೆಳ್ಳಿ ದರಗಳ ಏರಿಳಿತಗಳ ಕಣ್ಣು ಮುಚ್ಚಾಲೆ ಆಟ ಮುಂದುವರೆದೇ ಇದೆ. ನಿನ್ನೆಗೆ ಹೋಲಿಸಿದರೆ ಇಂದು ಆಭರಣ ಕೊಳ್ಳಬಯಸುವವರಿಗೆ ಪರ್ಫೆಕ್ಟ್ ಟೈಮ್ ಆಗಿದೆ, ಏಕೆಂದರೆ ಭಾರತದ ಮಾರುಕಟ್ಟೆಯಲ್ಲಿ ಪ್ರತಿ ಗ್ರಾಂ ಆಭರಣ ಚಿನ್ನದ ಮೇಲೆ ಹದಿನೈದು ರೂ. ಕುಸಿತವಾಗಿದೆ. ಇಂದು ಭಾರತದ ಮಾರುಕಟ್ಟೆಯಲ್ಲಿ ಪ್ರತಿ ಗ್ರಾಂ ಆಭರಣ ಚಿನ್ನದ ಬೆಲೆ ರೂ. 4,800 ಆಗಿದೆ. ಈಗಾಗಲೇ ಭಾರತವು ಚಿನ್ನದ ಮೇಲಿನ ಆಮದು ಸುಂಕ ಹೆಚ್ಚಿಸಿದ್ದು ಮುಂಬರುವ ದಿನಗಳಲ್ಲಿ ಚಿನ್ನ ಮತ್ತೆ ಏರಿಕೆಯಾಗುವ ಸಾಧ್ಯತೆಯನ್ನೂ ಅಲ್ಲಗಳೆಯಲು ಆಗಲ್ಲ.

First published: