Tirupati: ತಿರುಪತಿ ತಿಮ್ಮಪ್ಪನ ದರ್ಶನ ಈಗ ಮತ್ತಷ್ಟು ದುಬಾರಿ, ಇಲ್ಲಿಗೆ ಹೋಗೋ ಮುನ್ನ ಈ ವಿಚಾರ ತಿಳಿದುಕೊಳ್ಳಲೇಬೇಕು!
ಇತ್ತೀಚೆಗೆ ತಿರುಪತಿ ತಿಮ್ಮಪ್ಪನ ದರ್ಶನ ಮಾಡೋದು ಸ್ವಲ್ಪ ದುಬಾರಿಯಾಗಿದೆ ಎಂದರೆ ತಪ್ಪಾಗಲ್ಲ. ಇಷ್ಟು ದಿನ ತಿರುಪತಿಯಲ್ಲಿ ಕಡಿಮೆ ಬೆಲೆಯಲ್ಲಿ ದೊರೆಯುತ್ತಿದ್ದ ಅತಿಥಿ ಗೃಹಗಳು ಮತ್ತು ಕುಟೀರಗಳು ಈಗ ಕಾಸ್ಟ್ಲಿಯಾಗಿದೆ.
Tirupati: ವಿಶ್ವದ ಶ್ರೀಮಂತ ದೇವಸ್ಥಾನ ಎನ್ನುವ ಹೆಗ್ಗಳಿಕೆಗೆ ತಿರುಪತಿಯ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ಪಾತ್ರವಾಗಿದೆ. ತಿರುಪತಿ ದೇಗುಲದ ಸಂಪತ್ತು 2.26 ಲಕ್ಷ ಕೋಟಿ ಎಂಬುದು ಮೊದಲ ಬಾರಿಗೆ ಬಹಿರಂಗವಾಗಿತ್ತು.
2/ 8
ದೇಶದಲ್ಲಿರುವ ವೈಷ್ಣವ ಭಕ್ತರನ್ನು ಅತಿಯಾಗಿ ಆಕರ್ಷಿಸುವ ಈ ದೇವಾಲಯವು, ಪ್ರತಿನಿತ್ಯ ಲಕ್ಷಾಂತರ ಭಕ್ತರನ್ನು ಸ್ವಾಗತಿಸುತ್ತದೆ. ಅವರ ಅನುಕೂಲಕ್ಕಾಗಿ ಪ್ರತಿ ತಿಂಗಳು ಆನ್ಲೈನ್ಲ್ಲಿ ದರ್ಶನಕ್ಕಾಗಿ ಟಿಕೆಟ್ಗಳನ್ನು ಬುಕ್ ಮಾಡಿಕೊಂಡು ಇಲ್ಲಿಗೆ ಭೇಟಿ ನೀಡಬಹುದು.
3/ 8
ಕಳೆದ ವರ್ಷ 2022ರಲ್ಲಿ ಹುಂಡಿಯಲ್ಲಿ 1,450 ಕೋಟಿ ರೂಪಾಯಿ ಸಂಗ್ರಹವಾಗಿದೆ. 2021ರಲ್ಲಿ 833 ಕೋಟಿ ರೂ. ಸಂಗ್ರಹವಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಹುಂಡಿ ಆದಾಯವು ಶೇ. 75ರಷ್ಟು ವೃದ್ಧಿಯಾಗಿದೆ.
4/ 8
2023 ಜನವರಿ ತಿಂಗಳಿನಿಂದ ಫೆಬ್ರವರಿ ತಿಂಗಳವರೆಗಿನ ತಿಮ್ಮಪ್ಪನ ದರ್ಶನಕ್ಕಾಗಿ ಟಿಕೆಟ್ಗಳನ್ನು ಬುಕ್ ಮಾಡಲು ಟಿಟಿಡಿ ಅವಕಾಶ ಮಾಡಿಕೊಟ್ಟಿದೆ.ಜನವರಿ 9 ನೇ ತಾರೀಖಿನಿಂದ ಟಿಕೆಟ್ ಬೆಲೆ 300 ರೂಪಾಯಿಗಳನ್ನು ನಿಗದಿಪಡಿಸಿದೆ.
5/ 8
ಇತ್ತೀಚೆಗೆ ತಿರುಪತಿ ತಿಮ್ಮಪ್ಪನ ದರ್ಶನ ಮಾಡೋದು ಸ್ವಲ್ಪ ದುಬಾರಿಯಾಗಿದೆ ಎಂದರೆ ತಪ್ಪಾಗಲ್ಲ. ಇಷ್ಟು ದಿನ ತಿರುಪತಿಯಲ್ಲಿ ಕಡಿಮೆ ಬೆಲೆಯಲ್ಲಿ ದೊರೆಯುತ್ತಿದ್ದ ಅತಿಥಿ ಗೃಹಗಳು ಮತ್ತು ಕುಟೀರಗಳು ಈಗ ಕಾಸ್ಟ್ಲಿಯಾಗಿದೆ.
6/ 8
ತಿರುಮಲದಲ್ಲಿ ಆಧುನಿಕ ಶೈಲಿಯಲ್ಲಿ ಅತಿಥಿ ಗೃಹಗಳನ್ನು ನಿರ್ಮಿಸಲಾಗಿದೆ. ಟಿಟಿಡಿ ಬಾಡಿಗೆಯನ್ನು 10 ಪಟ್ಟು ಹೆಚ್ಚಿಸಿದೆ. ಅಂದರೆ, 150 ರೂಪಾಯಿ ಇದ್ದದ್ದು 1700 ರೂಪಾಯಿಗೆ ಏರಿಕೆಯಾಗಿದೆ.
7/ 8
ನಾರಾಯಣಗಿರಿ ಅತಿಥಿ ಗೃಹದಲ್ಲಿ ಈ ಹಿಂದೆ ಇದ್ದ 750 ರೂಪಾಯಿ ರೂಂ ಬಾಡಿಗೆ 1700 ರೂಪಾಯಿಯಾಗಿದೆ. ಇನ್ನು, ವಿಶೇಷ ಮಾದರಿಯ ಕಾಟೇಜ್ ಬಾಡಿಗೆ 750 ರೂಪಾಯಿಯಿಂದ 2200 ರೂಪಾಯಿಯಾಗಿದೆ.
8/ 8
ತಿರುಮಲ ತಿರುಪತಿ ದೇವಾಲಯದ ಅಧಿಕೃತ ವೆಬ್ಸೈಟ್ tirupatibalaji.ap.gov.in. ಗೆ ಹೋಗಿ. ಮುಖಪುಟದಲ್ಲಿ ಆನ್ಲೈನ್ ಬುಕ್ಕಿಂಗ್ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ. ನಂತರ ಟಿಟಿಡಿ ದರ್ಶನ್ ಬುಕ್ಕಿಂಗ್ ಆನ್ಲೈನ್ ಆಯ್ಕೆ ಮಾಡಿ, ಕೇಳುವ ಇಮೇಲ್ ಐಡಿ, ಪಾಸ್ವರ್ಡ್ ನೀಡಿ ಖಾತೆಯನ್ನು ರಚಿಸಿ.